
ಬೆಂಗಳೂರು(ಜು.28): ಬೆಂಗಳೂರಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಶಂಕಿತ ಉಗ್ರರರಿಗೆ ಗನ್ ಸಪ್ಲೈ ಮಾಡಿದವನನ್ನ ಸಿಸಿಬಿ ಪತ್ತೆ ಮಾಡಿದೆ. ಜುನೈದ್ ಅಣತಿಯಂತೆ ರಬ್ಬಾನಿಗೆ ಅಪರಿಚಿತನೊಬ್ಬ ಗನ್ ನೀಡಿದ್ದ ಅಂತ ತಿಳಿದು ಬಂದಿದೆ. ಇದೀಗ ರಬ್ಬಾನಿಗೆ ಗನ್ ಸಪ್ಲೈ ಮಾಡಿದವನ ಜಾಡು ಪತ್ತೆಯಾಗಿದೆ. ಸಲ್ಮಾನ್ ಅನ್ನೋ ಶಂಕಿತನಿಂದ ಗನ್ ಸಪ್ಲೈ ಆಗಿದೆ. ಈ ಹಿಂದೆ ಸಲ್ಮಾನ್ ಫೋಕ್ಸೊ ಕೇಸಲ್ಲಿ ಜೈಲು ಸೇರಿದ್ದನು. ನೇಪಾಳ ಮೂಲಕ ಈತ ಕೂಡ ದೇಶ ಬಿಟ್ಟು ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ.
ಈ ಬೆನ್ನಲ್ಲೇ ಉಗ್ರ ನಾಸಿರ್‌ನನ್ನು ಸಿಸಿಬಿ ಪೋಲೀಸರು ಪರಪ್ಪನ ಅಗ್ರಹಾರದಿಂದ ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಎಸಿಪಿ ಕುಮಾರ್ ನೇತೃತ್ವದ ತಂಡ ಉಗ್ರ ನಾಸಿರ್ ವಶಕ್ಕೆ ಪಡೆದಿದ್ದು, ಬಿಗಿ ಭದ್ರತೆಯೊಂದಿಗೆ ಪರಪ್ಪನ ಅಗ್ರಹಾರ ಜೈಲು ಬಿಟ್ಟಿದೆ ಸಿಸಿಬಿ ಪೊಲೀಸರು. KSRP ವಾಹನದಲ್ಲಿ ಬಿಗಿ ಭದ್ರತೆಯೊಂದಿಗೆ ನಾಸಿರ್‌ನನ್ನು ಪೋಲೀಸರು ಕರೆದೋಯ್ದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಈ ಎಲ್ಇಟಿ ಉಗ್ರ ಟಿ. ನಾಸೀರ್.
ಬೆಂಗಳೂರು: ಐವರು ಶಂಕಿತ ಉಗ್ರರು 10 ದಿನ ಮತ್ತೆ ಸಿಸಿಬಿ ವಶಕ್ಕೆ
ಸಲ್ಮಾನ್ ಪಾಸ್‌ಪೋರ್ಟ್, ಫೋನ್ ಡೀಟೈಲ್ಸ್ ಪಡೆದ ಸಿಸಿಬಿ ಅಧಿಕಾರಿಗಳು ತನಿಖೆಯನ್ನ ನಡೆಸುತ್ತಿದ್ದಾರೆ.
ನಾಸೀರ್ ಜೈಲಿನಲ್ಲಿ ಫೋನ್ ಬಳಕೆ ಮಾಡಿದ ಬಗ್ಗೆ ಸುಳಿವು
ಜೈಲಿನಲ್ಲಿ ನಾಸೀರ್ ಫೋನ್ ಬಳಕೆ ಮಾಡಿದ ಬಗ್ಗೆ ಸುಳಿವು ಸಿಕ್ಕಿದೆ. ಎ1 ನಾಸೀರ್‌ನನ್ನ ವಶಕ್ಕೆ ಪಡೆದು ಐಎಸ್ಡಿಯಿಂದ ವಿಚಾರಣೆ ನಡೆಯುತ್ತಿದೆ. ನಿನ್ನೆ 3 ಗಂಟೆಗಳ ಕಾಲ ಜೈಲಿನಲ್ಲಿ ಉಗ್ರ ನಾಸೀರ್‌ನನ್ನ ವಿಚಾರಣೆ ಮಾಡಲಾಗಿದೆ. ಈ ವೇಳೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ.
ಬೆಂಗಳೂರು: ಶಂಕಿತ ಉಗ್ರರ ಬಂಧನ ಬೆನ್ನಲ್ಲೇ ಪರಪ್ಪನ ಜೈಲಲ್ಲಿ ದಿಢೀರ್ ರೇಡ್
ಐಎಸ್ಡಿ ಟೀಂ ನಿಂದ ನಾಸೀರ್ ಬಳಸಿದ್ದ ಮೊಬೈಲ್ ಫೋನ್ ಸೀಜ್ ಮಾಡಲಾಗಿದೆ. ಕಳೆದ ಕೆಲ ವರ್ಷಗಳಿಂದ ನಾಸೀರ್ ಜೈಲಿನಲ್ಲಿ ನಿತ್ಯ ಸಂಭಾಷಣೆ ನಡೆಸುತ್ತಿದ್ದನಂತೆ. ಅಕ್ರಮವಾಗಿ ಜೈಲಿನಲ್ಲಿದ್ದುಕೊಂಡು ಫೋನ್ ಬಳಸಿದ್ದಾನೆ. ಈತನ ಅಕ್ರಮಕ್ಕೆ ಹಣ ಪಡೆದುಕೊಂಡು ಜೈಲಿನ ಹಿರಿಯ ಅಧಿಕಾರಿಗಳು ಸಾಥ್ ನೀಡಿದ್ದಾರೆ ಅಂತ ತಿಳಿದು ಬಂದಿದೆ. ನಾಸೀರ್‌ಗೆ ಸಹಾಯ ಮಾಡಿರುವ ಅಧಿಕಾರಿಗಳಿಗೆ ಇದೀಗ ಸಂಕಷ್ಟ ಎದುರಾಗಿದೆ. ಉಗ್ರನ ಎಂಜಲು ಹಣ ತಿಂದ ಸಿಬ್ಬಂದಿಗಳಿಗೆ ಈಗ ನಡುಕ ಶುರುವಾಗಿದೆ.
ಐಎಸ್ಡಿಯಿಂದ ಎಲ್ಲ ಅಧಿಕಾರಿಗಳ ಹೆಸರು ಲಿಸ್ಟ್ ರೆಡಿಯಾಗಿದೆ. ಸದ್ಯದಲ್ಲೇ ಅಷ್ಟೂ ಮಂದಿಗೆ ನೊಟೀಸ್ ನೀಡಿ ವಿಚಾರಣೆಯನ್ನ ಆರಂಭಿಸಲಿದೆ. ಹಿರಿಯ ಅಧಿಕಾರಿಗಳು, ಜೈಲರ್ಸ್ & ಸಿಬ್ಬಂದಿಗಳ ಲಿಸ್ಟ್ ರೆಡಿಯಾಗಿದ್ದು ಅಷ್ಟೂ ಮಂದಿ ಸೇರಿ ನಾಸೀರ್ ನಿಂದ ಲಕ್ಷ ಲಕ್ಷ ಹಣ ಪೀಕಿದ್ದಾರೆ. ಈಗ ಹಣ ಪಡೆದಕೊಂಡ ಅಧಿಕಾರಿಗಳ ಬಂಡವಾಳ ಬಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