₹10 ಕದ್ದನೆಂದು 11 ವರ್ಷದ ಬಾಲಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಕ್ರೂರಿಗಳು! ವಿಡಿಯೋ ವೈರಲ್

By Ravi Janekal  |  First Published Oct 13, 2024, 7:57 PM IST

ಹತ್ತು ರೂಪಾಯಿ ಕದ್ದ ಶಂಕೆಯಿಂದ 11 ವರ್ಷದ ಬಾಲಕನನ್ನು ನಾಲ್ಕೈದು ಕ್ರೂರಿಗಳ ಗುಂಪು ಸೇರಿಕೊಂಡು ಅಮಾನುಷವಾಗಿ ಥಳಿಸಿದ ಘಟನೆ ಪ್ರತಾಪಗಢದ ಚಿಲ್ಬಿಲಾ ಎಂಬಲ್ಲಿ ನಡೆದಿದೆ.


Trending video: ಹತ್ತು ರೂಪಾಯಿ ಕದ್ದ ಶಂಕೆಯಿಂದ 11 ವರ್ಷದ ಬಾಲಕನನ್ನು ನಾಲ್ಕೈದು ಕ್ರೂರಿಗಳ ಗುಂಪು ಸೇರಿಕೊಂಡು ಅಮಾನುಷವಾಗಿ ಥಳಿಸಿದ ಘಟನೆ ಪ್ರತಾಪಗಢದ ಚಿಲ್ಬಿಲಾ ಎಂಬಲ್ಲಿ ನಡೆದಿದೆ.

ಮಗುವನ್ನು ಥಳಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಗುವನ್ನು ಥಳಿಸುತ್ತಿರುವ ವಿಡಿಯೋ ನೋಡಿದ್ರೆ ಎಂಥವರಿಗೆ ಕ್ರೂರಿಗಳ ಮೇಲೆ ಕೋಪ ಬರುವಂತಿದೆ. ಮಗುವನ್ನು ಥಳಿಸುವ ದೃಶ್ಯವನ್ನು ವಿಡಿಯೋ ಮಾಡಿರುವ ಪಾಪಿಗಳು. ಇದೊಂದು ಇಡೀ ಮನಕುಲವೇ ತಲೆತಗ್ಗಿಸುವಂತಹ ಘಟನೆಯಾಗಿದೆ ಎಂದು ನೆಟಿಜೆನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

undefined

Viral Video: ಜನರಲ್ಲಿ ಭಯಹುಟ್ಟಿಸಿದ ಬೆಂಕಿ ಕಾರು! ನೋಡಿ ಜನ ದಿಕ್ಕಾಪಾಲು!

11 ವರ್ಷದ ಪ್ರಾಯದ ಮಗು ಒದಗಳನ್ನು ತಾಳದೇ ನರಳುತ್ತಿದ್ದಾನೆ. ತಾನು ಕದ್ದಿಲ್ಲವೆಂದು ಅಂಗಲಾಚುತ್ತಿದ್ದರೂ ಬಿಡದ ಕ್ರೂರಿಗಳು. ಕಾಲಿನಿಂದ ಒದ್ದು ಬಾಲಕನ ಮರ್ಮಾಂಗದ ಮೇಲೆ ದೊಣ್ಣೆಯಿಂದ ಹೊಡೆದಿದ್ದಾರೆ. ಹಲ್ಲೆಗೊಳಗಾದ ಅಪ್ರಾಪ್ತ ಬಾಲಕ ನಂದು ಎಂದು ಗುರುತಿಸಲಾಗಿದೆ. ಆರೋಪಿಗಳು ಇದಕ್ಕೂ ಮೊದಲು ಗಣೇಶ್ ಪಂದಳದಲ್ಲಿ ಬಾಲಕನನ್ನು ಕ್ರೂರವಾಗಿ ಥಳಿಸಿದ್ದರು ಬಳಿಕ ಶ್ರೀ ಅರಮನೆಯ ತಮ್ಮ ಮದುವೆ ಮಂಟಪದ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. 

@GulzarSiddiqui_ ಹೆಸರಿನ X ಖಾತೆಯಿಂದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ, ಇದನ್ನು ಇಲ್ಲಿಯವರೆಗೆ ಸಾವಿರಾರು ಜನರು ವೀಕ್ಷಿಸಿದ್ದಾರೆ ಮತ್ತು ಅನೇಕ ಜನರು ವೀಡಿಯೊವನ್ನು ರಿಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬರೆದುಕೊಂಡಿದ್ದಾರೆ. ಈ ರೀತಿ ಮಕ್ಕಳ ಮೇಲೆ ಅಮಾನುಷವಾಗಿ ದಾಳಿ ಮಾಡುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು, ವಿಡಿಯೋ ಹಳೆಯದಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. 

“मानवता हुई शर्मसार”
प्रतापगढ़ चिलबिला में नाबालिक बच्चे नंदू को सुरेश केडिया के लड़के शुभम अग्रवाल ने 10 रुपये चोरी के शक में पहले गणेश पंडाल पर बुरी तरह पीटा फिर अपने मैरिज हाल “श्री पैलेस” में खंभे से बांधकर बुरी तरीके से डंडे लोहे की राड से मारा पीटा… pic.twitter.com/AcVNGSGmU2

— GulzarSiddiqui گلزار صدیقی (@GulzarSiddiqui_)

 

click me!