
ಬೆಂಗಳೂರು(ಜೂ. 09) ನಾಲ್ಕು ಮದುವೆ ಸಾಲ್ದು ಅಂತ ಗರ್ಲ್ ಫ್ರೆಂಡ್ಸ್ ಮೈಂಟೇನ್ ಮಾಡ್ತಿದ್ದ ಭೂಪನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸುರೇಶ್ ಬಂಧನವಾಗಿದೆ.
ಶ್ರೀಮಂತ ವಿಚ್ಛೇದಿತ ಮಹಿಳೆಯರೇ ಇವನ ಟಾರ್ಗೆಟ್ . ಮೈಸೂರು ಮೂಲದ ಸುರೇಶ್ ಮೇಲೆ ವಿಚ್ಚೇದಿತ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ಬಣ್ಣ ಬಯಲಾಗಿದೆ.
ಮ್ಯಾಟ್ರಿಮೋನಿಯಲ್ಲಿ ವಿಚ್ಛೇದಿತ ಮಹಿಳೆ ಪರಿಚಯ ಮಾಡಿಕೊಳ್ಳುತ್ತಿದ್ದ. ಮಹಿಳೆಗೆ ಬಾಳು ಕೊಡುವುದಾಗಿ ನಂಬಿಸಿ ಲಕ್ಷ ಲಕ್ಷ ಪಡೆಯುತ್ತಿದ್ದ. ಸೈಟ್ ತೆಗೆದುಕೊಳ್ಳಬೇಕು ಎಂದು 10 ಲಕ್ಷ ಬೇಕೆಂದು ಬೇಡಿಕೆ ಇಟ್ಟಿದ್ದ ಆರೋಪಿ ಈಗ ಪೊಲೀಸರ ವಶದಲ್ಲಿದ್ದಾನೆ.
ನಟಿ ಚಂದನಾ ಆತ್ಮಹತ್ಯೆ ಹಿಂದಿನ ದೊಡ್ಡ ಕಾರಣ
ಆರೋಪಿ ಮಾತಿಗೆ ಮರುಳಾಗಿ ಹಣ ಇಲ್ಲ ಎಂದು ಒಡವೆಯನ್ನು ಮಹಿಳೆ ಕೊಟ್ಟಿದ್ದಳು. 40 ಗ್ರಾಂ ಚಿನ್ನ ನೀಡಿದ್ದಳು. ಒಡವೆ ಪಡೆದು ಫೋನ್ ರಿಸಿವ್ ಮಾಡದೆ ಸುರೇಶ್ ಎಸ್ಕೇಪ್ ಆಗಿದ್ದ. ಈ ವಿಚಾರವಾಗಿ ಬ್ಯಾಡರಹಳ್ಳಿ ಠಾಣೆಯಲ್ಲಿ ಸುರೇಶನ ವಿರುದ್ದ ದೂರು ದಾಖಲಾಗಿತ್ತು.
ಇದೇ ದೂರಿನ ಅಧಾರದಲ್ಲಿ ಆರೋಪಿಯನ್ನ ಬಂಧಿಸಿರುವ ಪೊಲೀಸರು ಮಾಹಿತಿ ಕಲೆ ಹಾಕಿದಾಗ ಒಂದೊಂದೆ ಅಂಶ ಬೆಳಕಿಗೆ ಬಂದಿದೆ. ತನಿಖೆ ವೇಳೆ ನಾಲ್ವರು ಮಹಿಳೆಯರನ್ನು ಮದುವೆ ಆಗಿರುವುದು ಹಾಗೂ ಹಲವರಿಗೆ ಇದೇ ರೀತಿ ಮೋಸ ಮಾಡಿರುವುದಾಗಿ ಹೇಳಿದ್ದಾನೆ.
ಮೈಸೂರು,ಬೆಂಗಳೂರು, ರಾಮನಗರ ಸೇರಿದಂತೆ ರಾಜ್ಯಾದ್ಯಂತ ಮೋಸ ಮಾಡಿರುವ ಶಂಕೆ ಇದ್ದು ವಿಚಾರಣೆ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