
ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್
ರಾಮನಗರ (ಆ.17): ಹಗಲೆಲ್ಲಾ ಕೆಲಸ ಮಾಡಿದ್ದ ಆ ಬಡ ಕುಟುಂಬ ರಾತ್ರಿ ಸುಖ ನಿದ್ದೆಯಲ್ಲಿತ್ತು. ಆದ್ರೆ ಯಮನಂತೆ ಎರಗಿದ್ದ ಲಾರಿಯೊಂದು ಇಡೀ ಕುಟುಂಬವನ್ನೇ ಛಿದ್ರಮಾಡಿದೆ. ಪುಟ್ಟ ಮಗುವಿನ ಉಸಿರನ್ನೇ ನಿಲ್ಲಿಸಿದೆ. ಬಳ್ಳಾರಿ ಜಿಲ್ಲೆ ಶಿರಗುಪ್ಪ ಮೂಲದ ಕುಟುಂಬವೊಂದು ಕೂಲಿ ಅರಸಿ ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಮಹದೇಶ್ವರ ಬಡಾವಣೆಗೆ ಬಂದಿತ್ತು. ಕಳೆದ ಕೆಲ ದಿನಗಳಿಂದ ಇದೇ ಬಡಾವಣೆಯಲ್ಲಿ ಶೆಡ್‌ನಲ್ಲಿ ವಾಸವಾಗಿದ್ರು. ಸುತ್ತಲೂ ಹಲೋಬ್ರಿಕ್ಸ್‌ನಿಂದ ನಿರ್ಮಾಣವಾಗಿದ್ದ ಶೆಡ್‌ನಲ್ಲಿ ಕುಟುಂಬ ವಾಸವಾಗಿತ್ತು . ಮಾದಯ್ಯ ಎಂಬಾತ ತನ್ನ ಪತ್ನಿ ರೇಣುಕಾ ತನ್ನ ಮೂವರು ಮಕ್ಕಳ ಜತೆ ವಾಸವಾಗಿದ್ರು . ಈ ನಡುವೆ ರೇಣುಕಾ 7 ತಿಂಗಳ ಗರ್ಭಿಣಿಯಾಗಿದ್ಲು. ಹೀಗಿರುವಾಗ್ಲೇ ನಿನ್ನೆ ದುರಂತವೊಂದು ನಡೆದು ಹೋಗಿದೆ. ನಿನ್ನೆ ಮಧ್ಯರಾತ್ರಿ ಎಲ್ರೂ ನೆಮ್ಮದಿಯಾಗಿ ಮಲಗಿರುವಾಗ್ಲೇ ಗ್ರ್ಯಾನೈಟ್ ತುಂಬಿಕೊಂಡು ಬಂದಿದ್ದ ಲಾರಿಯೊಂದು ಇವರ ಶೆಡ್‌ಗೆ ಗುದ್ದಿದೆ. ರಿವರ್ಸ್ ತೆಗೆದುಕೊಳ್ಳುವಾಗ ಶೆಡ್‌ಗೆ ಗುದ್ದಿದ್ದು, ಶೆಡ್‌ನ ಗೋಡೆ ಮಲಗಿದ್ದವರ ಮೇಲೆ ಬಿದ್ದಿದೆ. ಇದ್ರಿಂದ ಒಂದು ವರ್ಷ ಮಗು ಮೃತಪಟ್ಟಿದ್ದು, ಗರ್ಭಿಣಿ ಹೊಟ್ಟೆಗೂ ಪೆಟ್ಟು ಬಿದ್ದಿದೆ. ಹೀಗಾಗಿ ಹೊಟ್ಟೆಯಲ್ಲಿರೋ ಮಗು ಬದುಕುಳಿಯೋದೆ ಡೌಟ್ ಎನ್ನಲಾಗ್ತಿದೆ.
