ನಮ್ಮಲ್ಲೂ ಇದ್ದಾರೆ ನೀಚರು; ಹಣ್ಣಿನಲ್ಲಿ ವಿಷವಿಟ್ಟು 3 ಹಸುಗಳನ್ನು ಕೊಂದರು..!

Suvarna News   | Asianet News
Published : Jun 09, 2020, 04:41 PM IST
ನಮ್ಮಲ್ಲೂ ಇದ್ದಾರೆ ನೀಚರು; ಹಣ್ಣಿನಲ್ಲಿ ವಿಷವಿಟ್ಟು 3 ಹಸುಗಳನ್ನು ಕೊಂದರು..!

ಸಾರಾಂಶ

ಕೇರಳದಲ್ಲಿ ಗರ್ಭಿಣಿ ಆನೆ ಹತ್ಯೆ ಘಟನೆ ನೆನಪು ಮಾಸುವ ಮುನ್ನ ಕರ್ನಾಟಕದಲ್ಲಿ ಕೆಲವು ದುಷ್ಟರು ಅಂತಹದ್ದೇ ಕೃತ್ಯ ಎಸಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಹಣ್ಣಿನಲ್ಲಿ ವಿಷವಿಕ್ಕಿ 3 ಹಸುಗಳನ್ನು ಸಾಯಿಸಿದ್ದಾರೆ. ಇನ್ನೊಂದು ಕಡೆ 200 ಹಂದಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.  

ಚಿಕ್ಕಮಗಳೂರು(ಜೂ.09): ಮನುಷ್ಯ ಎನ್ನುವ ಪ್ರಾಣಿಗೆ ಅದೇನಾಗಿದೆಯೋ ಗೊತ್ತಿಲ್ಲ, ತನ್ನ ಸ್ವಾರ್ಥಕ್ಕಾಗಿ ಮೂಕಪ್ರಾಣಿಗಳ ಪಾಲಿಗೆ ಯಮಕಿಂಕರನಾಗಿ ಬದಲಾಗುತ್ತಿದ್ದಾನೆ. ಕೇರಳದಲ್ಲಿ ನಡೆದ ಗರ್ಭಿಣಿ ಆನೆ ಹತ್ಯೆಯ ಬಳಿಕ ದೇಶಾದ್ಯಂತ ಇದೀಗ ಅಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬರಲಾರಂಭಿಸಿದೆ.

ಹೌದು, ಸೋಮವಾರ(ಜೂ.08)ವಷ್ಟೇ ಗುವಾಹಟಿಯಲ್ಲಿ ಹಲ್ಲುಗಳು ಹಾಗು ಉಗುರುಗಳಿಗಾಗಿ ಚಿರತೆಯನ್ನು ಹತ್ಯೆ ಮಾಡಿದ್ದರು, ಇದರ ಬೆನ್ನಲ್ಲೇ ನಮ್ಮ ರಾಜ್ಯದಲ್ಲೂ ಕೆಲವು ದುಷ್ಟರು ಕ್ರೌರ್ಯದ ಪರಮಾವಧಿ ಮೆರೆದಿದ್ದಾರೆ. ತೋಟಕ್ಕೆ ದನಗಳು ನುಗ್ಗುತ್ತವೆ ಎಂದು ಮೂಕ ಪ್ರಾಣಿಗಳಿಗೆ ವಿಷವಿಕ್ಕಿದ್ದಾರೆ. ಕೇರಳದಲ್ಲಿ ಅನಾನಸ್ ಹಣ್ಣಿಗೆ ಸ್ಫೋಟಕವಿಟ್ಟು ಹತ್ಯೆ ಮಾಡಿದರೆ, ಚಿಕ್ಕಮಗಳೂರು ಜಿಲ್ಲೆಯ ಬಸರವಳ್ಳಿ ಹಲಸಿನ ಹಣ್ಣಿಗೆ ವಿಷ ಹಾಕಿ ಮೂರು ಹಸುಗಳು ಅಸುನೀಗುವಂತೆ ಮಾಡಿದ್ದಾರೆ.

ವಿಷವಿಕ್ಕಿದ ಹಲಸಿನ ಹಣ್ಣು ತಿಂದು ಕಿಟ್ಟೆಗೌಡ, ಮಧು ಎಂಬುವರಿಗೆ ಸೇರಿದ ಮೂರು ದನಗಳು ಮೃತಪಟ್ಟಿವೆ. ಇದೀಗ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತಿಹಾಸದಿಂದ ಜನ ಪಾಠ ಕಲಿಯಲ್ಲ ಎನ್ನುವುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ.

ಅಂದು ಆನೆ, ನಿನ್ನೆ ಹಸು, ಇವತ್ತು ಚಿರತೆ, ಪ್ರಾಣಿಹಿಂಸೆಯ ಪರಮಾವಧಿ

ಹಾವೇರಿಯಲ್ಲೂ ಅಮಾನವೀಯ ಘಟನೆ:

ಕೇರಳದ ಗರ್ಭಿಣಿ ಆನೆ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಹಾವೇರಿ ಜಿಲ್ಲೆಯ ಹಿರೆಕೇರೂರು ಪಟ್ಟಣದಲ್ಲಿ ನಡೆದಿದೆ. ಹಿರೆಕೇರೂರಿನ ಹಂದಿ ಜೊಗೆರ್ ಸಮುದಾಯದ ಜನರಿಗೆ ಸೇರಿದ 200 ಜೀವಂತ ಹಂದಿಗಳನ್ನು 5 ಅಡಿ ಗುಂಡಿ ತೋಡಿ ಜೀವಂತ ಸಮಾಧಿ ಮಾಡಿದ್ದಾರೆ ಪಟ್ಟಣ ಪಂಚಾಯತ್ ಅಧಿಕಾರಿಗಳು.

ಹಂದಿಗಳ ಕಾಲನ್ನು ಬಿಗಿಯಾಗಿ ಕಟ್ಟಿ 5 ಅಡಿ ಆಳದ ಗುಂಡಿಗೆ ತಳ್ಳಿದ್ದಾರೆ. ಹಂದಿಗಳು ಜೀವಂತ ಇರುವಾಗಲೇ ಮಣ್ಣು ಮುಚ್ಚಿ ಅಮಾನುಷವಾಗಿ ಕೊಂದು ಹಾಕಿದ್ದಾರೆ. ಮೇಲೆ ಮಣ್ಣು ಬೀಳುತ್ತಿದ್ದಂತೆ ಮೂಕ ಪ್ರಾಣಿಗಳು ಒದ್ದಾಡಿ, ಉಸಿರುಕಟ್ಟಿ ಸತ್ತಿದ್ದಾವೆ. ಈ ಘಟನೆಯ ಬಗ್ಗೆ ಸೂಕ್ತ ಕ್ರಮಕ್ಕಾಗಿ ಹಂದಿ ಜೊಗೆರ್ ಸಮುದಾಯದವರು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಹಾರಿ ವ್ಯಕ್ತಿ ಆತ್ಮ೧ಹತ್ಯೆ; ನೇರಳೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ವ್ಯತ್ಯಯ!
ರೇಣುಕಾಸ್ವಾಮಿ ತಂದೆ-ತಾಯಿಗೆ ಸಮನ್ಸ್, ದರ್ಶನ್‌ಗೆ ಜೈಲಲ್ಲೊಂದು ಶಾಕ್, ಕೋರ್ಟ್‌ನಲ್ಲೊಂದು ಆಘಾತ!