* ಮಟ್ಕಾ ದಂಧೆ ಮಟ್ಟ ಹಾಕಲು ಗಡಿಪಾರು ಅಸ್ತ್ರಕ್ಕೆ ಭರ್ಜರಿ ರೆಸ್ಪಾನ್ಸ್
* 16 ಮಟ್ಕಾ ಬುಕ್ಕಿಗಳ ಪೈಕಿ 9 ಮಾಸ್ಟರ್ ಮೈಂಡ್‌ಗಳ ಗಡಿಪಾರು
* ಕ್ರಿಕೆಟ್, ಮಟ್ಕಾ, ರೌಡಿಶೀಟರ್‌ಗಳೇ ಎಚ್ಚರ ಎಚ್ಚರ
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬಳ್ಳಾರಿ
ಬಳ್ಳಾರಿ(ಜೂ.02): ಕಳೆದ ಮೂರು ತಿಂಗಳಿಂದ ಬಳ್ಳಾರಿಯಲ್ಲಿ ರೌಡಿಶೀಟರ್‌ಗಳ ಹೆಡೆಮುರಿಕಟ್ಟಲು ಬಳ್ಳಾರಿ ಪೋಲಿಸರು ಸನ್ನದ್ಧರಾಗಿದ್ದಾರೆ. ಈಗಾಗಲೇ ಹಲವು ಬಾರಿ ವಾರ್ನಿಂಗ್ ಕೊಟ್ರೂ ಯಾವುದೇ ಬದಲಾವಣೆ ಕಾಣದ ಹಿನ್ನೆಲೆ ಇದೀಗ ಮತ್ತೊಮ್ಮೆ ವಾರ್ನಿಂಗ್ ನೀಡೋದ್ರ ಜೊತೆ 9 ಜನ ಮಟ್ಕಾ ಬುಕ್ಕಿಗಳಾದ ಮಾಸ್ಟರ್ ಮೈಂಡ್‌ಗಳನ್ನು ಗಡಿಪಾರು ಮಾಡಿದ್ದಾರೆ. ಜಿಲ್ಲಾಡಳಿತಕ್ಕೆ ಪ್ರಮುಖ 16 ಮಟ್ಕಾ ಕಿಂಗ್ ಪಿನ್‌ಗಳ ಲಿಸ್ಟ್ ನೀಡಲಾಗಿತ್ತು. ಇದರಲ್ಲಿ 9 ಮಟ್ಕಾ ಮಾಸ್ಟರ್ ಮೈಂಡ್‌ಗಳನ್ನು ಜಿಲ್ಲೆಯಿಂದಲೇ ಹೊರದಬ್ಬಿದ್ದು, ಉಳಿದವರಲ್ಲಿ ನಡುಕ ಸೃಷ್ಠಿಯಾಗಿದೆ.
undefined
ಗಣಿನಾಡಲ್ಲಿ ಗಡಿಪಾರಿನ ಅಸ್ತ್ರ
ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಮಟ್ಕಾ ದಂಧೆ ಹೆಸರಲ್ಲಿ ರೌಡಿಶೀಟರ್‌ಗಳ ಹಾವಳಿ ಮಿತಿ ಮೀರಿತ್ತು. ನಗರ ಪ್ರದೇಶದಲ್ಲಿ ಮಾತ್ರವಲ್ಲದೇ ಹಳ್ಳಿಗಳಲ್ಲೂ ಮಟ್ಕಾ ದಂಧೆಯ ಕರಾಳ ದಂಧೆ ಜೋರಾಗಿಯೇ ನಡೆಯುತ್ತಿತ್ತು. ಪರಿಣಾಮ ಯುವಕರು, ಕಾರ್ಮಿಕರು ನಿತ್ಯ ಹಣ ಕಳೆದುಕೊಳ್ಳೊದ್ರ ಜೊತೆಗೆ ಅಪರಾಧ ಕೃತ್ಯಗಳು ಕೂಡ ಹೆಚ್ಚಾಗ ತೋಡಗಿತ್ತು. ಇದಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ಬಳ್ಳಾರಿ ಪೊಲೀಸರು ಹರಸಾಹಸ ಪಡೋ ಸ್ಥಿತಿ ನಿರ್ಮಾಣವಾಗಿತ್ತು. ಯಾಕಂದ್ರೆ ಇಷ್ಟು ದಿನ ತೆರೆಮರೆತಲ್ಲಿ ನಡೆಯುತ್ತಿದ್ದ ದಂಧೆ ಈಗ ಅನ್ ಲೈನ್‌ನಲ್ಲಿ ನಡೆಯುತ್ತಿದೆ. ಅಲ್ಲದೇ ಮಟ್ಕಾ ಆಡುವುದಕ್ಕಾಗಿಯೇ ಕೆಲವು ಆ್ಯಪ್‌ಗಳನ್ನ ಬಳಕೆ ಮಾಡಲಾಗ್ತಿದೆಯಂತೆ. ಹೀಗಾಗಿ ಮಟ್ಕಾ ದಂಧೆಕೊರರನ್ನ ಹಿಡಿಯುವುದು ಸುಲಭವಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಇದರ ಬಗ್ಗೆ ಸಾಕಷ್ಟು ತೆಲೆಕೆಡಿಸಿಕೊಂಡ ಲೀಸರು ಎಲ್ಲ ರೌಡಿಶೀಟರ್ಗಳನ್ನು ಒಂದೇ ಸೂರಿನಡಿ ಕರೆಯಿಸಿ ಕೊನೆಯ ವಾರ್ನಿಂಗ್ ನೀಡಿದ್ದಲ್ಲದೇ ಪ್ರಮುಖ 16 ಬುಕ್ಕಿಗಳನ್ನು ಗಡಿಪಾರು ಮಾಡುವಂತೆ ಜಿಲ್ಲಾಧಿಕಾರಿಗೆ ವರದಿ ನೀಡಿದ್ರು. ಇದೀಗ ಜಿಲ್ಲಾಡಳಿತ 9 ಜನರನ್ನು ಗಡಿಪಾರು ಮಾಡೋ ಆದೇಶ ನೀಡಿರೋದಾಗಿ ಎಸ್ಪಿ ಸೈದುಲ್ ಅದಾವತ್ ಸುವರ್ಣ ನ್ಯೂಸ್‌ಗೆ ಸ್ಪಷ್ಟಪಡಿಸಿದ್ದಾರೆ.
