ಇನ್ಸ್ಟಾಗ್ರಾಮ್‌ನಲ್ಲಿ ಸಾರಿ ಎಂದು ಬರೆದು 19 ವರ್ಷದ ಯುವಕ ಆತ್ಮಹತ್ಯೆ

Published : Jun 02, 2022, 01:04 PM IST
ಇನ್ಸ್ಟಾಗ್ರಾಮ್‌ನಲ್ಲಿ ಸಾರಿ ಎಂದು ಬರೆದು  19 ವರ್ಷದ ಯುವಕ ಆತ್ಮಹತ್ಯೆ

ಸಾರಾಂಶ

ಇನ್ಸ್ಟಾಗ್ರಾಮ್‌ನಲ್ಲಿ ಸಾರಿ ಎಂದು ಸ್ಟೇಟಸ್‌ ಹಾಕಿ 19 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ್ಞಾನಭಾರತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು:  19 ವರ್ಷದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ್ಞಾನಭಾರತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮನೋಜ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದ ಮನೋಜ್ ಮೂರ್ನಾಲ್ಕು ದಿನದಿಂದ ಖಿನ್ನತೆಗೆ ಒಳಗಾಗಿದ್ದ. 

ಸಾವಿಗೂ ಮೊದಲು ಈತ ತನ್ನ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಸಾರಿ ಎಂದು ಬರೆದು ಕೊನೆಯ ಪೋಸ್ಟ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಅಲ್ಲದೇ ಸ್ಟೇಟಸ್‌ನಲ್ಲಿ ಚಿಲ್ ವಿ ಆಲ್ ಡೈ ಎಂದು ಬರೆದಿದ್ದಾನೆ ಎಂದು ತಿಳಿದು ಬಂದಿದೆ. ಮನೋಜ್ ಮನೆ ಪಕ್ಕದಲ್ಲೇ  ಅಜ್ಜಿ ಮನೆ ಇದ್ದು,  ಮನೋಜ್‌ ಪ್ರತಿ‌ ದಿನ ಅಜ್ಜಿ ಮನೆಗೆ ಹೋಗಿ ಮಲಗುತ್ತಿದ್ದ, ಅಜ್ಜಿ ಹಾಗೂ ಮನೋಜ್ ಇಬ್ಬರೇ ಮನೆಯಲ್ಲಿ ಇರುತ್ತಿದ್ದರು. ನಿನ್ನೆ ರಾತ್ರಿ ಕೂಡ ಊಟ ಮುಗಿಸಿ ಮಲಗಲು ಅಜ್ಜಿ ಮನೆಗೆ ಹೋಗಿದ್ದ. ಆದರೆ ಬೆಳಗ್ಗೆ 7.30 ಆದರೂ ಮನೋಜ್ ಮಲಗಿದ್ದ ರೂಮ್‌ನ ಬಾಗಿಲು ತೆರೆದಿರಲಿಲ್ಲ. ಹೀಗಾಗಿ ಪೋಷಕರು ಈತ ಕಾಲೇಜಿಗೆ ತೆರಳಲು ರೆಡಿ ಆಗಿಲ್ವಲ್ಲಾ ಎಂದು ಬಂದು ನೋಡಿದಾಗ ಪ್ರಕರಣ ಬಯಲಾಗಿದೆ. 

Belagavi Crime: ಹೊಡೆತಕ್ಕೆ ಪತ್ನಿ ಮೃತಪಟ್ಟಿದ್ದಾಳೆ ಎಂದು ತಿಳಿದು ಪತಿ ಆತ್ಮಹತ್ಯೆ!

