
ನವದೆಹಲಿ (ಮಾ.2): ಪತಿ ಜೊತೆ ಭಾರತದ ಬೈಕ್ ಟೂರ್ ಮಾಡ್ತಿದ್ದ ಸ್ಪೇನ್ ಮಹಿಳೆಯ ಮೇಳೆ ಶುಕ್ರವಾರ ರಾತ್ರಿ ಜಾರ್ಖಂಡ್‌ನ ಧುಮ್ಕಾದಲ್ಲಿ 7 ಮಂದಿಯಿಂದ ಸಾಮೂಹಿಕ ಅತ್ಯಾಚಾರವಾಗಿದೆ. ಶುಕ್ರವಾರ ತಡರಾತ್ರಿ ಹಂಸದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಮಹತ್‌ನಲ್ಲಿ ಈ ಘಟನೆ ನಡೆದಿದೆ. 7 ಮಂದಿ ಕಾಮುಕರು ಗ್ಯಾಂಗ್‌ರೇಪ್ ನಡೆಸಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದರೆ. ಉಳಿದ ನಾಲ್ವರು ಆರೋಪಿಗಳ ಪತ್ತೆಗೆ ತೀವ್ರ ಹುಡುಕಾಟ ನಡೆಸುತ್ತಿದೆ. ಅತ್ಯಾಚಾರಕ್ಕೆ ಒಳಗಾಗಿರುವ ವಿದೇಶಿ ಮಹಿಳೆ ಹಾಗೂ ಆಕೆಯ ಪತಿ ಇಬ್ಬರೂ ಬೈಕರ್‌ಗಳಾಗಿದ್ದಾರೆ. ಪಶ್ಚಿಮ ಬಂಗಾಳದ ಕಡೆಯಿಂದ ಬರುತ್ತಿದ್ದ ಅವರು, ನೇಪಾಳ ಕಡೆ ಹೋಗುವ ಸಲುವಾಗಿ ಜಾರ್ಖಂಡ್‌ನ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದರು ಎಂದು ಧುಮ್ಕಾ ಪೊಲೀಸ್ ವರಿಷ್ಠಾಧಿಕಾರಿ ಪಿತಾಂಬರ್ ಸಿಂಗ್ ಖೈರ್ವಾರ್ ತಿಳಿಸಿದ್ದಾರೆ. ಸಂಜೆ ಆಗುತ್ತಿದ್ದ ಕಾರಣಕ್ಕೆ ವಿಶ್ರಾಂತಿ ಪಡೆಯಲು ಧುಮ್ಕಾದಲ್ಲಿ ತಮ್ಮ ಬೈಕ್‌ಅನ್ನು ನಿಲ್ಲಿಸಿದ್ದರು. ಇಲ್ಲಿನ ಕುಂಜಿ ಗ್ರಾಮದಲ್ಲಿ ತಾತ್ಕಾಲಿಕ ಟೆಂಟ್ ನಿರ್ಮಿಸಿ ಅವರು ವಾಸವಾಗಿದ್ದರು. ನೇಪಾಳಕ್ಕೆ ಹೋಗುವ ಸಲುವಾಗಿ ಅವರು ಬಿಹಾರದ ಭಾಗಲ್ಪುರಕ್ಕೆ ತೆರಳಬೇಕಿತ್ತು.
ಆದರೆ, ಈ ಪ್ರದೇಶದಲ್ಲಿ ರಾತ್ರಿ ಗಸ್ತು ನಡೆಸಿದ್ದ ಪೊಲೀಸರಿಗೆ ವಿದೇಶಿ ಮಹಿಳೆ ಹಾಗೂ ಆಕೆಯ ಪತಿ ಇಬ್ಬರೂ ಮುಖ್ಯರಸ್ತೆಯಲ್ಲಿ ಹಲ್ಲೆಗೊಳಗಾದಂತೆ ಬಿದ್ದಿರುವುದು ಕಂಡಿದ್ದರು. ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಖೈರ್ವಾರ್ ಹೇಳಿದ್ದಾರೆ. ಈ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದ್ದು, ವಿಧಿವಿಜ್ಞಾನ ತಜ್ಞರನ್ನೂ ನಿಯೋಜಿಸಲಾಗಿದೆ.
ಮಹಿಳೆ ಮತ್ತು ಆಕೆಯ ಪತಿ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದರು. ಅವರು ಏಷ್ಯಾದಾದ್ಯಂತ ಮೆಗಾ ಟ್ರಿಪ್‌ನಲ್ಲಿದ್ದರು. ದಂಪತಿಗಳು ಮೊದಲು ದಂಪತಿಗಳು ಪಾಕಿಸ್ತಾನಕ್ಕೆ ಹೋಗಿದ್ದರು. ಧುಮ್ಕಾಗೆ ಬರುವ ಮುನ್ನ ಅವರು ಬಾಂಗ್ಲಾದೇಶಕ್ಕೆ ಹೋಗಿದ್ದರು. ಈಗ ಜಾರ್ಖಂಡ್‌ನಿಂದ ನೇಪಾಳಕ್ಕೆ ಹೋಗಲು ಯೋಜನೆ ರೂಪಿಸಿದ್ದರು. ಸ್ಪ್ಯಾನಿಷ್ ಮಹಿಳೆ ಪ್ರಸ್ತುತ ಸರೈಯಾಹತ್ ಸಮುದಾಯ ಆರೋಗ್ಯ ಕೇಂದ್ರದ (CHC) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾವೇರಿ ಗ್ಯಾಂಗ್‌ರೇಪ್ ಪ್ರಕರಣದ ತನಿಖೆಗೆ ಎಸ್‌ಐಟಿ ಬೇಕಿಲ್ಲ: ಡಿಜಿಪಿ
ಖೈರ್ವಾರ್ ಶುಕ್ರವಾರ ರಾತ್ರಿ ಅಪರಾಧ ಸ್ಥಳಕ್ಕೆ ತೆರಳಿದ್ದು, ಅಲ್ಲಿಂದ ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