ಐಟಿ-ಬಿಟಿ ಸಿಟಿ ಬೆಂಗಳೂರಿನಲ್ಲಿ ಪ್ರತಿಷ್ಠಿತ ಬ್ಯಾಂಕ್ ಮಾಜಿ ಉದ್ಯೋಗಿ ಆಗಿದ್ದರೂ, ಈಕೆ ಐಟಿ ಕಂಪನಿಗಳ ಉದ್ಯೋಗಿಗಳ ಲ್ಯಾಪ್‌ಟಾಪ್ ಕದಿಯುವ ಖಯಾಲಿ ಹೊಂದಿದ್ದಳು.
ಬೆಂಗಳೂರು (ಮಾ.26): ಐಟಿ-ಬಿಟಿ ಸಿಟಿ ಎಂದೇ ಖ್ಯಾತಿಯಾಗಿರುವ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಬ್ಯಾಂಕ್ ಉದ್ಯೋಗಿ ಆಗಿದ್ದರೂ, ಈಕೆಯ ಖಯಾಲಿ ಮಾತ್ರ ಐಟಿ ಉದ್ಯೋಗಿಗಳ ಲ್ಯಾಪ್‌ಟಾಪ್‌ನ ಕಳ್ಳತನ ಮಾಡುವುದಾಗಿದೆ. ಮುಖ್ಯವಾಗಿ ಪೇಯಿಂಗ್ ಗೆಸ್ಟ್, ಹೋಟೆಲ್‌ಗಳಲ್ಲಿ ಬ್ಯಾಗ್ ಇಟ್ಟು ಊಟ ಮಾಡಲು ಹೋಗುವವರನ್ನು ನೋಡಿಕೊಂಡು ಲ್ಯಾಪ್‌ಟಾಪ್ ಕದಿಯುತ್ತಿದ್ದಳು.
ಹೌದು, ಮಾಡಲು ಪ್ರತಿಷ್ಠಿತ ಬ್ಯಾಂಕ್‌ನಲ್ಲಿ ಕೆಲಸವಿದೆ. ಆದರೆ, ಐಷಾರಾಮಿ ಜೀವನ ಮಾಡುವಷ್ಟು ಈಕೆಗೆ ಸಂಬಳವಿಲ್ಲ ಎನ್ನುವುದೇ ಈಕೆಯ ಕೊರಗು ಆಗಿತ್ತು. ಹೇಗಾದರೂ ಮಾಡಿ ಐಷಾರಾಮಿ ಜೀವನ ಮಾಡಲು ದಾರಿ ಹುಡುಕಬೇಕು ಎಂದುಕೊಂಡು ಅಡ್ಡದಾರಿಯನ್ನು ಹಿಡಿದಿದ್ದಾಳೆ. ಅದೂ ಕೂಡ ದೇಶದಲ್ಲಿ ಅತಿಹೆಚ್ಚು ಐಟಿ ಉದ್ಯೋಗಿಗಳನ್ನು ಹೊಂದಿರುವ ನಗರದಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡುವುದಕ್ಕೆ ಮುಂದಾಗಿದ್ದಾಳೆ.
ಹೆಂಡ್ತಿ ಜೊತೆ ಗಲಾಟೆ, 2 ವರ್ಷದ ಮಗಳನ್ನು ದಾರುಣವಾಗಿ ಕೊಂದ ತಂದೆ!
ಎಚ್ ಎಎಲ್ ಪೊಲೀಸರ ಕಾರ್ಯಾಚರಣೆಯಿಂದ ಚಾಲಾಕಿ ಕಳ್ಳಿಯನ್ನು ಬಂಧಿಸಲಾಗಿದೆ. ಕಿಲಾಡಿ ಲ್ಯಾಪ್‌ಟಾಪ್ ಕಳ್ಳಿಯನ್ನು ಬಂಧಿಸಿದ ಖಾಕಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈಕೆ ಹೊಟೇಲ್, ಪಿಜಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದಳು. ಹೊಟೇಲ್, ಪಿಜಿಯಲ್ಲಿರವವರು ಟಿಫಿನ್, ಊಟಕ್ಕೆ ತೆರಳಿದ ಸಂದರ್ಭದಲ್ಲಿ ಲ್ಯಾಪ್‌ಟಾಪ್ ಕದ್ದು ಎಸ್ಕೇಪ್ ಆಗುತ್ತಿದ್ದಳು. ಆರೋಪಿತೆ ಐಸಿಐಸಿಐ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ, ಈಕೆ ತನ್ನ ಕೆಲಸ ಬಿಟ್ಟು ಕಳ್ಳತನಕ್ಕೆ ಇಳಿದಿದ್ದಳು. ಕೊರಮಂಗಲ, ಇಂದಿರಾನಗರ, ಹೆಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದಳು. ಸದ್ಯ ಲ್ಯಾಪ್‌ಟಾಪ್ ಕಳ್ಳಿಯನ್ನು ಬಂಧಿಸಿರುವ ಪೊಲೀಸರು ಈಕೆಯಿಂದ ಬರೋಬ್ಬರಿ 10 ಲಕ್ಷ ರೂ. ಮೌಲ್ಯದ 24 ಲ್ಯಾಪ್‌ಟಾಪ್ ಸೀಜ್ ಮಾಡಿದ್ದಾರೆ.
