
ಬೆಂಗಳೂರು(ಜ. 08) ಶುಕ್ರವಾರ ತಡರಾತ್ರಿ ನೈಸ್ ರಸ್ತೆಯಲ್ಲಿ ಭೀಕರ ಅಪಘಾತ (Road Accident) ಸಂಭವಿಸಿದ್ದು ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ್ದಾರೆ. ಕುಮಾರಸ್ವಾಮಿ ಲೇಔಟ್ ಅಪಾರ್ಟ್‌ಮೆಂಟ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು (Death) ದುರ್ಮರಣಕ್ಕೀಡಾಗಿದ್ದಾರೆ.
ಬನ್ನೇರುಘಟ್ಟ ಕಡೆಯಿಂದ ತುಮಕೂರು ಕಡೆ ತೆರಳುತ್ತಿದ್ದ ಕಾರಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾನ್ನಪ್ಪಿರುವುದು ಖಚಿತವಾಗಿದೆ. ಘೋರ ಅಪಘಾತದ ಪರಿಣಾಮ ನೈಸ್ ರಸ್ತೆಯಲ್ಲಿ ಸುಮಾರು ಎಂಟು ಕಿ.ಮೀ.ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು.ಇಬ್ಬರು ಪುರುಷರು ಇಬ್ಬರು ಮಹಿಳೆಯರು (Woman) ಒಟ್ಟು ನಾಲ್ಕು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನುವುದು ಆರಂಭಿಕ ಮಾಹಿತಿ.
TV Journalist Arrest: ಸುದ್ದಿ ಪ್ರಸಾರ ತಡೆಗೆ ಹಣಕ್ಕೆ ಬೇಡಿಕೆ, ಖಾಸಗಿ ವಾಹಿನಿ ಸಿಬ್ಬಂದಿ ಅರೆಸ್ಟ್
ಬಳ್ಳಾರಿ ಜಿಲ್ಲೆಯ ಘೋರ ಅಪಘಾತ: ರಸ್ತೆ ಪಕ್ಕದಲ್ಲಿ ಕೆಟ್ಟು ನಿಂತಿದ್ದ ಇಟ್ಟಿಗೆ ತುಂಬಿದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ(Collision) ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ(Death) ಬಳ್ಳಾರಿಯಿಂದ ವರದಿಯಾಗಿತ್ತು. ತಾಲೂಕಿನ ಬಾದನಹಟ್ಟಿ ಗ್ರಾಮದ ಸಪ್ತಗಿರಿ ಕ್ಯಾಂಪ್ ಬಳಿ ಈ ಘಟನೆ ಜರುಗಿದೆ. ಮೃತಪಟ್ಟವರನ್ನು ಬಾದನಹಟ್ಟಿ ಗ್ರಾಮ ನಿವಾಸಿಗಳಾದ ಗೊಲ್ಲರ ಗೋಪಾಲ(28), ಕರಿ ಬ್ಯಾಡರ ಕರಿಬಸಪ್ಪ(32), ಕರಿಬ್ಯಾಡರ ದೊಡ್ಡಬಸಪ್ಪ(30) ಎಂದು ಗುರುತಿಸಲಾಗಿತ್ತು. ಸಿದ್ದಮ್ಮನಹಳ್ಳಿ ರಸ್ತೆ ಪಕ್ಕದಲ್ಲಿರುವ ತಮ್ಮ ಜಮೀನಿನಿಂದ ಗ್ರಾಮಕ್ಕೆ ವಾಪಾಸ್ ಮರಳುವಾಗ ಈ ಘಟನೆ ಜರುಗಿತ್ತು
ಬೆಳ್ಳಂಬೆಳಗ್ಗೆ ಅಪಘಾತ: 6 ಮಂದಿಗೆ ಗಂಭೀರ ಗಾಯ: ಚಿಂತಾಮಣಿ( ತಾಲೂಕಿನ ಬೆಂಗಳೂರು ಕಡಪ ಹೈವೇ ರಸ್ತೆಯ ಐಮರೆಡ್ಡಿಹಳ್ಳಿ ಸಮೀಪ ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಸ್ಕಾರ್ಪಿಯೋ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಗಂಭೀರ ಗಾಯಗೊಂಡಿದ್ದರು.
ತಲೆ ಮೇಲೆ ಟಿಪ್ಪರ್ ಚಕ್ರ ಉರುಳಿ ಬಿಇ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು: ಬೆಂಗಳೂರು: ಟಿಪ್ಪರ್ ಡಿಕ್ಕಿಯಾಗಿ ದ್ವಿ ಚಕ್ರ ವಾಹನದ ಹಿಂದೆ ಕುಳಿತಿದ್ದ ವಿದ್ಯಾರ್ಥಿನಿ(Student) ತಲೆ ಮೇಲೆ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಟ್ಟಿದ್ದಳು. ಬೆಂಗಳೂರು ಅಶೋಕನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.
ಆರ್.ಎಸ್.ಪಾಳ್ಯ ನಿವಾಸಿ ಸಂಜನಾ ಪ್ರಿಯಾ (21) ಮೃತ ವಿದ್ಯಾರ್ಥಿನಿ. ದ್ವಿಚಕ್ರ ವಾಹನ ಚಾಲಕ ವಿನಯ್‌ಕುಮಾರ್(24) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಂಜನಾ ಪ್ರಿಯಾ ನಗರದ ಖಾಸಗಿ ಎಂಜಿನಿಯರ್ ಕಾಲೇಜಿನಲ್ಲಿ ಅಂತಿಮ ಬಿಇ ವ್ಯಾಸಂಗ ಮಾಡುತ್ತಿದ್ದರು. ಸೋದರ ಸಂಬಂಧಿ ವಿನಯ್‌ಕುಮಾರ್ ಜತೆಗೆ ದ್ವಿಚಕ್ರ ವಾಹನದಲ್ಲಿ ಜಯ ನಗರದ ಸಂಬಂಧಿಕರ ಮನೆಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