ಸಹನಟನಿಗೆ ಕ್ರೆಡಿಟ್ ಕಾರ್ಡ್ ರಿಕವರಿ ಕಿರುಕುಳ, ಪೊಲೀಸ್ ಮೊರೆಹೋದ ನಟ

Published : Jun 02, 2022, 01:26 PM ISTUpdated : Jun 02, 2022, 02:04 PM IST
ಸಹನಟನಿಗೆ ಕ್ರೆಡಿಟ್ ಕಾರ್ಡ್ ರಿಕವರಿ ಕಿರುಕುಳ, ಪೊಲೀಸ್ ಮೊರೆಹೋದ ನಟ

ಸಾರಾಂಶ

* ಸಹನಟನಿಗೆ ಕ್ರೆಡಿಟ್ ಕಾರ್ಡ್ ರಿಕವರಿ ಕಿರುಕುಳ * ಪೊಲೀಸ್ ಮೊರೆಹೋದ ನಟ * ಮನೆಗೆ ನುಗ್ಗಿ  ತಾಯಿ, ಅತ್ತಿಗೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ದೂಉರ

ಬೆಂಗಳೂರು, (ಜೂನ್.02): ಇತ್ತೀಚೆಗೆ ಕ್ರೆಡಿಟ್ ಕಾರ್ಡ್ ರಿಕವರಿ ಮನ್ ಗಳ ಹಾವಳಿ ಜಾಸ್ತಿಯಾಗಿದ್ದು, ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಇದೀಗ ಸಹನಟನಿಗೆ ಕೂಡ ಕ್ರೆಡಿಟ್ ಕಾರ್ಡ್ ರಿಕವರಿ ಮೆನ್ ಕಿರುಕುಳ ನೀಡಿದ್ದು, ಇದೀಗ ಸಹನಟ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ.

ಶುಭಂ ಶರ್ಮಾ ಎಂಬ ಚಿತ್ರ ನಟ ಹಲವು‌ ಸಿನೆಮಾ ಹಾಗೂ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ರು..ಹಲವು ವರ್ಷಗಳಿಂದ ಕೋಟಕ್ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದ ಶುಭಂ ಶರ್ಮಾ,ಹಲವಾರು ಭಾರಿ ವಹಿವಾಟು ನಡೆಸುತ್ತಿದ್ರು ಜೊತೆಗೆ ಸರಿಯಾದ ಟೈಮ್ ನಲ್ಲಿ ಹಣವನ್ನು ಪಾವತಿ ಕೂಡ ಮಾಡಿದ್ರು..ಅದರೆ ಕೊರೋನಾ ಸಂದರ್ಭದಲ್ಲಿ ಫಿಲ್ಮ್ ಇಂಡಸ್ಟ್ರಿ ಕೂಡ ಸಂಪೂರ್ಣ ಬಂದ್ ಆಗಿತ್ತು ಯಾವುದೇ ಕೆಲಸ ಕಾರ್ಯ ಇರಲಿಲ್ಲ..ಜೀವನ ನಿರ್ವಹಣೆ ಗಾಗಿ ಶುಭಂ ಶರ್ಮಾ ಎರಡು ಲಕ್ಷ ಹಣವನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಡೆದಿದ್ರು.

ಮೆಸೆಂಜರ್‌ನಲ್ಲಿ ಅಶ್ಲೀಲ ಫೋಟೋ ಕಳುಹಿಸಿ ಕಾಟ ಕೊಡುತ್ತಿದ್ದವನ ಸೆರೆ

ಅದರೆ ಸರಿಯಾಗಿ ಕೆಲಸವಿಲ್ಲದೆ ಕ್ರೆಡಿಟ್ ಕಾರ್ಡ್ ಹಣವನ್ನು ಪಾವತಿ ಮಾಡಲು ಸಾಧ್ಯವಾಗಲಿಲ್ಲ..ಪದೇ ಪದೇ ಬ್ಯಾಂಕ್ ನಿಂದ ಹಣ ಕಟ್ಟುವಂತೆ ಕಾಲ್ ಬರತ್ತಿತ್ತು...ನಂತರ ಶುಭಂ ಶರ್ಮಾ ಬ್ಯಾಂಕ್ ಅಧಿಕಾರಿಗಳನ್ನು ಭೇಟಿ ಯಾಗಿ ಹಣ ಕಟ್ಟಲು ಸ್ವಲ್ಪ ಕಾಲಾವಕಾಶ ಕೇಳಿದ್ರು..ಇದಕ್ಮೆ ಬ್ಯಾಂಕ್ ಅಧಿಕಾರಿಗಳು ಒಪ್ಪಿಗೆಯನ್ನು ಕೂಡ ಸೂಚಿಸಿದ್ರು.ಅದರೆ ಕ್ರೆಡಿಟ್ ಕಾರ್ಡ್ ರಿಕವರಿ ಸಿಬ್ಬಂದಿ ಕಿರಣ್ ಹಿಲ್ಲೂರ್ ಎಂಬಾತ ಪದೇ ಪದೇ ಮನೆಗೆ ಬಂದು ಪೂರ್ತಿ ಹಣ ನೀಡುವಂತೆ ಕಿರುಕುಳ ಮಾಡ್ತಿದ್ನಂತೆ .ಹೀಗಾಗಿ ಆರ್ ಬಿ ಐ ದೂರು ಪ್ರಾಧಿಕಾರಕ್ಕೆ ದೂರು ನೀಡಿದ್ದ ಶುಭಂ.

