Bulli Bai App : ನಾನು ಮಾಡಿದ್ದು ಸರಿಯಾಗೇ ಇತ್ತು ಎಂದ ಬುಲ್ಲಿ ಬಾಯಿ  ರೂವಾರಿ!

By Suvarna NewsFirst Published Jan 8, 2022, 3:37 AM IST
Highlights

*  ಪಶ್ಚಾತ್ತಾಪವಿಲ್ಲ, ನಾನು ಮಾಡಿದ್ದು ಸರಿ: ಬುಲ್ಲಿ ಬಾಯಿ ರೂವಾರಿ
* ಮುಸ್ಲಿಂ ಮಹಿಳೆಯರನ್ನು ಹರಾಜಿಗೆ ಇಡುತ್ತಿದ್ದ ಬುಲ್ಲಿ ಬಾಯಿ ಆಪ್ ಪ್ರಕರಣ
*  ಅಸ್ಸಾಂನಿಂದ ಅಸಲಿ ಆರೋಪಿಯನ್ನು ಕರೆದಂತ ದೆಹಲಿ ಪೊಲೀಸರು

ನವದೆಹಲಿ (ಜ. 08) ಪ್ರತಿಷ್ಠಿತ ಮುಸ್ಲಿಂ (Muslim) ಮಹಿಳೆಯರನ್ನು (Woman) ಅವಹೇಳನಕಾರಿಯಾಗಿ ಚಿತ್ರಿಸಿ ಹರಾಜಿಗೆ ಇಡುತ್ತಿದ್ದ ‘ಬುಲ್ಲಿ ಬಾಯಿ’ (Bulli Bai App) ಆ್ಯಪ್‌ನ ಪ್ರಮುಖ ಆರೋಪಿ ನೀರಜ್‌ ಬಿಷ್ಣೋಯಿ ಪೊಲೀಸರ ವಿಚಾರಣೆ ವೇಳೆ, ತಾನು ಮಾಡಿದ್ದು ಸರಿ ಇತ್ತು, ಈ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. 

ಭೋಪಾಲ್‌ನಲ್ಲಿ ಎರಡನೇ ವರ್ಷದ ಬಿಟೆಕ್‌ ಓದುತ್ತಿರುವ ಬಿಷ್ಣೋಯಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಈತನನ್ನು 7 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ‘ನಾನು ಮಾಡಿರುವ ಕೆಲಸದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ನಾನು ಮಾಡಿದ್ದು ಸರಿ ಇತ್ತು’ ಎಂದು ಪೊಲೀಸರಿಗೆ ಹೇಳಿದ್ದಾನೆ. ಬಂಧನದ ನಂತರ ಈತನನ್ನು ಭೋಪಾಲ್‌ ಇಂಜಿನಿಯರಿಂಗ್‌ ಕಾಲೇಜು ಅಮಾನತ್ತು ಮಾಡಿದೆ.

ಮುಸ್ಲಿಂ (Muslim) ಮಹಿಳೆಯರನ್ನು ಅವಹೇಳನಕಾರಿ ಚಿತ್ರಿಸಿ ಹರಾಜಿಗೆ ಇಡುತ್ತಿದ್ದ ‘ಬುಲ್ಲಿ ಬಾಯಿ’ ಆ್ಯಪ್‌ ಪ್ರಕರಣ ತಿರುವುಗಳ ಮೇಲೆ ತಿರುವು ಪಡೆದುಕೊಳ್ಳುತ್ತಿದೆ.  ದೇಶದ ವಿವಿಧ ಮೂಲೆಗಳಲ್ಲಿ ಇದರ ಮೂಲ ಪತ್ತೆಯಾಗುತ್ತಲೇ ಇದೆ.

ಆಪ್ ಹಿಂದಿನ ಮಾಸ್ಟರ್ ಮೈಂಡ್ ನ್ನು ಅಸ್ಸಾಂನಿಂದ (Assam) ಬಂಧಿಸಲಾಗಿದೆ ಎಂದು ದೆಹಲಿ (Newdelhi) ಪೊಲೀಸರು (Police) ತಿಳಿಸಿದ್ದರು. ಮುಖ್ಯ ಸಂಚುಕೋರ ಮತ್ತು  ಅಪ್ಲಿಕೇಶನ್‌ನ  ಹ್ಯಾಂಡಲ್ ಮಾಡುತ್ತಿದ್ದ  ನೀರಜ್  ಬಿಷ್ಣೋಯ್  ಎಂಬಾತನ ಬಂಧಿಸಿ ಕರೆತಂದಿದ್ದರು..  ಇಂಟಲಿಜನ್ಸ್ ವಿಭಾಗದ ಡೆಪ್ಯೂಟಿ ಕಮಿಷನರ್   ಕೆಪಿಎಸ್ ಮಲ್ಹೋತ್ರಾ ಮಾಹಿತಿ  ನೀಡಿದ್ದಾರೆ. 21 ವರ್ಷದ ಬಿಷ್ಣೋಯ್ ಭೋಪಾಲ್ ಮೂಲದ ಸಂಸ್ಥೆಯಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ.

