ಥಾಮಸ್ ಸ್ಮಿತೆ ಎಂಬಾತ ದೂರು ನೀಡಿದ್ದಾರೆ. ಥಾಮಸ್ ಆಟೋ ಬದಲು ಬೈಕ್ ಬುಕ್ ಮಾಡಿದ್ದ, ಈ ವೇಳೆ ಆಟೋ ಚಾಲಕ ಬೈಕ್ ಸವಾರನ ಮೇಲೆ ದರ್ಪ ಮರೆದಿದ್ದು, ಪ್ರಯಾಣಿಕನನ್ನ ಕೆಳಗಿಳಿಸಿ ಬೈಕ್ ಟ್ಯಾಕ್ಸಿ ಸವಾರನಿಗೆ ಅವಾಜ್ ಹಾಕಿದ್ದಾನೆ. ಈ ಬಗ್ಗೆ ಪ್ರಶ್ನೆ ಮಾಡಿ ಪ್ರಯಾಣಿಕ ಥಾಮಸ್ ವಿಡಿಯೋ ಮಾಡಿದ್ದಾರೆ.
ಬೆಂಗಳೂರು(ಜು.25): ನಗರದಲ್ಲಿ ಮತ್ತೆ ಬೈಕ್ ಟ್ಯಾಕ್ಸಿ ಸವಾರನ ಮೇಲೆ ಆಟೋ ಚಾಲಕನ ದರ್ಪ ಮೆರೆದ ಘಟನೆ ಇಂದಿರಾನಗರದಲ್ಲಿ ಇಂದು(ಗುರುವಾರ) ನಡೆದಿದೆ. ಬೈಕ್ ಸವಾರನ ಮೇಲೆ ದರ್ಪ ಮಾಡಿದ್ರ ಬಗ್ಗೆ ಪ್ರಯಾಣಿಕ ಸೋಷಿಯಲ್ ಮೀಡಿಯಾ ಮೂಲಕ ದೂರು ನೀಡಿದ್ದಾರೆ.
ಥಾಮಸ್ ಸ್ಮಿತೆ ಎಂಬಾತ ದೂರು ನೀಡಿದ್ದಾರೆ. ಥಾಮಸ್ ಆಟೋ ಬದಲು ಬೈಕ್ ಬುಕ್ ಮಾಡಿದ್ದ, ಈ ವೇಳೆ ಆಟೋ ಚಾಲಕ ಬೈಕ್ ಸವಾರನ ಮೇಲೆ ದರ್ಪ ಮರೆದಿದ್ದು, ಪ್ರಯಾಣಿಕನನ್ನ ಕೆಳಗಿಳಿಸಿ ಬೈಕ್ ಟ್ಯಾಕ್ಸಿ ಸವಾರನಿಗೆ ಅವಾಜ್ ಹಾಕಿದ್ದಾನೆ.
ಮೈಸೂರು: ಕ್ಷುಲ್ಲಕ ಕಾರಣಕ್ಕೆ ಗಲಾಟೆ, ಪ್ರೇಮಿಗಳಿಬ್ಬೂರು ಆತ್ಮಹತ್ಯೆಗೆ ಶರಣು..!
ಈ ಬಗ್ಗೆ ಪ್ರಶ್ನೆ ಮಾಡಿ ಪ್ರಯಾಣಿಕ ಥಾಮಸ್ ವಿಡಿಯೋ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ನಾವು ಆಟೋಗಳನ್ನ ಬಿಟ್ಟು ಬೈಕ್ ಬುಕ್ ಮಾಡಿದ್ರೆ ಈ ರೀತಿ ಸಮಸ್ಯೆಗಳು ಆಗುತ್ತೆ. ಬೈಕ್ ರೈಡರ್ ಗಳು ಪ್ರತೀ ದಿನ ಈ ರೀತಿ ಸಮಸ್ಯೆ ಎದುರಿಸ್ತಾರೆ. ಇದ್ರ ಬಗ್ಗೆ ಕಠಿಣ ಕ್ರಮ ಆಗಬೇಕು ಎಂದು ದೂರು ನೀಡಿ ಆಗ್ರಹಿಸಿದ್ದಾರೆ.