ಅಕ್ಕ ತಂಗಿಯರ ಜಗಳ ಬಿಡಿಸಲು ಹೋಗಿ, ಅಕ್ಕನನ್ನೇ ಕೊಲೆಗೈದ ಸಂಬಂಧಿ: ಬೆಂಗಳೂರು (ಮಾ.26): ಮೊಬೈಲ್ ವಿಚಾರವಾಗಿ ಜಗಳವಾಡುತ್ತಿದ್ದ ತಂಗಿಯರ ಮಧ್ಯೆ ಪ್ರವೇಶಿಸಿದ ಸಂಬಂಧಿ, ಸಿಟ್ಟಿಗೆದ್ದು ಅಕ್ಕನ ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆಗೈದಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿಂಗಸಂದ್ರದ ನಿವಾಸಿ ಗೂಡಿಯಾ ದೇವಿ (42) ಮೃತ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಸಂಬಂಧಿ ರಾಜೇಶ್ ಕುಮಾರ್‌ನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಭಾನುವಾರ ದೇವಿ ಹಾಗೂ ಆಕೆಯ ತಂಗಿ ನಡೆದ ಜಗಳದಲ್ಲಿ ಮಧ್ಯೆ ಪ್ರವೇಶಿಸಿ ಅವರ ಸಂಬಂಧಿ ರಾಜೇಶ್ ಈ ಕೃತ್ಯ ಎಸಗಿದ್ದಾನೆ.
ಮೃತ ದೇವಿ ಹಾಗೂ ಸಂಬಂಧಿ ರಾಜೇಶ್ ಮೂಲತಃ ಬಿಹಾರ ರಾಜ್ಯದವರಾಗಿದ್ದು, ನಾಲ್ಕು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದರು. ಬಳಿಕ ಗಾರ್ಮೆಂಟ್ಸ್‌ನಲ್ಲಿ ದೇವಿ ಸೋದರಿಯರು ಕೆಲಸಕ್ಕೆ ಅಕ್ಕ- ಸೇರಿದರೆ, ಸ್ವಿಗ್ಗಿ ಡೆಲವರಿ ಬಾಯ್ ಆಗಿ ರಾಜೇಶ್ ದುಡಿಯುತ್ತಿದ್ದ. ಈ ಮೂವರು ಸಿಂಗಸಂದ್ರದ ಬಾಡಿಗೆ ಮನೆಯಲ್ಲಿ ಒಟ್ಟಿಗೆ ನೆಲೆಸಿದ್ದರು. ಮನೆಯಲ್ಲಿ ಸಣ್ಣಪುಟ್ಟ ವಿಚಾರವಾಗಿ ದೇವಿ ಸೋದರರು ಕಿತ್ತಾಡುತ್ತಿದ್ದರು.
ಮಗು ದತ್ತು ಪಡೆದ ಪ್ರಕರಣ: ರೀಲ್ಸ್ ರಾಣಿ ಸೋನುಗೌಡ 14 ದಿನ ನ್ಯಾಯಾಂಗ ಬಂಧನ
ಅಂತೆಯೇ ಭಾನುವಾರ ಮಧ್ಯಾಹ್ನ ಮೊಬೈಲ್ ವಿಷಯವಾಗಿ ಅವರಿಬ್ಬರು ಜಗಳ ವಾಡುತ್ತಿದ್ದರು. ಆಗ ಸಿಟ್ಟಿಗೆದ್ದ ರಾಜೇಶ್, 'ಯಾವಾಗಲೂ ಯಾಕೆ ಜಗಳವಾಡುತ್ತೀರಾ' ಎಂದು ಬೈದಿದ್ದಾನೆ. ಈ ಮಾತಿಗೆ ದೇವಿ ಆಕ್ಷೇಪಿಸಿದಾಗ ಕೆರಳಿದ ಆತ, ದೇವಿ ತಲೆಗೆ ದೊಣ್ಣೆಯಿಂದ ಬಾರಿಸಿದ್ದಾನೆ. ಆಗ ಕೆಳಗೆ ಆಕೆಯ ಕುತ್ತಿಗೆಯನ್ನು ಹಿಸುಕಿ ಉಸಿರುಗಟ್ಟಿಸಿ ಕೊಂದು ಪರಾರಿ ಆಗಿದ್ದಾನೆ. ಕೂಡಲೇ ಈ ಘಟನೆ ಬಗ್ಗೆ ಪೊಲೀಸರಿಗೆ ಮೃತಳ ಸೋದರಿ ಮಾಹಿತಿ ನೀಡಿದ್ದಾಳೆ.