ಕಾರವಾರ: ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟ ಯುವತಿ ನಿಗೂಢ ಕಣ್ಮರೆ ಪ್ರಕರಣ
ಅಷ್ಟಕ್ಕೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇದೇ ಬಡಾವಣೆಯಲ್ಲಿ ಹಾಸ್ಟೆಲ್ ನಿರ್ಮಾಣವಾಗ್ತಿದ್ದು, ಆ ಕಟ್ಟಡ ಕಾಮಗಾರಿ ಕೆಲಸದಲ್ಲಿ ಮಾದಯ್ಯ ಕುಟುಂಬ ಭಾಗಿಯಾಗಿತ್ತು. ಹೀಗಾಗಿಯೇ ನಿರ್ಮಾಣ ಹಂತದ ಕಟ್ಟಡ ಬಳಿಯೇ ಶೆಡ್ ಹಾಕಿಕೊಂಡು ವಾಸವಾಗಿದ್ರು. ಆದ್ರೆ ನಿನ್ನೆ ರಾತ್ರಿ ಮಾತ್ರ ಘೋರ ದುರಂತವೇ ನಡೆದು ಹೋಗಿದೆ. ಲಾರಿಯಲ್ಲಿದ್ದ ಗ್ರ್ಯಾನೈಟ್‌ನ್ನ ಮಾದಯ್ಯನೇ ಅನ್‌ಲೋಡ್ ಮಾಡಿದ್ದ. ತಡರಾತ್ರಿಯಾಗಿದ್ರಿಂದ ಅರ್ಧ ಅನ್‌ಲೋಡ್ ಮಾಡಿ ಉಳಿದ ಮಾಲನ್ನ ಬೆಳಗ್ಗೆ ಇಳಿಸೋಣ ಅಂತಾ ಮಲಗಿದ್ದ. ಆದ್ರೆ, ಕುಡಿತದ ನಶೆಯಲ್ಲಿದ್ದ ಲಾರಿ ಚಾಲಕ ಹಾಗೂ ಕ್ಲೀನರ್ ಮಧ್ಯರಾತ್ರಿಯೇ ಲಾರಿಯನ್ನ ರಿವರ್ಸ್ ತೆಗೆದುಕೊಳ್ಳಲು ಹೋಗಿದ್ದಾರೆ. ಈ ವೇಳೆ ಶೆಡ್ ಇರೋದನ್ನ ಗಮನಿಸದೇ ಡಿಕ್ಕಿ ಹೊಡೆದಿದ್ದಾರೆ ಅಷ್ಟೇ ಇದ್ರಿಂದ ಹಾಲೋಬ್ರಿಕ್ಸ್ ಬಿದ್ದು ಒಂದು ವರ್ಷದ ಮಗು ಅಲ್ಲೇ ಪ್ರಾಣ ಬಿಟ್ಟಿದ್ರೆ, ರೇಣುಕಾ ಹೊಟ್ಟೆಯಲ್ಲಿರೋ ಮಗುವಿನ ಸ್ಥಿತಿ ಹೇಗಿದೆ ಅನ್ನೋದು ಇನ್ನೂ ಗೊತ್ತಾಗಿಲ್ಲ.
ಕುಡಿದು ವಿದ್ಯಾರ್ಥಿನಿಯನ್ನು ಎಳೆದಾಡಿ ಲೈಂಗಿಕ ಕಿರುಕುಳ: ಭಯಾನಕ ದೃಶ್ಯ ಸಿಸಿಯಲ್ಲಿ ಸೆರೆ
ಒಟ್ನಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳೋಕೆ ಅಂತಾ ದೂರದೂರಿನಿಂದ ಬಂದು ರಾಮನಗರದಲ್ಲೇ ಬದುಕು ಕಟ್ಟಿಕೊಂಡಿದ್ದ ಮಾದಯ್ಯ, ನಿರ್ಮಾಣ ಹಂತದ ಕಟ್ಟಡ ಪಕ್ಕದಲ್ಲೇ ವಾಸವಾಗಿದ್ರು. ಆದ್ರೆ ಕಟ್ಟಡಕ್ಕೆ ಗ್ರ್ಯಾನೈಟ್ ಹೊತ್ತು ತಂದಿದ್ದ ಲಾರಿ ಇವರ ಮಗುವನ್ನೇ ಬಲಿ ಪಡೆದಿದ್ದು ನಿಜಕ್ಕೂ ದುರಂತ. ಅದೇನೇ ಇರ್ಲಿ ಈ ಸಂಬಂಧ ಕೇಸ್ ದಾಖಲಿಸಿಕೊಂಡಿರೋ ಚನ್ನಪಟ್ಟಣ ಪೊಲೀಸರು ಎಸ್ಕೇಪ್ ಆಗಿರೋ ಚಾಲಕ ಹಾಗೂ ಕ್ಲೀನರ್‌ಗಾಗಿ ಬಲೆ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