ಬೆಂಗಳೂರು (ಜು.10): ಗಾಂಜಾ ದಂಧೆಯಲ್ಲಿ ಸಂಪಾದಿಸಿದ್ದ ಹಣದಲ್ಲಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪುಷ್ಪಾಪುರದ ಕುಖ್ಯಾತ ಗಾಂಜಾ ಪೂರೈಕೆದಾರ ಜಿ.ಮಲ್ಲೇಶ್ ಎಂಬಾತ ಖರೀದಿಸಿದ್ದ .50 ಲಕ್ಷ ಮೌಲ್ಯದ 8 ಎಕರೆ ಕೃಷಿ ಭೂಮಿಯನ್ನು ಸಿಸಿಬಿ ಮುಟ್ಟುಗೋಲು ಹಾಕಿಕೊಂಡಿದೆ.
ಬೆಂಗಳೂರಿನ ಪೊಲೀಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಡ್ರಗ್‌್ಸ ಸರಬರಾಜುದಾರನ ಆಸ್ತಿ ಮುಟ್ಟುಗೋಲು ಹಾಕಿದ ಪ್ರಕರಣ ಇದಾಗಿದೆ. ನಾಲ್ಕು ವರ್ಷದ ಹಿಂದೆ ಮಲ್ಲೇಶ್ ವಿರುದ್ಧ ದಾಖಲಾಗಿದ್ದ ಡ್ರಗ್‌್ಸ ದಂಧೆ ಪ್ರಕರಣದ ತನಿಖೆ ವೇಳೆ ಆಸ್ತಿ ಸಂಪಾದನೆ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಇನ್‌ಸ್ಪೆಕ್ಟರ್ ಬಿ.ಎಸ್.ಅಶೋಕ್ ವರದಿ ಆಧರಿಸಿ ಹನೂರು ತಾಲೂಕಿನ ಶಾಗ್ಯ ಗ್ರಾಮದಲ್ಲಿ ಮಲ್ಲೇಶ್‌ಗೆ ಸೇರಿದ ಭೂಮಿ ಜಪ್ತಿ ಮಾಡಲಾಗಿದೆ. ಇದೇ ರೀತಿ 2021ರಲ್ಲಿ ಬಿಹಾರ ಮೂಲದ ಪೆಡ್ಲರ್‌ನಿಗೆ ಸೇರಿದ ಜಿಗಣಿ ಬಳಿ .1 ಕೋಟಿ ಮೌಲ್ಯದ ಫ್ಲ್ಯಾಟನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು.
Bengaluru News: ಡ್ರಗ್ಸ್ ದಂಧೆ: ನೈಜೀರಿಯಾದ ಖ್ಯಾತ ಯುಟ್ಯೂಬರ್ ಸೇರಿ ಇಬ್ಬರ
ಊರಲ್ಲಿ ಗೂಡಂಗಡಿ: ಮಲ್ಲೇಶ್ ಎರಡು ದಶಕಗಳಿಂದ ಬೆಂಗಳೂರು ಹಾಗೂ ಮೈಸೂರು ಭಾಗದಲ್ಲಿ ಗಾಂಜಾ ಪೂರೈಸುತ್ತಿದ್ದು, ಆತನ ವಿರುದ್ಧ ಬೆಂಗಳೂರಲ್ಲಿ 7 ಪ್ರಕರಣಗಳು ದಾಖಲಾಗಿವೆ. ಕುಟುಂಬದೊಂದಿಗೆ ಪುಷ್ಪಾವರ ಗ್ರಾಮದಲ್ಲಿದ್ದು, ಪುಟ್ಟಗೂಡಂಗಡಿ ಇಟ್ಟುಕೊಂಡಿದ್ದ. ಗಾಂಜಾ ಪೂರೈಕೆಯಿಂದ ವಾರ್ಷಿಕ ಕೋಟಿಗಟ್ಟಲೇ ವಹಿವಾಟು ನಡೆಸಿದ್ದಾನೆ ಎಂದು ಪೊಲೀಸರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಮೊದಲು ಚಾಮರಾಜನಗರ-ತಮಿಳುನಾಡಿಗೆ ಹೊಂದಿಕೊಂಡಿರುವ ಸತ್ಯಮಂಗಲ ಕಾಡಿನಲ್ಲಿ ಅಕ್ರಮವಾಗಿ ಗಾಂಜಾ ಬೇಸಾಯ ಮಾಡಿ ಪೆಡ್ಲರ್‌ಗಳಿಗೆ ಪೂರೈಸುತ್ತಿದ್ದ. ತಮಿಳುನಾಡು, ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯಗಳಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ, ಬೆಂಗಳೂರು ಹಾಗೂ ಮೈಸೂರು ನಗರಗಳ ಪೆಡ್ಲರ್‌ಗಳಿಗೆ ದುಬಾರಿ ಬೆಲೆಗೆ ಆತ ಮಾರುತ್ತಿದ್ದ. ಈ ದಂಧೆಗೆ ತನ್ನೂರಿನಲ್ಲೇ ನಾಲ್ಕೈದು ಮಂದಿಯನ್ನು ಸೇರಿಸಿ ಮಲ್ಲೇಶ ತಂಡ ಕಟ್ಟಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