ಪೋಷಕರು ಬಂದು ಬಾಗಿಲು ತೆಗೆದು ನೋಡಿದಾಗ ಮನೋಜ್‌ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನಂತರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಆತ್ಮಹತ್ಯೆ ನಿಖರ ಕಾರಣ ಏನು ಎಂದು ಇನ್ನಷ್ಟೇ ತಿಳಿಯಬೇಕಿದೆ. ಈ ಬಗ್ಗೆ ಜ್ಞಾನಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯರು ಜಗತ್ತಿನಲ್ಲಿ ಯಾರು ಇಲ್ಲ. ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಇತ್ತೀಚಿನ ದಿನಗಳಲ್ಲಿ ಕೆಟ್ಟದಾದ ಜೀವನಶೈಲಿ (Lifestyle)ಯಿಂದ ಹಲವರಲ್ಲಿ ಒತ್ತಡ, ಖಿನ್ನತೆ ಮೊದಲಾದ ಸಮಸ್ಯೆಗಳು ಕಂಡು ಬರುತ್ತವೆ. ಮನುಷ್ಯನಿಗೆ ದೈಹಿಕ ಆರೋಗ್ಯ ಸಮಸ್ಯೆಗಳು (Health Problem) ಕಂಡುಬಂದಾಗ ಹೇಗೆ ಆಹಾರ ಬದಲಾವಣೆಗೆ ಸಲಹೆ ನೀಡಲಾಗುತ್ತದೋ ಹಾಗೆಯೆ, ಮಾನಸಿಕ ಆರೋಗ್ಯಕ್ಕೂ ಆಹಾರದ (Food) ಆಯ್ಕೆ ಮುಖ್ಯವಾಗುತ್ತದೆ. ಅದರಲ್ಲೂ ಇಂದಿನ ಯುವಜನರು ಎದುರಿಸುತ್ತಿರುವ ಖಿನ್ನತೆ ಸಮಸ್ಯೆಗೆ ಅಣಬೆ (Mushroom) ಸೇವನೆ ಅತ್ಯುತ್ತಮ ಎಂದ ಪರಿಗಣಿಸಲಾಗಿದೆ. ಖಿನ್ನತೆ (Depression)ಯನ್ನು ನಿವಾರಿಸಲು ಮ್ಯಾಜಿಕ್ ಅಣಬೆಗಳು ಮೆದುಳಿನ ಸಂಪರ್ಕಗಳನ್ನು ಸುಧಾರಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ಮೈಸೂರು: ಬೆಂಕಿ ಹಚ್ಚಿಕೊಂಡು ಎಂಟು ತಿಂಗಳ ಮಗುವಿನ ಜತೆ ತಾಯಿ ಆತ್ಮಹತ್ಯೆ
 

ಅಣಬೆ ಸೇವನೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಣಬೆಗಳು 15ರ ಗ್ಲೈಸೆಮಿಕ್ ಸೂಚಿಯನ್ನು (ಜಿಐ) ಹೊಂದಿದ್ದು, ಇಂಥಾ ಆಹಾರ ಮಧುಮೇಹ ರೋಗಿಗಳಿಗೆ ಇದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅಣಬೆಗಳು ಸೆಲೆನಿಯಮ್, ಮೆಗ್ನೀಸಿಯಮ್ ಮತ್ತು ರಂಜಕದಲ್ಲಿ ಸಮೃದ್ಧವಾಗಿವೆ ಮತ್ತು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಇದು ಮೂಳೆಗಳು ಮತ್ತು ಸ್ನಾಯುಗಳಿಗೆ ಅದ್ಭುತವಾಗಿದೆ. ಅಣಬೆಗಳಲ್ಲಿ ಫೈಬರ್ (Fiber), ಪ್ರೋಟೀನ್ (Protein) ಮತ್ತು ಆಂಟಿಆಕ್ಸಿಡೆಂಟ್ಗಳೂ ಅಧಿಕ. ಇದು ಅಲ್ಜಮೈರ್, ಹೃದ್ರೋಗ, ಕ್ಯಾನ್ಸರ್‌ನಂತಹಾ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆಯೂ ಇತ್ತೀಚಿನ ಅಧ್ಯಯನಗಳಿಂದ ತಿಳಿದುಬಂದಿರುವ ಹೊಷ ವಿಷಯವೆಂದರೆ ಅಣಬೆ ಸೇವನೆ ಖಿನ್ನತೆಯ ಸಮಸ್ಯೆಯನ್ನು ದೂರ ಮಾಡುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!