ಬೆಂಗಳೂರಲ್ಲಿ ಕ್ರೂರಿ ತಾಯಿ; ತೊದಲು ನುಡಿಯೋ ಮಗುವಿನ ಮೈತುಂಬಾ ಗಾಯಗಳು, ಜನನಾಂಗವನ್ನೂ ಬಿಟ್ಟಿಲ್ಲ!

By Sathish Kumar KH  |  First Published Mar 3, 2024, 12:39 PM IST

ಸ್ಬಂತ ತಾಯಿಯೇ ತನ್ನ ಮಗುವನ್ನು ಬೆಳಗ್ಗೆಯಿಂದ ರಾತ್ರಿವರೆಗೂ ಮನೆಯಲ್ಲಿ ಕೂಡಿಹಾಕಿ ಮಗುವಿಗೆ ಚಿತ್ರಹಿಂಸೆ ಕೊಟ್ಟು ಹಲ್ಲೆ ಮಾಡಿರುವ ಅಮಾನವೀಯ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ.


ಬೆಂಗಳೂರು (ಮಾ.03): ಈಕೆಯ ಸ್ಟೈಲ್‌ ನೋಡಿದರೆ, ಮದುವೆಯಾಗಿಲ್ಲವೇನೋ ಎಂಬಂತೆ ಬಿನ್ನಾಣ ಮಾಡಿಕೊಂಡು ಆಫೀಸಿಗೆ ಹೋಗಿ ಬರ್ತಾಳೆ. ಈಕೆ ಆಫೀಸಿಗೆ ಹೋಗುವಾಗ ಮನೆಯಲ್ಲಿ ಮಗುವನ್ನು ಕೂಡಿ ಹಾಕಿ ಹೋದರೆ ಪುನಃ ಬಾಗಿಲು ತೆರೆಯುವುದೇ ರಾತ್ರಿ ಬಂದ ಮೇಲೆ. ಇನ್ನು ತಾನು ಹೆತ್ತಿರುವ ಮಗು ಎಂಬುದನ್ನೂ ನೋಡದೇ ಮಗುವಿನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಮಗು ಮೈಯಲ್ಲಾ ಗಾಯದ ಗುರುತುಗಳಾಗಿದ್ದು, ಜನನಾಂಗದ ಮೇಲೂ ಗಾಯದ ಗುರುತುಗಳಾಗಿವೆ. 

ಈ ಘಟನೆ ಬೆಂಗಳೂರಿನ ಗಿರಿನಗರದ ಬಳಿಯ ಹೊಸಕೆರೆಹಳ್ಳಿಯಲ್ಲಿ ನಡೆದಿದೆ. ಕರುಳಿನ ಕುಡಿಗೆ ಚಿತ್ರಹಿಂಸೆ ನೀಡಿರುವ ಹೆತ್ತ ತಾಯಿ ಮಗುವಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾಳೆ. ಈಕೆಯನ್ನ ತಾಯಿ ಅನ್ನಬೇಕೋ ಅಥವಾ ಬೇರೆ ಏನು ಅನ್ನಬೇಕೋ ತಿಳಿಯುತ್ತಿಲ್ಲ. ಅಮ್ಮ ಅನ್ನೊ ಪದಕ್ಕೆ ಕಳಂಕ ತಂದ ಈ ಕಿರಾತಕಿ ತಾಯಿ ಈಕೆಯಾಗಿದ್ದಾಳೆ. ನೋಡೋಕೆ ಹೈ-ಫೈ ಜೀವನ ಮಾಡುತ್ತಿರುವ ಈಕೆ ಆಫೀಸಿಗೆ ಹೊರಟರೆ ಟೈಟ್‌ ಫಿಟ್ಟಿಂಗ್ ಸ್ರೆಸ್‌ ಹಾಕೊಂಡು ಕಿವಿಗೊಂದು ಹೇರ್‌ಫೋನ್ ಹಾಕೊಂಡು ತಲೆ ಆಡಿಸುತ್ತಾ ಹೊರಟರೆ ಪಡ್ಡೆಗಳೆಲ್ಲ ಈಕೆಯನ್ನೇ ನೋಡಬೇಕು ಹಾಗಿದ್ದಾಳೆ.

