ರೈಲು ಹಳಿ ಬಳಿ ಇಬ್ಬರು ಬೌದ್ಧ ಬಿಕ್ಕುಗಳ ಮೃತದೇಹ ಪತ್ತೆ, ಪೊಲೀಸರಿಂದ ಬೈಲುಕುಪ್ಪೆ ಬೌದ್ಧ ಮಂಡಳಿಯ ಸಂಪರ್ಕ

By Gowthami K  |  First Published Jun 14, 2023, 8:41 PM IST

ರೈಲಿನಿಂದ ಬಿದ್ದು ಇಬ್ಬರು ಬೌದ್ಧ ಬಿಕ್ಕುಗಳ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ರೈಲ್ವೆ ಪೊಲೀಸರು ಬೈಲುಕುಪ್ಪೆ ಬೌದ್ಧ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದಾರೆ.


ಬೆಂಗಳೂರು (ಜೂ.14): ರೈಲಿನಿಂದ ಬಿದ್ದು ಇಬ್ಬರು ಬೌದ್ಧ ಬಿಕ್ಕುಗಳ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಚಿಕ್ಕಬಾಣಾವರ ನೆಲಮಂಗಲ ಮಧ್ಯೆ ಈ ಘಟನೆ ನಡೆದಿದೆ. 25 ರಿಂದ 30 ವರ್ಷ ಆಸುಪಾಸಿನ ಇಬ್ಬರು ಬೌದ್ಧ ಬಿಕ್ಕುಗಳ ಮೃತದೇಹ  ರೈಲು ಹಳಿಗಳ ಪಕ್ಕ ಪತ್ತೆಯಾಗಿದೆ. ಮೇಲ್ನೋಟಕ್ಕೆ ಟ್ರೈನ್ ಆಕ್ಸಿಡೆಂಟ್ ಅನ್ನೋದು ಗೊತ್ತಾಗ್ತಿದೆ. ಮೃತ ಬೌದ್ಧ ಬಿಕ್ಕುಗಳ ಹೆಸರು ತಿಳಿದು ಬಂದಿಲ್ಲ. ಹೀಗಾಗಿ ಬೈಲುಕುಪ್ಪೆಯ ಬೌದ್ಧ ಆಡಳಿತ ಮಂಡಳಿಯನ್ನು ರೈಲ್ವೆ ಪೊಲೀಸರು ಸಂಪರ್ಕ ಮಾಡಿದ್ದಾರೆ. ಬೈಲಕುಪ್ಪೆಯಿಂದ ಬೇರೆ ಬೌದ್ಧ ಬಿಕ್ಕುಗಳು ಬಂದ ನಂತರವಷ್ಟೇ ಮೃತರ ಪೂರ್ವಾಪರ ತಿಳಿಯಬೇಕಿದೆ. ಸದ್ಯ ಯಶವಂತಪುರ ರೈಲ್ವೆ ಸ್ಟೇಷನ್ ನಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರು -ಮೈಸೂರು ದಶಪಥದಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ಇಬ್ಬರ ಸಾವು,

Latest Videos

undefined

ಲಾರಿ, ಕಾರ್‌ ಮುಖಾಮುಖಿ ಢಿಕ್ಕಿ: 2 ಸಾವು
ಕೊರಟಗೆರೆ: ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಜೆಟ್ಟಿಅಗ್ರಹಾರದ ಬಳಿ ತುಮಕೂರಿನಿಂದ ಕೊರಟಗೆರೆ ಕಡೆಗೆ ಬರುತ್ತಿದ್ದ ಕಾರು (ಕೆಎ 05 ಎಂಆರ್‌ 4170) ಹಾಗೂ ಲಾರಿ (ಕೆಎ 09 ಎಎ 3919) ನಡುವೆ ಮುಖಾಮುಖಿ ಢಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, 5 ಜನರಿಗೆ ತೀವ್ರ ಗಾಯವಾಗಿದೆ.

ಕೊರಟಗೆರೆ ತಾಲೂಕಿನ ಕೊಡಗೇನಹಳ್ಳಿಯ ಪರಮೇಶ್‌(32) ಹಾಗೂ ದಾವಣಗೆರೆ ಶಿವುನಾಯ್ಕ(32) ಮೃತಪಟ್ಟಿದ್ದಾರೆ. ಮೋಹನ್‌, ನಾಗರಾಜು, ಸಿದ್ದೇಶ್‌, ನಾಗೇಶ್‌ ಹಾಗೂ ಬಾಬು ಎಂಬುವರಿಗೆ ತೀವ್ರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆಯಲ್ಲಿ ಸ್ನೇಹಿತನ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್‌ ಬರುವಾಗ ರಾತ್ರಿ 2.15 ರ ಸಮಯದಲ್ಲಿ ಘಟನೆ ನಡೆದಿದೆ. ಕೊರಟಗೆರೆ ಧಾನ್‌ ಫೌಂಡೇಶನ್‌ನ ಶಶಿಧರ್‌ ದೂರು ದಾಖಲಿಸಿದ್ದು, ಕೊರಟಗೆರೆ ಸಿಪಿಐ ಸುರೇಶ್‌, ಪಿಎಸ್‌ಐ ಚೇತನ್‌ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾರಿನಲ್ಲಿ ಸಿಲುಕಿದ್ದ ಶವಗಳನ್ನು ಹೊರತೆಗೆದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಶ್ರಮಿಸಿದ್ದಾರೆ. ಕೊರಟಗೆರೆ ಪೊಲೀಸ್‌ ಢಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಟೆಸ್ಟ್ ಬರೆಯುವಾಗ ವಿದ್ಯಾರ್ಥಿನಿ ಮೇಲೆ ಗಂಭೀರ ಹಲ್ಲೆ, ಚಿಕ್ಕಮಗಳೂರು ಕಾಲೇಜಿನ ವಿರುದ್ಧ ಗಂಭೀರ ಆರೋಪ

