* ಕಳೆದ ವರ್ಷ ನಗರದಲ್ಲಿ ಅಪರಾಧ ಪ್ರಮಾಣ ಇಳಿಕೆ
* ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ
* ರೌಡಿಸಂ ನಿಯಂತ್ರಣ
ಬೆಂಗಳೂರು(ಜ.08): ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ 2021ನೇ ಸಾಲಿನಲ್ಲಿ ನಗರದಲ್ಲಿ ಅಪರಾಧ(Crime) ಪ್ರಕರಣಗಳು ಕಡಿಮೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್(Kamal Pant) ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಇತರೆ ನಗರಗಳ ಅಪರಾಧ ಪ್ರಕರಣಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು(Bengaluru) ಸುರಕ್ಷಿತ ನಗರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಟ ಪುನೀತ್ ರಾಜ್‌ಕುಮಾರ್(Puneeth Rajkumar) ಅವರ ಅಂತ್ಯಸಂಸ್ಕಾರದ(Funeral) ವೇಳೆ ಲಕ್ಷಾಂತರ ಅಭಿಮಾನಿಗಳು ಬಂದಿದ್ದರು. ಈ ವೇಳೆ ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು(Police) ಉತ್ತಮವಾಗಿ ಕಾರ್ಯ ನಿರ್ವಹಿಸಿದರು. ಅಭಿಮಾನಿಗಳು ಹಾಗೂ ಪುನೀತ್ ರಾಜ್‌ಕುಮಾರ್ ಅವರ ಕುಟುಂಬದ ಸಹಕಾರದಿಂದ ಆ ಸಂದರ್ಭವನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಯಿತು ಎಂದು ಹೇಳಿದರು.
undefined
Brutal Murder: ನಡುರಸ್ತೆಯಲ್ಲೇ ರಿಯಲ್ ಎಸ್ಟೇಟ್ ಏಜೆಂಟ್ ಬರ್ಬರ ಹತ್ಯೆ
ರೌಡಿಸಂ ನಿಯಂತ್ರಣ:
ನಗರದಲ್ಲಿ ಯಾವುದೇ ರೌಡಿ ಗುಂಪುಗಳಿಲ್ಲ. ರೌಡಿಗಳನ್ನು ಸದೆಬಡಿಯಲು ಪ್ರತಿ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. 2021ರಲ್ಲಿ 28 ರೌಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜೈಲಿನಲ್ಲಿದ್ದುಕೊಂಡೇ ಕ್ರೈಂ ಚಟುವಟಿಕೆ(Crime Activity) ನಡೆಸುತ್ತಿದ್ದ 40 ರೌಡಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸಿರುವುದಾಗಿ ಕಮಲ್ ಪಂತ್ ಮಾಹಿತಿ ನೀಡಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸುಬ್ರಮಣ್ಯೇಶ್ವರ ರಾವ್, ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಡಿಸಿಪಿಗಳಾದ ಸಂತೋಷ ಬಾಬು, ಬಿ.ಎಸ್.ಅಂಗಡಿ ಉಪಸ್ಥಿತರಿದ್ದರು.
291 ಮಹಿಳೆಯರು ನಾಪತ್ತೆ!
ನಗರದಲ್ಲಿ 2021ನೇ ಸಾಲಿನಲ್ಲಿ ನಗರದಲ್ಲಿ 2,363 ಮಹಿಳೆಯರ(Woman) ನಾಪತ್ತೆ ಪ್ರಕರಣ ದಾಖಲಾಗಿದ್ದು, 2,072 ಪ್ರಕರಣ ಪತ್ತೆ ಹಚ್ಚಲಾಗಿದೆ. ಉಳಿದ 291 ಮಹಿಳೆಯರ ಪತ್ತೆಯಾಗಿಲ್ಲ. ಇದೇ ಅವಧಿಯಲ್ಲಿ 1,490 ಪುರುಷರ ನಾಪತ್ತೆ ಪ್ರಕರಣ ದಾಖಲಾಗಿದ್ದು, 1,127 ಪ್ರಕರಣ ಪತ್ತೆಯಾಗಿದೆ. 2021ನೇ ಸಾಲಿನಲ್ಲಿ ಒಂದೇ ಒಂದು ಬಾಲಕ-ಬಾಲಕಿ ನಾಪತ್ತೆ ಪ್ರಕರಣ ದಾಖಲಾಗಿಲ್ಲ.
167 ಅಪಹರಣ ಪ್ರಕರಣ ಪತ್ತೆಯಾಗಿಲ್ಲ
ನಗರದಲ್ಲಿ 2021ನೇ ಸಾಲಿನಲ್ಲಿ ದಾಖಲಾಗಿದ್ದ 825 ಅಪಹರಣ(Kidnap) ಪ್ರಕರಣಗಳಲ್ಲಿ 658 ಪ್ರಕರಣ ಭೇದಿಸಲಾಗಿದೆ. 2021ನೇ ಸಾಲಿನಲ್ಲಿ ನಗರದಲ್ಲಿ 115 ಅತ್ಯಾಚಾರ(Rape) ಪ್ರಕರಣಗಳು ದಾಖಲಾಗಿವೆ. 446 ಲೈಂಗಿಕ ದೌರ್ಜನ್ಯ, 25 ವರಕ್ಷಿಣ ಕಿರುಕುಳ(Dowry Harrashment) ಸಾವು, ಪತಿ ಮತ್ತು ಸಂಬಂಧಿಕರ ಹಿಂಸೆಯಿಂದ 420 ಮಹಿಳೆಯರ ಸಾವು ಪ್ರಕರಣಗಳು ದಾಖಲಾಗಿವೆ.
Rape on woman:ಬುದ್ಧಿಮಾಂದ್ಯ ಮಹಿಳೆಗೆ ಮದ್ಯ ಕುಡಿಸಿ ಹಾಡಹಗಲೇ ಎರಗಿದ ಕಿರಾತಕರು
ಕಳೆದ ವರ್ಷ 6,423 ಸೈಬರ್ ಪ್ರಕರಣ
ನಗರದಲ್ಲಿ ಕಳೆದ ವರ್ಷ 6,423 ಸೈಬರ್ ಅಪರಾಧ(Cyber Crime) ಪ್ರಕರಣ ದಾಖಲಾಗಿವೆ. ಈ ಪೈಕಿ 787 ಪ್ರಕರಣ ಪತ್ತೆ ಹಚ್ಚಿ ಮುಕ್ತಾಯಗೊಳಿಸಲಾಗಿದೆ. ಉಳಿದಂತೆ 5,479 ಪ್ರಕರಣ ತನಿಖೆಯ ವಿವಿಧ ಹಂತಗಳಲ್ಲಿವೆ. 2019ನೇ ಸಾಲಿನಲ್ಲಿ 10,553 ಹಾಗೂ 2020ನೇ ಸಾಲಿನಲ್ಲಿ 8,892 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದವು.
ಅಪರಾಧ 2019 2020 2021
ಪ್ರಕರಣ ಪತ್ತೆ ಪ್ರಕರಣ ಪತ್ತೆ ಪ್ರಕರಣ ಪತ್ತೆ
ಕೊಲೆ 199 195 173 169 148 146
ಸುಲಿಗೆ 39 35 30 29 35 34
ದರೋಡೆ 506 405 378 323 365 273
ಸರಗಳವು 225 214 152 145 165 130
ಮನೆಗಳವು(ಹಗಲು) 324 176 130 84 135 49
ಮನೆಗಳವು(ರಾತ್ರಿ) 950 394 780 381 653 224
ವಾಹನ ಕಳವು 1551 454 749 242 1170 343