Tap to resize

Latest Videos

ಆದರೆ, ಈಕೆಯ ಸ್ವಂತ 2-3 ವರ್ಷದ ಮುಗ್ದ ಮಗುವಿಗೆ ಸಿಕ್ಕ ಸಿಕ್ಕಲ್ಲಿ ಹಲ್ಲೆ ಮಾಡಿದ್ದಾಳೆ. ಎಷ್ಟೋ ದಂಪತಿಗಳು ಮಕ್ಕಳಿಲ್ಲದೆ ಕಣ್ಣೀರಿಡೋ ಸಮಾಜದಲ್ಲಿ ಹೆತ್ತ ಮಗುವಿಗೆ ಚಿತ್ರಹಿಂಸೆ ಕೊಟ್ಟು ಕಿರುಕುಳ ಕೊಟ್ಟಿರೋ ತಾಯಿಯನ್ನು ನೋಡಿದರೆ ಯಾಕಾದರೂ ಇಂಥವರಿಗೆ ಮಗು ಹುಟ್ಟಿದೆ ಎಂಬ ನೋವುಂಟಾಗುತ್ತದೆ. ಇನ್ನು ಮುಗ್ದ ಕಂದಮ್ಮನ ತೊದಲು ನುಡಿಯಿಂದ ಈ ಗಾಯ ಯಾರು ಮಾಡಿದರು ಅಂತಾ ಕೇಳಿದರೆ, ಇದು ಅಮ್ಮ ಮಾಡಿದ್ದು... ಅಮ್ಮ ಹೊಡೆದ್ರು ಅಂತಾ ಹೇಳುವುದನ್ನು ಕೇಳಿದರೆ ಕರುಳು ಕಿತ್ತುಬರುತ್ತದೆ.

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ವೇಳೆ ಡಮ್ಮಿ ಫೋನ್ ಬಳಕೆ? ನೆಟ್ವರ್ಕ್ ಟ್ರೇಸ್‌ನಲ್ಲಿ ಪೊಲೀಸರ ದಿಕ್ಕು ತಪ್ಪಿಸಲು ಸಂಚು!

ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ ಎನ್ನಲಾದ ವಿಡಿಯೋ ವೈರಲ್‌‌‌ ಆಗುತ್ತಿದೆ. ಈ ಮಹಿಳೆ ಕೆಲಸಕ್ಕೆ ಹೋಗುವ ಮುನ್ನ ಮಗುವಿಗೆ ಬೇಕಾದ ಊಟವನ್ನು ಮಾಡಿ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ ಬಾಗಿಲು ಮುಚ್ಚಿಕೊಂಡು ಹೋಗುತ್ತಾಳೆ. ಇನ್ನು ತಾನು ಸಿಂಗಲ್ ಪೇರೆಂಟ್ ಎನ್ನುವುದು ಗೊತ್ತಿದ್ದರೂ ಕಚೇರಿ ಕೆಲಸ ಮುಗಿದಾಕ್ಷಣ ಮನೆಗೆ ಬಾರದೇ, ಸ್ನೇಹಿತರೊಂದಿಗೆ ಸುತ್ತಾಡಿಕೊಂಡು ರಾತ್ರಿ ವೇಳೆ ಮನೆಗೆ ಬರುತ್ತಾಳೆ. ಇನ್ನು ಮಗು ನೀರಡಿಕೆ ಹಾಗೂ ಹಸಿವು ತಾಳಲಾರದೇ ಏನಾದರೂ ಚೆಲ್ಲಿದ್ದಲ್ಲಿ, ಮಗುವಿನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡುತ್ತಿದ್ದಾಳೆ. ಇನ್ನು ಮಗುವಿನ ಮೈಯೆಲ್ಲಾ ಬರೀ ಗಾಯದ ಗುರುತುಗಳೇ ಇವೆ. ಇನ್ನು ಕೈಯಲ್ಲಿ ರಕ್ತ ಹೆಪ್ಪುಗಟ್ಟಿದಂತಾಗಿದೆ. ದೇಹದ ಇತರೆ ಭಾಗಗಳಲ್ಲಿ ಹಲ್ಲೆ ಮಾಡಿದಾಗ ಚರ್ಮ ಕಿತ್ತುಕೊಂಡು ಬಂದ ಹಸಿ ಗಾಯಗಳು ಹಾಗೂ ಗಾಯ ವಾಸಿಯಾಗಿರುವ ಗುರುತುಗಳು ಕಂಡುಬರುತ್ತವೆ. ಇನ್ನು ಮಗುವಿನ ಜನನಾಂಗದ ಮೇಲೂ ಹಲ್ಲೆ ಮಾಡಿದ ಗಾಯದ ಗುರುತುಗಳು ಕಂಡುಬರುತ್ತಿವೆ. 

