ರಸ್ತೆ ದಾಟುತ್ತಿದ್ದವರಿಗೆ ಬಿಎಂಟಿಸಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಪಾದಾಚಾರಿಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು (ಮೇ.14): ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತವಾಗಿದೆ. ರಸ್ತೆ ದಾಟುತ್ತಿದ್ದವರಿಗೆ ಬಿಎಂಟಿಸಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಪಾದಾಚಾರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ರಿಂಗ್ ರಸ್ತೆಯ ಲಗ್ಗೆರೆ ಬಳಿಯ ಕೆಂಪೇಗೌಡ ಆರ್ಚ್ ಬಳಿ ಘಟನೆ ನಡೆದಿದ್ದು, ಮೃತರಲ್ಲಿ ಓರ್ವನನ್ನು ಸುರೇಶ್ ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ರಾಜಾಜಿನಗರ ಸಂಚಾರ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.
ಟೆಸ್ಟ್ ಬರೆಯುವಾಗ ವಿದ್ಯಾರ್ಥಿನಿ ಮೇಲೆ ಗಂಭೀರ ಹಲ್ಲೆ, ಚಿಕ್ಕಮಗಳೂರು ಕಾಲೇಜಿನ
undefined
ಬಿಎಂಟಿಸಿ ಬಸ್ ಚಾಲಕನನ್ನು ರಾಜಾಜಿನಗರ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಎಸಿಪಿ ಪೃಥ್ವಿ ಹಾಗೂ ಡಿಸಿಪಿ ಸಚಿನ್ ಘೋರ್ಪಡೆ ಭೇಟಿ ನೀಡಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಬಸವನಗುಡಿ ಸಂಚಾರಿ ಠಾಣೆ ಕಾನ್ಸ್ ಟೇಬಲ್ ಸಸ್ಪೆಂಡ್:
ಕರ್ತವ್ಯ ಲೋಪ ಎಸಗಿ ,ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಬಸವನಗುಡಿ ಸಂಚಾರಿ ಠಾಣೆ ಕಾನ್ಸ್ ಟೇಬಲ್ ಕಾನ್ಸ್ ಟೇಬಲ್ ತಿಮ್ಮೇಗೌಡ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಅಮಾನತು ಮಾಡಿ ದಕ್ಷಿಣ ಸಂಚಾರ ಡಿಸಿಪಿ ಮೊಹ್ಮದ್ ಸೂಜಿತಾ ಆದೇಶ ಹೊರಡಿಸಿದ್ದಾರೆ.
ರೈಲು ಹಳಿ ಬಳಿ ಇಬ್ಬರು ಬೌದ್ಧ ಬಿಕ್ಕುಗಳ ಮೃತದೇಹ ಪತ್ತೆ, ಪೊಲೀಸರಿಂದ ಬೈಲುಕುಪ್ಪೆ
ಕೆಲದಿನಗಳ ಹಿಂದೆ ಕಾರ್ ಗೆ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಮಾನವೀಯತೆ ದೃಷ್ಠಿಯಿಂದ ಕಾರ್ ಮಾಲೀಕರು ಬೈಕ್ ಸವಾರನಿಗೆ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಇಬ್ಬರು ಸಂಧಾನ ಮಾಡಿಕೊಂಡು ಮನೆಗೆ ತೆರಳಿದ್ದರು. ಆದರೆ ಕಾನ್ಸ್ ಟೇಬಲ್, ಕಾರು ಮಾಲೀಕರು ಶ್ರೀಮಂತರಿದ್ದಾರೆ ಎಂದು ಅವರಿಂದ ಹೆಚ್ಚಿನ ಹಣ ವಸೂಲಿ ಮಾಡಲು ಪ್ಲಾನ್ ಮಾಡಿದ್ದ. ನಂತ್ರ ಅಪಘಾತ ಯುವಕನ ಕುಟುಂಬಸ್ಥರಿಂದ ದೂರು ತೆಗೆದುಕೊಂಡು ಎಫ್ ಐಆರ್ ದಾಖಲಿಸಿದ್ದ. ಜೊತೆಗೆ 2 ಲಕ್ಷ ಹಣ ಕೊಡಿಸುವುದಾಗಿ ದೂರುದಾರರಿಗೆ ಹೇಳಿದ್ದ.
ಎಫ್ ಐಆರ್ ಬಳಿಕ ವಯಸ್ಸಾದ ವೃದ್ಧ ದಂಪತಿಗೆ ಕಾರ್ ತರುವಂತೆ ತಿಮ್ಮೇಗೌಡ ಕಾಲ್ ಮಾಡಿದ್ದ. ಗಾಬರಿಯಾದ ದಂಪತಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಹೀಗಾಗಿ ಕಾನ್ಸ್ ಟೇಬಲ್ ತಿಮ್ಮೇಗೌಡ ಹಣ ವಸೂಲಿ ವಿಚಾರ ಗೊತ್ತಾಗಿತ್ತು. ಕೂಡಲೇ ವಿಚಾರಣೆ ನಡೆಸಿ ಪಿಸಿ ತಿಮ್ಮೇಗೌಡ ಸಸ್ಪೆಂಡ್ ಮಾಡಿದ್ದಾರೆ.