ಗಂಡನನ್ನು ಬಿಟ್ಟು ಮತ್ತೊಬ್ಬನೊಂದಿಗೆ ವಾಸಿಸುತ್ತಿದ್ದ ಮಹಿಳೆ, ಈಗ ಇಬ್ಬರೂ ಶವವಾಗಿ ಪತ್ತೆ!
ಹಂತ ಹಂತವಾಗಿ ಗಡಿಪಾರು
ಇನ್ನೂ ಕಳೆದೊಂದು ತಿಂಗಳಲ್ಲಿ ಪ್ರಮುಖ 16 ಬುಕ್ಕಿಗಳ ಪೈಕಿ ಹಂತ ಹಂತವಾಗಿ 9 ಜನರನ್ನು ಗಡಿ ಪಾರು ಮಾಡಲಾಗಿದ್ದು, ಇದೀಗ ಉಳಿದ ಐವರ ಹೆಸರಿನ ಜೊತೆ ಮತ್ತಷ್ಟು ಹೆಸರನ್ನು ಸೇರಿಸೋ ಮೂಲಕ ಮೂವತ್ತಕ್ಕೂ ಹೆಚ್ಚು ರೌಡಿಶೀಟರ್ ಮತ್ತು ಮಟ್ಕಾ ಬುಕ್ಕಿಗಳನ್ನು ಜಿಲ್ಲೆಯಿಂದ ಹೊರದಬ್ಬುವ ಕೆಲಸಕ್ಕೆ ಪೊಲೀಸರು ಕೈ ಹಾಕಿದ್ದಾರೆ. ಪ್ರಮುಖವಾಗಿ ಬಳ್ಳಾರಿ ನಗರದ ಸುಂಕಪ್ಪ, ಸಲೀಂ, ಸಂಡೂರಿನ ನಾಗರಾಜ್ ಹಾಗೂ ಸಿರುಗುಪ್ಪ ತಾಲೂಕಿನ ಹಚ್ಚೋಳಿ ಗ್ರಾಮದ ಅಮರೇಗೌಡ ದೊಡ್ಡ ಮಟ್ಟದಲ್ಲಿ ಅಕ್ರಮ ಮಟ್ಕಾ ಮತ್ತು ಕ್ರಿಕೆಟ್ ಬುಕ್ಕಿ ನಡೆಸುತ್ತಿದ್ದಾರೆಂದು ಅವರ ಫೋಟೋಗಳನ್ನು ಎಲ್ಲ ಠಾಣೆಗಳಲ್ಲಿ ಹಂಚಿಕೊಳ್ಳೋ ಮೂಲಕ ಗಡಿಪಾರು ಮಾಡಿರೋದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮಟ್ಕಾ ಕಂಟ್ರೋಲ್ ರೌಡಿ ಶೀಟರ್‌ಗಳಲ್ಲಿ ನಡುಕ
ಗಣಿ ನಾಡಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಮಟ್ಕಾ ದಂಧೆಯನ್ನ ಕಂಟ್ರೋಲ್‌ಗೆ ತರಲು ಗಡಿಪಾರು ಅಸ್ತ್ರ ಪ್ರಯೋಗ ಮಾಡಿದ್ದು, ಬಹುತೇಕ ಇದು ಯಶಸ್ವಿಯಾಗಿದೆ ಎನ್ನಲಾಗುತ್ತಿದೆ. ಇದೇ ರೀತಿ ರಾಜ್ಯದ ಎಲ್ಲೆಡೆ ಗಡಿಪಾರು ಅಸ್ತ್ರ ಉಪಯೋಗ ಮಾಡಿದ್ದೇ ಆದ್ರೇ, ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕಬಹುದಾಗಿದೆ.