
ಬೆಂಗಳೂರು (ನ.28): ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ದರ್ಶನ್ ಎಂಬ ಯುವಕನನ್ನು ಪೊಲೀಸರು ನ.15ರಂದು ಪೊಲೀಸ್ ಸ್ಟೇಷನ್‌ಗೆ ಕರೆತಂದಿದ್ದರು. ಈ ವೇಳೆ ಯಾವುದೇ ಕೇಸ್ ಮಾಡದೆ, ಎರಡು ದಿನ ಕಸ್ಟಡಿಯಲ್ಲಿಟ್ಟು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ. ಇದಾದ ಬಳಿಕ ಆತನನ್ನು ಬಿಟ್ಟು ಕಳಿಸಿದ್ದು, ಮಾದನಾಯಕನಹಳ್ಳಿ ಬಳಿ ಯುನಿಟಿ ರಿಹ್ಯಾಬಿಲೇಷನ್ ಸೆಂಟರ್‌ನಲ್ಲಿ (ಪುನರ್ವಸತಿ ಕೇಂದ್ರದಲ್ಲಿ) ಸೇರಿಸಲಾಗಿತ್ತು. ಆದರೆ, ದರ್ಶನ್ ಮೊನ್ನೆ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆ ವೇಳೆ ಹಲ್ಲೆ ನಡೆಸಿರೋದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಇದೀಗ ವಿವೇಕನಗರ ಠಾಣೆ ಪೊಲೀಸರ ವಿರುದ್ದ ಲಾಕಪ್ ಡೆತ್ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
ಪೊಲೀಸರ ಕಸ್ಟಡಿಯಲ್ಲಿವನು ರಿಹ್ಯಾಬ್ ಸೆಂಟರ್‌ಗೆ ಸೇರಿಸಿದ್ದು ಯಾಕೆ..? ಮಾರಣಾಂತಿಕ ಹಲ್ಲೆ ಮಾಲ್ಲೆ ಮಾಡಿ ಎಸ್ಕೇಪ್ ಪ್ಲಾನ್ ಮಾಡಿದ್ರಾ..? ಯುವಕನ ಮೇಲೆ ಖಾಕಿ ದೌರ್ಜನ್ಯ ಎಸಗಿದ್ರಾ..? ಪೊಲೀಸರಿಂದ ಹಲ್ಲೆಗೊಳಗಾಗಿದ್ದ ಯುವಕ ರಿಹಾಬ್ ಕೇಂದ್ರದಲ್ಲಿ ಸಾವು. ಬೆಂಗಳೂರಿನ ಅಡಕಮಾರನಹಳ್ಳಿ ರಿಹ್ಯಾಬ್ ಸೆಂಟರ್‌ನಲ್ಲಿ ಘಟನೆ. ಸೊಣ್ಣೇನಹಳ್ಳಿಯ ದರ್ಶನ್(22)ಸಾವು. ನವೆಂಬರ್ 15ರಂದು ಕುಡಿದು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದ ದರ್ಶನ್‌ಗೆ ಪೊಲೀಸರು ವಿಚಾರಣೆ ಮಾಡಿದ ವೇಳೆ ಈತ ಪೊಲೀಸರಿಗೆ ಮಚ್ಚು ತೋರಿಸಿ ಹಲ್ಲೆಗೆ ಮುಂದಾಗಿದ್ದನು. ಆಗ ಆತನನ್ನು ಪೊಲೀಸ್ ಠಾಣೆಗೆ ಕರತಂದಿದ್ದ ಪೊಲೀಸರು, ನಂತರ ಹಿಹ್ಯಾಬ್ ಸೆಂಟರ್‌ಗೆ ಸೇರಿಸಿದ್ದರು. ಆದರೆ, ಗಾಯದಿಂದ ನರಳುತ್ತಿದ್ದ ದರ್ಶನ್‌ಗೆ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ರಿಹ್ಯಾಬಿಟೇಸನ್ ಸೆಂಟರ್ ಮಾಲೀಕರ ಮೇಲೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿವೇಕನಗರ ಪೊಲೀಸರು ಹಲ್ಲೆ ಮಾಡಿದ್ದರಿಂದ 22 ವರ್ಷದ ದರ್ಶನ್ ಸಾವನ್ನಪ್ಪಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲು ಆಗಿದೆ. ಕುಡಿದು ಗಲಾಟೆ ಮಾಡುತ್ತಿದ್ದ ದರ್ಶನ್‌ನಲ್ಲಿ ವಶಕ್ಕೆ ಪಡೆದಿದ್ದ ವಿವೇಕನಗರ ಪೊಲೀಸರು ಎರಡು ದಿನ ಠಾಣೆಯಲ್ಲಿ ಇಟ್ಟುಕೊಂಡು ಹಲ್ಲೆ ಮಾಡಿದ್ದರು. ಈ ವೇಳೆ ದರ್ಶನ್ ತಾಯಿ ತನ್ನ ಮಗನನ್ನು ಬಿಡಲು ಕೇಳಿದಾಗ ಪೊಲೀಸರು ಬಿಟ್ಟಿರಲಿಲ್ಲ. ಇದಾದ ಬಳಿಕ ಆತನನ್ನ ಯುನಿಟಿ ರಿಹ್ಯಾಬ್ ಸೆಂಟರ್‌ಗೆ ದಾಖಲಿಸಲಾಗಿತ್ತು. ದರ್ಶನ್ ತಾಯಿ ರಿಹ್ಯಾಬ್ ಗೆ ಕರೆ ಮಾಡಿದಾಗ ನಿಮ್ಮ ಮಗ ಚೆನ್ನಾಗಿದ್ದಾನೆ ಎಂದು ಹೇಳುತ್ತಿದ್ದರು. ಆದರೆ, ಮಗನ ಜೊತೆ ಮಾತನಾಡಲು ಅವಕಾಶ ಕೊಟ್ಟಿರಲಿಲ್ಲ.
