
ಬೆಂಗಳೂರು(ಜು. 20) ಕೆಲಸ ಕೊಡಿಸುವುದಾಗಿ ಯುವತಿಯರ ಸಾಗಣೆ ಮಾಡ್ತಿದ್ದವನನ್ನು ಬಂಧಿಸಲಾಗಿದೆ. ಬೆಂಗಳೂರಿನ ಸಿಸಿಬಿ ಪೊಲೀಸರು ಬಸವರಾಜ್ ಎಂಬಾತನನ್ನು ಬಂಧಿಸಿದ್ದಾರೆ.
ಕೆಲಸ ಕೊಡಿಸುವುದಾಗಿ ಯುವತಿಯರನ್ನ ಯುಎಇಗೆ ಕಳಿಸಿಕೊಡುತ್ತಿದ್ದವ ಅಂದರ್ ಆಗಿದ್ದಾನೆ. ಬಳಿಕ ಒತ್ತಾಯಪೂರ್ವಕವಾಗಿ ಯುವತಿಯರನ್ನ ಡಾನ್ಸ್ ಬಾರ್ ಗಳಲ್ಲಿ ಕೆಲಸ ಮಾಡಿಸುತ್ತಿದ್ದ.
ಈತನ ಪತ್ತೆಗೆ ವಿಶೇಷ ತಂಡವೊಂದನ್ನ ರಚಿಸಿದ್ದ ಸಿಸಿಬಿ ಬಂಧನ ಮಾಡಿದೆ. ಆರೋಪಿ ವಿರುದ್ಧ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ವಿದೇಶಿ ಕೆಲಸದ ಆಫರ್ ನಂಬಿ ಹಿಂದೆ ಹೋದ್ರೆ!
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ಯುವತಿಯರಿಗೆ ವಂಚನೆ ಮಾಡಿದ್ದಾನೆ. ಇದುವರೆಗೂ 9 ಯುವತಿಯರನ್ನ ಅಕ್ರಮವಾಗಿ ಸಾಗಿಸಿದ್ದ ಆರೋಪ ಇದೆ. ಸದ್ಯ ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಈತ ಬೇರೆ ಭಾಷೆಯ ಸಿನಿಮಾದಲ್ಲಿ ಸೈಡ್ ಆ್ಯಕ್ಟಿಂಗ್, ಹಾಗೆ ಪ್ರೊಡಕ್ಷನ್ , ಕ್ಯಾಮರಾ ಕೆಲಸ ಮಾಡ್ತಿದ್ದ ಎಂಬ ವಿಚಾರವೂ ಬಯಲಾಗಿದೆ. ಸಿನಿಮಾ ಹೀರೋಗಳ ಜೊತೆ ಪೊಟೊ ತೆಗೆದುಕೊಂಡು ಯುವತಿಯರಿಗೆ ತೋರಿಸಿ ನನಗೆ ಇವರೆಲ್ಲರ ಪರಿಚಯ ಇದೆ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