ನಡುರಸ್ತೆಯಲ್ಲೇ ಕಿರಿಕ್ ಮಾಡಿಕೊಂಡ ಜೋಡಿ, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಮೂಡಲಪಾಳ್ಯದ ಸೋಮೇಶ್ವರ ಎನ್ಕೈವ್ ಮುಂದೆ ನಡೆದ ಘಟನೆ.
ಬೆಂಗಳೂರು(ಜು.28): ಪ್ರೇಮಿಗಳಿಬ್ಬರು ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಘಟನೆ ಮೂಡಲಪಾಳ್ಯದ ಸೋಮೇಶ್ವರ ಎನ್ಕೈವ್ ಮುಂದೆ ನಿನ್ನೆ(ಗುರುವಾರ) ನಡೆದಿದೆ. ಸೌಮ್ಯ(ಹೆಸರು ಬದಲಾಯಿಸಲಾಗಿದೆ) ಹಾಗೂ ಸಂತೋಷ್ ನಡುವೆ ಗಲಾಟೆ ನಡೆದಿದೆ.
ನಿನ್ನೆ ರಾತ್ರಿ ವೇಳೆ ಈ ಜೋಡಿ ನಡುರಸ್ತೆಯಲ್ಲೇ ಕಿರಿಕ್ ಮಾಡಿಕೊಂಡಿದೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಸೌಮ್ಯ ಹಾಗೂ ಸಂತೋಷ್ ಇಬ್ಬರು ಪ್ರೀತಿಸುತ್ತಿದ್ದರು ಅಂತ ಹೇಳಲಾಗುತ್ತಿದೆ.
ಮಂಡ್ಯದ ಗಂಡು- ಬೆಂಗಳೂರು ಹುಡುಗಿ ಫೇಸ್‌ಬುಕ್ ಲವ್: ತನು-ಮನ-ಧನ ಅರ್ಪಿಸಿದ ಹುಡುಗಿ ಸತ್ತೇ ಹೋದ್ಲು.!
ಇಬ್ಬರೂ ಕೆಲ ವರ್ಷಗಳ ಕಾಲ ಪಾರ್ಕ್, ಪಾರ್ಟಿ, ಸಿನಿಮಾ ಅಂತ ಸುತ್ತಾಡಿದ್ದಾರೆ. ಬಳಿಕ ಸಂತೋಷ್ ಸೌಮ್ಯಳನ್ನು ಅವೈಡ್ ಮಾಡೋದಕ್ಕೆ ಸ್ಟಾರ್ಟ್ ಮಾಡಿದ್ದನಂತೆ. ಈ ಬಗ್ಗೆ ಮಾತನಾಡಲು ಬಂದಾಗ ಇಬ್ಬರ ನಡುವೆ ಗಲಾಟೆ ನಡೆದಿದೆ. ಪ್ರಿಯಕರ ಸಂತೋಷ್ ಸೌಮ್ಯ ಮೇಲೆ ಹಲ್ಲೆ ಮಾಡಿದ್ರೇ, ಆತನ ಮೇಲೆ ಪ್ರಿಯತಮೆ ಸೌಮ್ಯ ಹಲ್ಲೆ ಮಾಡಿದ್ದಾರೆ.
ಇಬ್ಬರು ಹೊಡೆದಾಡಿಕೊಳ್ಳುವ ದೃಶ್ಯವನ್ನ ಸ್ಥಳೀಯರು ಸೆರೆ ಹಿಡಿದಿದ್ದಾರೆ. ಈ ಸಂಬಂಧ ಗೋವಿಂದರಾಜ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.