ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿ ಅರ್ಬಾಜ್ ಮೊಹಮದ್ ಕೊಲೆ ಪ್ರಕರಣದಲ್ಲಿ ಮತ್ತಷ್ಟು ಮಾಹಿತಿ ಸಿಕ್ಕಿದ್ದು, ಕೊಲೆ ಆರೋಪಿಯಾಗಿರುವ ಸಾದ್, ಪೆನ್ ವೆಪನ್ ಬಳಸಿ ಅರ್ಬಾಜ್‌ನಲ್ಲಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು (ಆ.17): ಕಾಲೇಜಿನ ಸಾಂಸ್ಕ್ರತಿಕ ಕಾರ್ಯಕ್ರಮದ ವೇಳೆ ನಡೆದ ಗಲಾಟೆಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿ ಅರ್ಬಾಜ್ ಮೊಹಮದ್‌ನನ್ನು ಚುಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಕೊಲೆಯಾದ ಅರ್ಬಾಜ್‌ನ ತಾಯಿ ಸುರೈಬಾನು ದೂರಿನ ಮೆರೆಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಪ್ರಮುಖ ಆರೋಪಿ ಮೊಹಮದ್ ಸಾದ್‌ನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ಹಿಂದಿನ ಕಾರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಮೊಹಮದ್ ಸಾದ್ ಎಚ್ ಬಿ ಆರ್ ಲೇಔಟ್ ಪ್ರೊವಿನ್ಸ್ ಕಾಲೇಜಿನ ವಿದ್ಯಾರ್ಥಿ. ಮೊದಲನೇ ವರ್ಷದ ಬಿಕಾಂನಲ್ಲಿ ಸಾದ್ ಕಲಿಯುತ್ತಿದ್ದಾನೆ. ಆಗಸ್ಟ್ 11 ರಂದು ಪ್ರೊವಿನ್ಸ್ ಕಾಲೇಜಿನಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಸಾದ್ ಭಾಗಿಯಾಗಿದ್ದ. ಸಾದ್ ಡಾನ್ಸ್ ಮಾಡ್ತಿದ್ದ ವೇಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಆತನನ್ನು ಚುಡಾಯಿಸಿದ್ದರು. ನೀನು ಕಾಲೇಜಿನ ವಿದ್ಯಾರ್ಥಿಯಲ್ಲ ನೀನು ಏಕೆ ಬಂದಿದ್ದೀಯಾ ಎಂದು ಅರ್ಬಾಜ್ ಪ್ರಶ್ನೆ ಮಾಡಿದ್ದ. ಇದರಿಂದ ಸಿಟ್ಟಿಗೆದ್ದ ಸಾದ್ ಮರು ದಿನ ತನ್ನ ಜೊತೆ ಏಳು ಮಂದಿ ಕರೆದುಕೊಂಡು ಬಂದು ಹಲ್ಲೆ ಮಾಡಿದ್ದ. ಪಿಯುಸಿ ಹಾಗೂ ಡಿಗ್ರಿ ಹುಡುಗರ ನಡುವೆ ದೊಡ್ಡ ಮಾರಾಮಾರಿ ಶುರುವಾಗಿತ್ತು. ಈ ವೇಳೆ ಕಾಲೇಜು ಮ್ಯಾನೇಜ್‌ಮೆಂಟ್ ಗಮನಕ್ಕೆ ಬಂದಿದ್ದರೂ ಇದನ್ನು ಪೊಲೀಸರಿಗೆ ತಿಳಿಸಿರಲಿಲ್ಲ. ಗಲಾಟೆ ಅತಿರೇಕಕ್ಕೆ ಹೋಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅರ್ಬಾಜ್ ಚಾಕುವಿನಿಂದ ಇರಿಯಲಾಗಿತ್ತು.