ಆದರೆ ನ. 26ರಂದು ಬೆಳಗ್ಗೆ ಕರೆಮಾಡಿದ್ದ ರಿಹ್ಯಾಬ್ ಸೆಂಟರ್ ಸಿಬ್ಬಂದಿ ನಿಮ್ಮ ಮಗ ಸಾವನ್ನಪ್ಪಿದ್ದಾನೆ ಎಂದಿದ್ದರು. ಆಗ ಪುನರ್ವಸತಿ ಕೇಂದ್ರಕ್ಕೆ ಹೋದಾಗ ಆತನ ಶವವನ್ನು ನೆಲಮಂಗಲ ಆಸ್ಪತ್ರೆಯಲ್ಲಿ ಅನಾಥ ಶವದಂತೆ ಬಿಟ್ಟು ಬದಿದ್ದರು ಎಂಬುದು ತಿಳಿದುಬಂದಿದೆ. ದರ್ಶನ್ ಸಾವಿನ ಬಗ್ಗೆ ಮಾಹಿತಿ ಕೇಳಿದರೆ ಆತನಿಗೆ ಉಸಿರಾಟ ಸಮಸ್ಯೆಯಿದ್ದರಿಂದ ಸಾವು ಸಂಭವಿಸಿದೆ ಎಂದಿದ್ದಾರೆ. ಆದರೆ ದರ್ಶನ್ ಮೃತದೇಹ ನೋಡಿದಾಗ ಗಾಯದ ಗುರುತು ಪತ್ತೆಯಾಗಿವೆ. ಹೀಗಾಗಿ ಮಗನ ಸಾವಿನಲ್ಲಿ ಅನುಮಾನ ಇದೆ ಎಂದು ಪೋಷಕರು ದೂರು ನೀಡಿದ್ದರು. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರು ಮೊದಲು UDR ದಾಖಲಿಸಿದ್ದರು. ನಂತರ ದರ್ಶನ್ ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆ ಮಾಡಿರೋದು ಬೆಳಕಿಗೆ ಬಂದಿದ್ದು, ನಂತರ ಕೊಲೆ ಕೇಸ್ ದಾಖಲಿಸಿ ತನಿಖೆ ಮಾಡಲಾಗುತ್ತಿದೆ.
ಮೃತ ದರ್ಶನ್ ತಾಯಿ ಆಧಿಲಕ್ಷ್ಮಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ಮಗ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಕುಡಿದು ಗಲಾಟೆ ಮಾಡಿದ್ದಾನೆ ಅಂತ ಕರೆದುಕೊಂಡು ಹೋಗಿದ್ದರು. ಆತನ ಮೇಲೆ ಎಫ್‌ಐಆರ್ ಮಾಡಿ ಜೈಲಿಗೆ ಕಳಿಸುತ್ತೇವೆ ಅಂತ 3 ದಿನ ಇಟ್ಕೊಂಡಿದ್ದರು. ನಾನು ಠಾಣೆಗೆ ಹೋಗಿ ಜೈಲಿಗೆ ಕಳಿಸಬೇಡಿ ಅಂತ ಕೇಳಿಕೊಂಡು, ಆತನನ್ನು ರಿಹ್ಯಾಬ್ ಸೆಂಟರ್‌ಗೆ ಹಾಕ್ತಿನಿ ಸಹಾಯ ಮಾಡಿ ಎಂದು ಪೊಲೀಸರಿಗೆ ಕೇಳಿಕೊಂಡಿದ್ದೆ. ಬಳಿಕ ಪೊಲೀಸರೇ ನನ್ನ ಮಗನನ್ನು ನೆಲಮಂಗಲ ಬಳಿಯ ರಿಹ್ಯಾಬ್ ಸೆಂಟರ್‌ಗೆ ಸೇರಿಸಿದ್ದರು.
ಆದರೆ ನನ್ನ ಸತ್ತು ಹೋಗಿದ್ದಾನೆ. ಮೊನ್ನೆ ಪುನರ್ವ ಸತಿ ಕೇಂದ್ರದಿಂದ ನಿಮ್ಮ ಮಗ ಡೆತ್ ಆಗಿದ್ದಾನೆ ಎಂದು ಫೋನ್ ಬಂತು. ಆಸ್ಪತ್ರೆಗೆ ಹೋಗಿ ನೋಡಿದಾಗ ಆಸ್ಪತ್ರೆಯಲ್ಲಿ ರಿಹ್ಯಾಬ್‌ನವರು ಯಾರು ಇರಲಿಲ್ಲ. ಡಾಕ್ಟರ್ ಇಲ್ಲಿ ಬರೋದಕ್ಕೂ ಮುನ್ನ ಸಾವನಪ್ಪಿದ್ದಾನೆ ಎಂದು ಹೇಳಿದರು. ಆತನಿಗೆ ಹೊಡೆದಿರೋ ಗಾಯಗಳು ಇದೆ. ಅವನಿಗೆ ಏನಾಗಿದೆ ಅಂತ ಗೊತ್ತಗಬೇಕಿದೆ. ರಿಹ್ಯಾಬ್ ಸೆಂಟರ್‌ಗೆ ಹೋಗುವಾಗ ಸ್ವಲ್ಪ ನಡಿಯೋಕೆ ಆಗ್ತಿರಲಿಲ್ಲ, ಆದರೆ ಸಾಯುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