ತೊಟ್ಟಿ ನೀರು ಕುಡಿದು 18 ಮೇಕೆಗಳ ಸಾವು
ದೇವನಹಳ್ಳಿ: ತಾಲೂಕಿನ ವಿಜಯಪುರ ರಸ್ತೆಯಲ್ಲಿನ ಯಲಿಯೂರು ರಸ್ತೆಯ ದೊಡ್ಡತ್ತಮಂಗಲ ಗ್ರಾಮದ ಬಳಿ ಜಮೀನಿನಲ್ಲಿನ ತೊಟ್ಟಿಯ ನೀರು ಕುಡಿದು 18 ಮೇಕೆಗಳು ಸಾವನ್ನಪ್ಪಿವೆ. ದೊಡ್ಡತ್ತಮಂಗಲದ ಮುನಿಶಾಮಪ್ಪ ಎಂಬ ರೈತ ತನ್ನ 25 ಮೇಕೆಗಳನ್ನು ಮೇಯಿಸಲು ಕರೆದುಕೊಂಡುಹೋಗುತ್ತಿದ್ದಾಗ, ರಸ್ತೆ ಪಕ್ಕದಲ್ಲೇ ಇರುವ ಭಜಂತ್ರಿ ನಾರಾಯಣಪ್ಪ ಎಂಬುವರ ಕೊಳವೆ ಬಾವಿಯ ಬಳಿ ವೃತ್ತಾಕಾರದ ಸಿಮೆಂಟ್‌ತೊಟ್ಟಿಯಲ್ಲಿನ ನೀರನ್ನು ಮೇಕೆಗಳು ಕುಡಿದಿದ್ದಾವೆ. ನೀರು ಕುಡಿದು ನೂರು ಮೀಟರ್‌ ಹೋಗುವಷ್ಟರಲ್ಲಿ ಅನೇಕ ಮೇಕೆಗಳು ನೆಲಕ್ಕೆ ಬಿದ್ದು ಜೊಲ್ಲಿನೊಂದಿಗೆ ರಕ್ತ ಕಾರಿ ಸುಮಾರು 18 ಮೇಕೆಗಳು ಸ್ಥಳದಲ್ಲಿಯೇ ಸಾವನ್ನಪ್ಪಿದವು, ಉಳಿದ ಏಳು ಮೇಕೆಗಳು ಅಸ್ವಸ್ಥಗೊಂಡಿದ್ದಾವೆ.

ಸುದ್ದಿ ತಿಳಿದ ಕೂಡಲೇ ತಹಸೀಲ್ದಾರ್‌ ಶಿವರಾಜ್‌ ಹಾಗು ಡಿವೈಎಸ್ಪಿ ನಾಗರಾಜು ಮತ್ತು ಪೊಲೀಸ್‌ ಇನ್ಸ್‌ಪೆಕ್ಟರ್‌ ರಘು ಸ್ಥಳಕ್ಕೆ ಆಗಮಿಸಿ ಕೂಡಲೇ ಪಶು ವೈದ್ಯಾಧಿಕಾರಿಗಳನ್ನು ಕರೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ತಹಸೀಲ್ದಾರ್‌, ವಿಷ ಮಿಶ್ರಿತ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮೇಕೆಗಳ ಮಾಲೀಕರಿಗೆ ತಾಲೂಕು ಆಡಳಿತದಿಂದ ಸಾಧ್ಯವಾದಷ್ಟುಪರಿಹಾರ ನೀಡಲಾಗುವುದು ಎಂದರು. ಸತ್ತಿರುವ ಮೇಕೆಗಳ ವಾರಸುದಾರರಾದ ಮುನಿಶಾಮಪ್ಪ ಹಾಗು ವೆಂಕಟೇಶ್‌ರವರು ಸುಮಾರು ಮೂರು ಲಕ್ಷ ರೂಗಳಿಗೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು. ಪಶುವೈದ್ಯ ಇಲಾಖೆಯ ತಾಲೂಕು ಅಧಿಕಾರಿ ನಾರಾಯಣಸ್ವಾಮಿ ಹಾಗು ಡಾ. ಚಿಕ್ಕಣ್ಣ ಸತ್ತಿರುವ ಮೇಕೆಗಳ ಪರಿಶೀಲನೆ ನಡೆಸಿದರು.

click me!