Bulli Bai row: ಗಿಟ್‌ಹಬ್‌ನಲ್ಲಿ ಮುಸ್ಲಿಂ ಮಹಿಳೆಯರ ಹರಾಜು: ಬೆಂಗಳೂರಲ್ಲಿ ಯುವಕ ವಶಕ್ಕೆ!

ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ದನಿಯೆತ್ತಿರುವ ಪ್ರಮುಖ ಮುಸ್ಲಿಂ ಮಹಿಳಾ ಪತ್ರಕರ್ತರು, ವಕೀಲರು ಮತ್ತು ಹೋರಾಟಗಾರರನ್ನು ಅಸಹ್ಯಕರ ರೀತಿಯಲ್ಲಿ ಪ್ರೊಜೆಕ್ಟ್ ಮಾಡಿ ಮಾರಾಟಕ್ಕೆ ಇದ್ದಾರೆ ಎಂಬಂತೆ ಜಾಹೀರಾತು ಮಾಡುತ್ತಿದ್ದ.  ಈ ಪ್ರಕರಣದಲ್ಲಿ ಇದು ನಾಲ್ಕನೇ ಬಂಧನವಾಗಿದೆ. 

ಮುಂಬೈ ಪೊಲೀಸರ ಸೈಬರ್ ಸೆಲ್ ಈ ಹಿಂದೆ ಮೂವರನ್ನು ಬಂಧಿಸಿತ್ತು. 21 ವರ್ಷದ ವಿದ್ಯಾರ್ಥಿ ಮಯಾಂಕ್ ರಾವಲ್, 19 ವರ್ಷದ ಶ್ವೇತಾ ಸಿಂಗ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ ಝಾ ರನ್ನು ಬಂಧಿಸಲಾಗಿದ್ದು ಶ್ವೇತಾ ಸಿಂಗ್ ಮಾಸ್ಟರ್ ಮೈಂಡ್ ಎಂದು ಭಾವಿಸಲಾಗಿತ್ತು.  ತಮ್ಮನ್ನು ಹರಾಜಿಗೆ  ಇಟ್ಟಿದ್ದನ್ನು ಕಂಡ ಮುಸ್ಲಿಂ ಮಹಿಳೆಯರು ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. 

ಮುಂಬೈ, ಅಸ್ಸಾಂ, ದೆಹಲಿ, ಬೆಂಗಳೂರು ಹೀಗೆ ದೇಶದ ಎಲ್ಲ ಮೂಲೆಗಳಲ್ಲಿಯೂ ಆಪ್ ಗೆ ಸಂಬಂಧಿಸಿದ ವ್ಯಕ್ತಿಗಳ ಬಂಧನವಾಗುತ್ತಿದೆ. ಬಂಧಿತೆ  ಶ್ವೇತಾ ಪೋಷಕರನ್ನು ಕಳೆದುಕೊಂಡಿದ್ದಳು. ಶ್ವೇತಾ ತಂದೆಯ ಕಳೆದ ವರ್ಷ ಕೋವಿಡ್‌ ಸೋಂಕಿನಿಂದ ಸಾವಿಗೀಡಾಗಿದ್ದರು. ತಂದೆಯ ಸಾವಿಗೂ ಮೊದಲೇ ಶ್ವೇತಾಳ ತಾಯಿ ಕ್ಯಾನ್ಸರ್‌ಗೆ ಬಲಿಯಾಗಿದ್ದರು. ಈಕೆಗೆ ಒಬ್ಬಳು ಹಿರಿಯ ಸಹೋದರಿ ಇದ್ದು, ಆಕೆ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾಳೆ. ಹಾಗೆಯೇ ಓರ್ವ ಕಿರಿಯ ಸಹೋದರಿ ಹಾಗೂ ಸಹೋದರ ಇದ್ದು ಇಬ್ಬರು ಶಿಕ್ಷಣ ಪಡೆಯುತ್ತಿದ್ದಾರೆ. ಇತ್ತ ಶ್ವೇತಾ ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆ ಬರೆಯಲು ಸಿದ್ಧಳಾಗುತ್ತಿದ್ದಳು. 

 

click me!