
ಬೆಂಗಳೂರು: ರಾಜಧಾನಿಯಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದ್ದು, ಕಳೆದ 45 ತಿಂಗಳಲ್ಲಿ ಮಾತ್ರ 4,341 ಕೋಟಿ ರೂ.ಗಳಷ್ಟು ಹಣ ವಂಚಕರ ಕೈಗೆ ಸೇರಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಕಳೆದ ಮೂರು ವರ್ಷ ಒಂಬತ್ತು ತಿಂಗಳ ಅವಧಿಯಲ್ಲಿ 53,252 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಇದು ಬೆಂಗಳೂರಿನ ಸೈಬರ್ ಸುಳಿಗೆಗಳ ಆಳವನ್ನು ಸ್ಪಷ್ಟಪಡಿಸುತ್ತದೆ.
ಪೊಲೀಸರ ಮಾಹಿತಿಯ ಪ್ರಕಾರ, ಸೈಬರ್ ವಂಚನೆಗಳ ಗುರಿಯಾಗುತ್ತಿರುವವರಲ್ಲಿ ಉದ್ಯಮಿಗಳು, ಸಾಫ್ಟ್‌ವೇರ್ ಇಂಜಿನಿಯರ್‌ಗಳು, ಸರ್ಕಾರಿ ನೌಕರರು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಇವರು ಆನ್‌ಲೈನ್ ಹಣಕಾಸು ವ್ಯವಹಾರ ಹಾಗೂ ಡಿಜಿಟಲ್ ಚಟುವಟಿಕೆಗಳಲ್ಲಿ ತೊಡಗಿರುವ ಕಾರಣ, ವಂಚಕರಿಗೆ ಈ ವರ್ಗವೇ ಮುಖ್ಯ ಗುರಿಯಾಗಿದೆ.
ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 8 ಸೈಬರ್ ಠಾಣೆಗಳಿಗೆ ಪ್ರತಿದಿನ ಸರಾಸರಿ 10ಕ್ಕೂ ಹೆಚ್ಚು ಹೊಸ ದೂರುಗಳು ದಾಖಲಾಗುತ್ತಿವೆ. ವಂಚನೆಗಳ ಸ್ವರೂಪವು ಕೂಡ ವಿವಿಧ ರೀತಿಯಲ್ಲಿ ಇದೆ. ಆನ್‌ಲೈನ್ ಹೂಡಿಕೆ ಮೋಸ, ಹೆಚ್ಚು ಲಾಭ ನೀಡುವುದಾಗಿ ಹೇಳಿ ಬಲೆಗೆ ಬೀಳಿಸುವುದು. ನಕಲಿ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳು, OTP, KYC ಮತ್ತು UPI ವಂಚನೆಗಳು, ಇಂತಹ ತಂತ್ರಗಳನ್ನು ಬಳಸಿಕೊಂಡು ಮತ್ತಷ್ಟು ಜನರನ್ನು ಬಲೆಗೆ ಬೀಳಿಸುವ ಘಟನೆಗಳು ಹೆಚ್ಚಾಗುತ್ತಿವೆ.
ಪ್ರಕರಣದಲ್ಲಿ ದಾಖಲಾದ 4,341 ಕೋಟಿ ರೂ. ನಷ್ಟದಲ್ಲಿ ಪೊಲೀಸರು ತನಿಖೆ ಮೂಲಕ ಮಾತ್ರ 360 ಕೋಟಿ ರೂ. ವಾಪಸು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿಯೂ 334 ಕೋಟಿ ರೂ. ದೂರುದಾರರಿಗೆ ಹಸ್ತಾಂತರ ಆಗಿದೆ. ರಿಕವರಿ ಪ್ರಮಾಣ ಶೇಕಡಾ 10ಕ್ಕಿಂತ ಕಡಿಮೆ ಇರುವುದೇ ಸೈಬರ್ ಅಪರಾಧಗಳ ಸವಾಲು ಎಷ್ಟು ಗಂಭೀರವೆಂಬುದನ್ನು ತೋರಿಸುತ್ತದೆ.
ಸೈಬರ್ ಅಪರಾಧಿಗಳನ್ನು ಪತ್ತೆ ಹಚ್ಚುವುದು ಬಹಳ ಕಠಿಣ ಪೊಲೀಸರ ತನಿಖೆಯಲ್ಲಿ ಸಾಮಾನ್ಯವಾಗಿ ಸಿಗುವ ಪ್ರಮುಖ ತೊಂದರೆಗಳೆಂದರೆ.
ಈ ಕಾರಣಗಳಿಂದ ಆರೋಪಿಗಳನ್ನು ಪತ್ತೆಮಾಡುವುದು ಮತ್ತು ಹಣವನ್ನು ವಾಪಸು ಪಡೆಯುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
| ವರ್ಷ | ದಾಖಲೆ ಪ್ರಕರಣಗಳು | ನಷ್ಟದ ಮೊತ್ತ | ಪೊಲೀಸರು ಫ್ರೀಜ್ ಮಾಡಿದ ಮೊತ್ತ | ರಿಕವರಿ | ದೂರುದಾರರಿಗೆ ಹಸ್ತಾಂತರ |
| 2022 | 9,902 | ₹281 ಕೋಟಿ | ₹100 ಕೋಟಿ | ₹51 ಕೋಟಿ | ₹51 ಕೋಟಿ |
| 2023 | 17,797 | ₹680 ಕೋಟಿ | ₹321 ಕೋಟಿ | ₹90 ಕೋಟಿ | ₹88 ಕೋಟಿ |
| 2024 | 17,692 | ₹1,995 ಕೋಟಿ | ₹917 ಕೋಟಿ | ₹170 ಕೋಟಿ | ₹156 ಕೋಟಿ |
| 2025 | 7,961 | ₹1,385 ಕೋಟಿ | ₹146 ಕೋಟಿ | ₹49 ಕೋಟಿ | ₹39 ಕೋಟಿ |
| ಒಟ್ಟು | 53,252 | ₹4,341 ಕೋಟಿ | ₹1,484 ಕೋಟಿ | ₹360 ಕೋಟಿ | ₹334 ಕೋಟಿ |
ಸೈಬರ್ ವಂಚನೆಗಳು ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ಬೆರೆತಿದ್ದು “ಅಪರಿಚಿತ ಲಿಂಕ್ ಕ್ಲಿಕ್ ಮಾಡಬೇಡಿ, ಅತಿಯಾದ ಲಾಭದ ಭರವಸೆಗೆ ಬಲಿಯಾಗಬೇಡಿ, OTP–KYC ಯಾರಿಗೂ ಕೊಡಬೇಡಿ” ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಲೇ ಇದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