ಪ್ರಾಧಿಕಾರ, ಕಸ್ಟಮರ್ ಮನೆಗೆ ಹೋಗಿ ತೊಂದರೆ ಕೊಡಬಾರದು.ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಅದನ್ನ ಮಾಡಿ‌ ಎಂದು ನೊಟೀಸ್ ನೀಡಿತ್ತು.ನೊಟೀಸ್ ಗೂ ಲೆಕ್ಕಿಸದೆ ಮತ್ತೆ ಮನೆಗೆ ಹೋಗಿ ಪ್ರಾಣ ಬೆದರಿಕೆ ಹಾಕಿದ್ದನಂತೆ ಕಿರಣ್ ಹಿಲ್ಲೂರ್.ಈ‌ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶುಭಂನ ಸುಬ್ರಹ್ಮಣ್ಯ ನಗರದಲ್ಲಿರುವ ಅಪಾರ್ಟ್ಮೆಂಟ್ ಗೆ. ಶುಭಂ ಇಲ್ಲದ ವೇಳೆ ಮನೆಗೆ ನುಗ್ಗಿ  ತಾಯಿ, ಅತ್ತಿಗೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದನಂತೆ..ಅಷ್ಟಲ್ಲದೆ ಶುಭಂಗೆ ಕರೆ ಮಾಡಿ‌ಪ್ರಾಣ ಬೆದರಿಕೆ ಹಾಕಿರೋದಾಗಿ  ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ..

ಈ ಐಪಿಎಲ್ ನಲ್ಲಿ 29 ಕೇಸ್, 33 ಆರೋಪಿಗಳು ಅರೆಸ್ಟ್
ಬೆಂಗಳೂರು ನಗರದ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್  ಮೂಲಕ ಕ್ರಿಕೆಟ್ ಬೆಟ್ಟಿಂಗ್ ಆಡಿಸ್ತಿದ್ದ ಇಬ್ಬರನ್ನ ನಿನ್ನೆ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ.‌ಬಂಧಿತರಾದ ಆಯುಷ್ ಗುಪ್ತಾ ಪ್ರದೀಪ್ ಯಾದವ್ ನೆದರ್ಲೆಂಡ್ಸ್‌ ಮತ್ತು ವೆಸ್ಟಗ ಇಂಡಿಸ್ ನಡುವಣ ಪಂದ್ಯಕ್ಕೆ ಆನ್ ಲೈನ್ ಮೂಲಕ‌ ಬೆಟ್ಟಿಂಗ್ ಆಡಿಸ್ತಿದ್ರು ಈ ವೇಳೆ ದಾಳಿ ಮಾಡಿದ ಸಿಸಿಬಿ ಪೊಲೀಸ್ರು ಇಬ್ಬರು ಆರೋಪಿಗಳನ್ನ ಬಂಧಿಸಿ ಬಂಧಿತರಿಂದ 10.45ಲಕ್ಷ ನಗದು ಹಾಗೂ ಮೂರು ಮೊಬೈಲ್ ಗಳನ್ನ ಸೀಜ್ ಮಾಡಿದ್ದಾರೆ.

ಇನ್ನೂ ಈ ಬಾರಿ ಐಪಿಎಲ್ ಸೀಜನ್ ವೇಳೆ ಹೆಚ್ಚಾಗಿ ಬೆಟ್ಟಿಂಗ್ ನಡೆದಿದ್ದು.ಸಿಸಿಬಿ ಪೊಲೀಸರಿಂದ ಕ್ರಿಕೆಟ್ ಬೆಟ್ಟಿಂಗ್  ನಡೆಸುತಿದ್ದವರ ವಿರುದ್ದ ವಿಶೇಷ  ಕಾರ್ಯಾಚರಣೆ‌ನಡೆಸಿದ್ದಾರೆ. 2022 ಐಪಿಎಲ್ ಸೀಜನ್ ನಲ್ಲಿ ಬೆಟ್ಟಿಂಗ್ ನಡೆಸುತಿದ್ದ ಒಟ್ಟು 29 ಕೇಸ್  ದಾಖಲಿಸಿ   33 ಅರೋಪಿಗಳು ಅರೆಸ್ಟ್‌ ಮಾಡಿದ್ದಾರೆ.ಒಟ್ಟಾರೆಯಾಗಿ ಆರೋಪಿಗಳಿಂದ 81,45,800 ಸೀಜ್ ಮಾಡಲಾಗಿದೆ‌. ಇದ್ರಲ್ಲ ನಗರದ ವೆಸ್ಟ್ ಮತ್ತುಸೌತ್ ಡಿವಿಷನ್ ನಲ್ಲಿ ಅತೀ ಹೆಚ್ಚು ಬೆಟ್ಟಿಂಗ್ ನಡೆದಿದೆ. ಬಸವನಗುಡಿ ಠಾಣ ವ್ಯಾಪ್ತಿಒಂದರಲ್ಲೆ ಆರು ಪ್ರಕರಣಗಳು ಬೆಟ್ಟಿಂಗ್ ಕೇಸ್ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!