ಹೆತ್ತ ಮೂವರು ಗಂಡು ಮಕ್ಕಳನ್ನ ಬೀದಿಪಾಲು ಮಾಡಿ 25 ವರ್ಷದ ಯುವಕನೊಂದಿಗೆ ತಾಯಿ ಜೂಟ್‌!

By Santosh Naik  |  First Published Jun 18, 2024, 9:48 AM IST

Belagavi Mother ಬೆಳಗಾವಿಯಲ್ಲಿ ಅಚ್ಚರಿಯ ಪ್ರಕರಣ ನಡೆದಿದ್ದು 40 ವರ್ಷದ ತಾಯಿ ತನ್ನ ಮೂವರು ಮಕ್ಕಳನ್ನು ತೊರೆದು 25 ವರ್ಷದ ಯುವಕನೊಂದಿಗೆ ಓಡಿ ಹೋಗೊರುವ ಘಟನೆ ನಡೆದಿದೆ.


ಬೆಳಗಾವಿ (ಜೂ.18): ಹೆತ್ತ ಮಕ್ಕಳನ್ನು ಬಿಟ್ಟು 25 ವರ್ಷದ ಯುವಕನ ಜೊತೆಗೆ ತಾಯಿಯೊಬ್ಬಳು ಓಡಿ ಹೋದ ಘಟನೆಯ ನಡೆದಿದೆ. ಇದರಿಂದಾಗಿ ಆಕೆಯ ಮೂವರು ಮಕ್ಕಳೀಗ ಬೀದಿಪಾಲಾಗಿದ್ದಾರೆ. ತಾಯಿಗಾಗಿ ಬೆಳಗಾವಿ ಕ್ಯಾಂಪ್‌ ಪೊಲೀಸರಿಗೆ ಮಕ್ಕಳು ದೂರು ನೀಡಿದ್ದಾರೆ. ಹೆತ್ತ ಮಕ್ಕಳನ್ನು ಬೀದಿಗೆ ಬಿಟ್ಟು ಬೇರೆ ಯುವಕನ ಜೊತೆಗೆ ಮಹಿಳೆ ನೆಲೆಸಿದ್ದಾರೆ. ಸರ್ಕಾರಿ ನೌಕರಿಯಲ್ಲಿದ್ದ ತಂದೆಯ ಅಕಾಲಿಕ ನಿಧನದ ಬಳಿಕ ಅನುಕಂಪದ ಆಧಾರದಲ್ಲಿ ತಾಯಿ ನೌಕರಿ ಗಿಟ್ಟಿಸಿಕೊಂಡಿದ್ದಳು. ತಂದೆ ತೀರಿ ಹೋದ ಬಳಿಕ ತಾಯಿಯ ಆಶ್ರಯದಲ್ಲಿದ್ದ ಎಲ್ಲಾ ಮೂವರು ಮಕ್ಕಳೀಗ ಬೀದಿಗೆ ಬಿದ್ದಿದ್ದಾರೆ. ಬೆಳಗಾವಿ ನಗರದ ಗಣೇಶಪುರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಕಳೆದ ಕೆಲ ತಿಂಗಳಿಂದ ಮಕ್ಕಳನ್ನು ಬಿಟ್ಟು ಯುವಕನ ಜೊತೆಗೆ ಮಹಿಳೆ ನೆಲೆಸಿದ್ದಾಗಿ ವರದಿಯಾಗಿದೆ. ಈ ನಡುವೆ ಮೂವರು ಮಕ್ಕಳು ತಾಯಿ ಕಾಣೆಯಾಗಿದ್ದಾಳೆಂದು ಕ್ಯಾಂಪ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಪೊಲೀಸರು ಸೂಕ್ತ ತನಿಖೆ ನಡೆಸಿದ ಬಳಿಕ ತಾಯಿ ಬೇರೊಬ್ಬನ ಜೊತೆಗೆ ವಾಸ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಆತನನ್ನು ಬಿಟ್ಟು ತಮ್ಮ ಜೊತೆಗೆ ಬರುವಂತೆ ಹಲವು ಬಾರಿ ಮಕ್ಕಳು ಮಾಡಿಕೊಂಡಿದ್ದಾರೆ. ಈ ವೇಳೆ 40 ವರ್ಷದ ತಾಯಿ, ನಿಮ್ಮೊಂದಿಗೆ ಬರಲು ಸಾಧ್ಯವಿಲ್ಲ ಎಂದು ಹಠ ಹಿಡಿದು ಕುಳಿತುಕೊಂಡಿದ್ದಾರೆ.  ಈ ಹಿನ್ನೆಲೆಯಲ್ಲಿ ಮೂವರು ಗಂಡು ಮಕ್ಕಳು ಕ್ಯಾಂಪ್ ಪೊಲೀಸರ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ತಾಯಿ ಮಾತ್ರ ಯಾವುದೇ ಕಾರಣಕ್ಕೂ ತಾನು ಮಕ್ಕಳೊಂದಿಗೆ ಹೋಗೋದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಈ ಪ್ರಕರಣದಲ್ಲಿ ಮುಂದಿನ ಕ್ರಮವೇನು ಅನ್ನೋದೇ ಪೊಲೀಸರಿಗೆ ತಲೆಬಿಸಿಯಾಗಿದೆ.