ಗಂಭೀರವಾಗಿ ಗಾಯಗೊಂಡ ಅರ್ಬಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ಆರೋಪಿ ಸಾದ್ ಜೊತೆ ಆರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಶಂಕರ್ ಹೇಳಿದ್ದಾರೆ. ಕೊಲೆಯ ಬಳಿಕ, ಅರ್ಬಾಜ್ ಅವರ ತಾಯಿ ಸುರೈಬಾನು ದೂರು ನೀಡಿದ್ದರು. ಇದರ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ಈಗಾಗಲೇ ಆರು ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಮೊಮಹದ್ ಸಾದ್ ಪ್ರಮುಖ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರು; ಆ ಒಂದು ಸ್ಟೇಟಸ್...ಸತ್ತ ರೌಡಿಯ ಮುಖದಲ್ಲಿ ಕಣ್ಣು ಗುಡ್ಡೆಯೇ ಇರಲಿಲ್ಲ!
ಪೆನ್ ವೆಪನ್ ಬಳಸಿದ್ದ ಹಂತಕ: ಇದೇ ಮೊದಲ ಬಾರಿಗೆ ಹತ್ಯೆಗೆ ಪೆನ್ ವೆಪನ್ ಬಳಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಹಿಂದೆ ಯಾವ ಪ್ರಕರಣದಲ್ಲೂ ಇಂತ ಪೆನ್ ವೆಪನ್ ಬೆಂಗಳೂರಿನಲ್ಲಿ ಬಳಕೆಯಾದ ಮಾಹಿತಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹತ್ಯೆಗೆ ಬಳಸಿದ್ದ ಪೆನ್ ವೆಪನ್ ಅನ್ನು ಆರೋಪಿ ದೆಹಲಿಯಿಂದ ತರಿಸಿದ್ದ. ಇದೇ ವರ್ಷ ಫೆಬ್ರವರಿಯಲ್ಲಿ ಇದನ್ನು ಆರೋಪಿ ತರಿಸಿಕೊಂಡಿರುವ ಸಾಧ್ಯತೆ ಇದೆ. ಆನ್ ಲೈನ್ ಅಲ್ಲಿ ಪೆನ್ ವೆಪನ್ ನೋಡಿದ್ದ ಸಾದ್, ನೋಡಲು ವಿಭಿನ್ನ ಹಾಗೂ ಚೆನ್ನಾಗಿದೆ ಎನ್ನುವ ಕಾರಣಕ್ಕೆ ಬುಕ್ ಮಾಡಿದ್ದ. ಅದೇ ಪೆನ್ ವೆಪನ್ ಅರ್ಬಾಜ್‌ನಲ್ಲಿ ಇರಿದು ಸಾದ್ ಹತ್ಯೆ ಮಾಡಿದ್ದಾನೆ. ಈ ನಡುವೆ ಸುಖಾ ಸುಮ್ಮನೆ ವೆಪನ್ ತರಿಸಿಕೊಂಡಿದ್ದು ಯಾಕೆ ಎಂದು ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ನಾಲ್ಕು ಜನ ವಿಧ್ಯಾರ್ಥಿಗಳು, ಒಬ್ಬರು ಹೊರಗಿನ ಸ್ನೇಹಿತರು ಎನ್ನಲಾಗಿದೆ. ಮತ್ತೊರ್ವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೋಮವಾರ ನೀರು ವ್ಯತ್ಯಯ
ಕಾಲೇಜ್‌ನಿಂದ ಹೊರಬಂದ ಅರ್ಬಾಜ್ ಮೇಲೆ ಆರೋಪಿಗಳು ಗೂಂಡಾಗಳನ್ನು ಬಳಸಿ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಂಡ ಅರ್ಬಾಜ್ ನನ್ನು ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಅರ್ಬಾಜ್ ಕೂಡ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯತ್ನಿಸಿದನೆಂದು ವರದಿಯಾಗಿದೆ ಆದರೆ ಗೂಂಡಾಗಳು ಆತನ ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ಬಳಿಕ ಅರ್ಬಾಜ್ ರಸ್ತೆಯಲ್ಲಿ ಕುಸಿದು ಬಿದ್ದಾಗ ಆರೋಪಿ ಪರಾರಿಯಾಗಿದ್ದಾನೆ.