Kolar News: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಚಾಕೊಲೇಟ್ ಮಾರಾಟ
ಪತ್ನಿ, ಮಗನ ಹೆಸರಲ್ಲಿ ಜಮೀನು : ಬೆಂಗಳೂರಿನ ಕೋಣನಕುಂಟೆ ಸಮೀಪ ಫ್ಲ್ಯಾಟ್‌ವೊಂದನ್ನು ಬಾಡಿಗೆ ಪಡೆದ ಮಲ್ಲೇಶ್ ಅಲ್ಲಿಯೇ ಗಾಂಜಾ ಸಂಗ್ರಹದ ಗೋದಾಮು ಮಾಡಿದ್ದ. 2018ರಲ್ಲಿ ಮಲ್ಲೇಶ್ ತಂಡದ ಮೇಲೆ ಕೋರಮಂಗಲ ಹಾಗೂ ಕೋಣನಕುಂಟೆ ಠಾಣೆಗಳಲ್ಲಿ 4 ಪ್ರಕರಣಗಳು ದಾಖಲಾದ ನಂತರ ಭಯದಿಂದ ಬೆಂಗಳೂರು ತೊರೆದು ಆತ ಊರಿನಲ್ಲೇ ನೆಲೆ ನಿಂತ. ಇತ್ತೀಚೆಗೆ ಗಾಂಜಾ ಪೂರೈಕೆ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಮುಖ್ಯಸ್ಥ ರಮಣ ಗುಪ್ತ ಅವರು, ಮಲ್ಲೇಶ್ ವಿರುದ್ಧ ಪ್ರಕರಣಗಳ ತನಿಖೆಗೆ ಡಿಸಿಪಿ ಬಿ.ಎಸ್.ಅಂಗಡಿ ಮಾರ್ಗದರ್ಶನಲ್ಲಿ ಎಸಿಪಿ ರಾಮಚಂದ್ರ ಹಾಗೂ ಇನ್‌ಸ್ಪೆಕ್ಟರ್ ಬಿ.ಎಸ್.ಅಶೋಕ್ ನೇತೃತ್ವದ ತಂಡಕ್ಕೆ ತನಿಖೆಗೆ ವಹಿಸಿದರು.
ತನಿಖೆ ಕೈಗೆತ್ತಿಕೊಂಡ ಸಿಸಿಬಿ ಪೊಲೀಸರಿಗೆ ಮಲ್ಲೇಶ್ ತನ್ನೂರಿನ ಪಕ್ಕದ ಶಾಗ್ಯ ಗ್ರಾಮದಲ್ಲಿ 2013ರಲ್ಲಿ ತನ್ನ ಪತ್ನಿ ಮತ್ತು ಮಗನ ಹೆಸರಿನಲ್ಲಿ ಮಲ್ಲೇಶ್ ಜಮೀನು ಖರೀದಿಸಿರುವುದು ತಿಳಿಯಿತು. ಈ ಜಮೀನಿನ ಕುರಿತು ಸಿಸಿಬಿ ಬರೆದ ಪತ್ರದ ಮೇರೆಗೆ ಹನೂರು ತಾಲೂಕು ತಹಸೀಲ್ದಾರ್ ಅವರು, ಶಾಗ್ಯ ಗ್ರಾಮದಲ್ಲಿ 8 ಎಕರೆ ಭೂಮಿಯನ್ನು ಮಲ್ಲೇಶ್ ಖರೀದಿಸಿದ್ದಾರೆ. ಕೃಷಿಗೆ ಯೋಗ್ಯ ಭೂಮಿಯಾಗಿದೆ. ಆದರೆ ಬೇಸಾಯ ಮಾಡದೆ ಭೂಮಿಯನ್ನು ಪಾಳು ಬಿಟ್ಟಿದ್ದಾರೆ ಎಂದು ವರದಿ ಸಲ್ಲಿಸಿದರು. ಈ ವರದಿಯನ್ನು ಸಮಕ್ಷಮ ಪ್ರಾಧಿಕಾರ ಅನುಮೋದಿಸಿ ಮಲ್ಲೇಶ್ ಆಸ್ತಿ ಮುಟ್ಟುಗೋಲಿಗೆ ಆದೇಶಿಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬ್ಯಾಂಕ್‌ನಲ್ಲಿ .2 ಕೋಟಿ!; ಪುಟ್ಟಗೂಡಂಗಡಿಯಲ್ಲಿ ಮಾಸಿಕ .3 ಸಾವಿರ ಸಂಪಾದಿಸುವ ಮಲ್ಲೇಶ, ತನ್ನ ಬ್ಯಾಂಕ್ ಖಾತೆಯಲ್ಲಿ ವಾರ್ಷಿಕ .2 ಕೋಟಿ ವಹಿವಾಟು ನಡೆಸಿದ್ದಾನೆ. ಈಗ ಆತನ 5 ಬ್ಯಾಂಕ್ ಖಾತೆಗಳಲ್ಲಿ .3 ಲಕ್ಷವನ್ನು ಸಹ ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ತಿಳಿಸಿದೆ.