ಬಾಡಿಗೆ ಮನೆಯಿಂದ ಮಕ್ಕಳು ಹೊರಗೆ: ಇನ್ನೊಂದೆಡೆ ಬಾಡಿಗೆ ಕಟ್ಟದ್ದಕ್ಕೆ ಮಕ್ಕಳನ್ನು ಮನೆ ಮಾಲೀಕರು ಹೊರಹಾಕಿದ್ದಾರೆ. ಮುಂದಿನ ದಾರಿ ಕಾಣದೆ ಈ ಮೂವರು ಮಕ್ಕಳು ಅಜ್ಜಿಯ ಆಶ್ರಯ ಪಡೆದುಕೊಂಡಿದ್ದಾರೆ. ಹಾಗೇನಾದರೂ ತಾಯಿ ನಮ್ಮ ಜೊತೆ ಬಂದರೆ,  ಶಾಲೆ, ಕಾಲೇಜು ಬಿಟ್ಟು ನಾವೇ ಕೆಲಸಕ್ಕೆ ಹೋಗಿ ಸಾಕುತ್ತೇವೆ ಎಂದು ಮಕ್ಕಳು ಹೇಳಿದ್ದಾರೆ. ಈ ಕುರಿತು ತಾಯಿಯನ್ನ ಕೇಳಿದರೆ, ಮಾಧ್ಯದಮವರ ಮುಂದೆ ರೋಷಾವೇಶ ತೋರಿದಿದ್ದಾರೆ. ಇದು ನಮ್ಮ ವೈಯಕ್ತಿಕ ವಿಚಾರ ನೀವ್ಯಾರು ಕೇಳೋಕೆ ಅಂತಾ ತಾಯಿ ಪ್ರಶ್ನೆ ಮಾಡಿದ್ದಾರೆ.

40 ವರ್ಷದ ತಾಯಿಯನ್ನು ಪ್ರೇಮಪಾಶಕ್ಕೆ ಸಿಲುಕಿದ ವಿನಾಯಕ ಕೋಲ್ಕಾರ ಕುರಿತಾಗಿಯೂ ಪೊಲೀಸರು ಮಾಹಿತಿ ಸಂಗ್ರಹ ಮಾಡಿದ್ದಾರೆ. ಈತನ ಹಳೆಯ ವಿಡಿಯೋವೊಂದು ವೈರಲ್‌ ಆಗಿದ್ದು, ಮಹಿಳೆಯೋರ್ವಳಿಂದ ಈತ ಚಪ್ಪಲಿಯಲ್ಲಿ ಹೊಡೆಸಿಕೊಂಡಿದ್ದ. ಫೋನ್ ಮಾಡಿ ಮಹಿಳೆಗೆ ಟಾರ್ಚರ್ ನೀಡ್ತಿದ್ದ ವಿನಾಯಕ ಕೋಲ್ಕಾರ್‌ನನ್ನು ಮಹಿಳೆ ಹುಡುಕಿಕೊಂಡು ಬಂದಿದ್ದಳು. ಬಂದವಳೇ ಆತನಿಗೆ ಚಪ್ಪಲಿಯಿಂದ ಹೊಡೆಯೋಕೆ ಶುರು ಮಾಡಿದ್ದಳು.

Tap to resize

Latest Videos

undefined

RENUKASWAMY MURDER CASE: ಹಿಂದೆ ಪಟ್ಟಣಗೆರೆ ಶೆಡ್‌ನಲ್ಲಿ ಈ ರೀತಿ ಘಟನೆ ಆಗಿತ್ತಾ ? ಈ ಬಗ್ಗೆ ಮಾಲೀಕ ಜಯಣ್ಣ ಹೇಳಿದ್ದೇನು?

ಮಹಿಳೆಗೆ ಕಾಲ್ ಮಾಡಿ ನಿನ್ ಮೇಲೆ ಮನಸಾಗಿದೆ ಐಲವ್ ಯೂ ಎಂದು ಹೇಳಿದ್ದ. ವಿನಾಯಕನಿಗೆ ಮಹಿಳೆ ಚಪ್ಪಲಿಯಲ್ಲಿ ಹೊಡೆಯುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಇದೇ ವಿನಾಯಕನ ಮೋಹದ ಬಲೆಗೆ ಸಿಕ್ಕಿರುವ ಮೂರು ಮಕ್ಕಳ ತಾಯಿ. ಇನ್ನು ತಾಯಿ ತಮಗೆ ಬೇಕೇ ಬೇಕು ಎಂದು ಮೂವರು ಮಕ್ಕಳು ಹಠ ಹಿಡಿದು ಕುಳಿತಿದ್ದಾರೆ.

ಫೋಟೊಶೂಟ್, ರೀಲ್ಸ್‌ ಹುಚ್ಚಿಗೆ ಹೊಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಬಾಲಕರು!

click me!