ಇನ್ನು ಈ ಘಟನೆ ಬಗ್ಗೆ ಅಕ್ಕಪಕ್ಕದ ಮನೆಯವರು ನೋಡಿಕೊಂಡಿದ್ದು, ಸಂಘಟನೆಗಳಿಗೆ ಮಾಹಿತಿ ನೀಡಿದ್ದಾರೆ. ನಂತರ, ಸ್ಥಳೀಯರ ನೆರವಿನಿಂದ ಮನೆಯ ಕಿಟಕಿಯನ್ನು ತೆರೆದು ಮಗುವನ್ನು ಮಾತನಾಡಿಸಿ ಹಸಿದ ಮಗುವಿಗೆ ಹಣ್ಣು ಹಾಗೂ ಕುಡಿಯಲು ನೀರು ಕೊಟ್ಟು ಸಮಾಧಾನ ಮಾಡಿದ್ದಾರೆ. ನಂತರ ಆ ಮಗುವಿನ ತಾಯಿ ಮನೆಗೆ ಬಂದ ನಂತರ ಸ್ಥಳೀಯರೆಲ್ಲರೂ ತರಾಟೆಗೆ ತೆಗೆದುಕೊಂಡಿದ್ದಾರೆ. ಹಲ್ಲೆಯ ಬಗ್ಗೆ ಕೇಳಿದರೆ ಮಗು ಮನೆಯಲ್ಲಿ ಆಟವಾಡುವಾಗ ಬಿದ್ದು ಗಾಯ ಮಾಡಿಕೊಂಡಿದೆ ಎಂದು ಸಬೂಬು ಹೇಳಿದ್ದಾಳೆ. ಇನ್ನು ಬಾಗಿಲು ತೆಗೆಸಿ ಮಗುವನ್ನು ವಶಕ್ಕೆ ಪಡೆದು ಸ್ಥಳೀಯ ಗಿರಿನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ದೂರು ಸಂಬಂಧ ವಿಚಾರಣೆ ನಡೆಸಿ ಮಗುವನ್ನ ಮಕ್ಕಳ ಆಯೋಗಕ್ಕೆ ಕಳುಹಿಸಿದ್ದಾರೆ.

Mandya: ಮಗನಿಗೆ ಉದ್ಯೋಗವಿಲ್ಲದಿದ್ದರಿಂದ ಮನನೊಂದು ತಾಯಿ ನೇಣಿಗೆ ಶರಣು!

ಎರಡು ವಾರಗಳ ಹಿಂದೆ ಘಟನೆ ನಡೆದಿದ್ದು, ವಿಡಿಯೋ ಈಗ ವೈರಲ್ ಆಗಿದೆ. ಶಾರಿನ್ ಹಾಗೂ ಶಂಕರ್ ದಂಪತಿ 4 ವರ್ಷದ ಮಗು ಹಲ್ಲೆಗೊಳಗಾಗಿದೆ. ಈಕಡ ಕೆಲಸಕ್ಕೆ ಹೋಗುವಾಗ ಮಗುವನ್ನ ಕೂಡಿಹಾಕಿದ್ದಾಳೆ. ಗಂಡ ಶಂಕರ್ ಜೊತೆ ಮಹಿಳೆ ವಾಸ ಮಾಡ್ತಿಲ್ಲ. ಮಧ್ಯಾಹ್ನ ಮಗುಗೆ ಊಟ ಕೊಡೋಕೆ ಅಂತಾ ಮಹಿಳೆಯ ಫ್ರೆಂಡ್ ಮನೆಗೆ ಬರ್ತಿದ್ದನಂತೆ. ಸದ್ಯ ಈ ಬಗ್ಗೆ ಮಗುವಿನ ತಾಯಿಯನ್ನ ಕರೆಸಿ ಪೊಲೀಸರು ಬುದ್ಧಿವಾದ ಹೇಳಿದ್ದಾರೆ. ಮಗುವನ್ನ ಮಕ್ಕಳ ಆಯೋಗದ ಸುಪರ್ದಿಗೆ ಒಪ್ಪಿಸಿದ್ದಾರೆ. ಗಂಡ ಹಡ್ತಿ ಇಬ್ಬರೂ ಬಂದು ಕೌನ್ಸೆಲಿಂಗ್ ಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ. ಗಂಡ ಹೆಂಡ್ತಿ ಇಬ್ಬರೂ ಬಂದು ಚೆನ್ನಾಗಿ ನೋಡಿಕೊಳ್ಳೊದಾಗಿ ಹೇಳಿದರಷ್ಟೇ ಮಗು ನೀಡವುದಾಗಿ ಮಕ್ಕಳ ಆಯೋಗ ಹೇಳಿದೆ. 

click me!