Latest Videos

ಬೆಂಗಳೂರು: ಆನ್‌ಲೈನ್‌ ಗೇಮ್‌ ಚಟ, ವಿದ್ಯಾರ್ಥಿನಿ ಆತ್ಮಹತ್ಯೆ

By Kannadaprabha NewsFirst Published Jun 18, 2024, 6:35 AM IST
Highlights

ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಾವನಾ, ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮೂರು ದಿನಗಳಿಂದ ಕಾಲೇಜಿಗೆ ರಜೆಯಿದ್ದ ಹಿನ್ನೆಲೆಯಲ್ಲಿ ಸಹಪಾಠಿಗಳು ಊರುಗಳಿಗೆ ತೆರಳಿದ್ದರು. ಹೀಗಾಗಿ ಭಾನುವಾರ ಹಾಸ್ಟೆಲ್‌ ಕೊಠಡಿಯಲ್ಲಿ ಪಾವನಾ ಒಬ್ಬಳೇ ಇದ್ದಳು. ರಾತ್ರಿ ಸುಮಾರು 11 ಗಂಟೆಗೆ ಪಾವನಾ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
 

ಬೆಂಗಳೂರು(ಜೂ.18):  ಆನ್‌ಲೈನ್ ಲೈನ್ ಗೇಮಿಂಗ್ ಚಟಕ್ಕೆ ಬಿದ್ದಿದ್ದ ವಿದ್ಯಾರ್ಥಿನಿಯೊಬ್ಬಳು ಪೋಷಕರು ನೀಡಿದ್ದ ಕಾಲೇಜು ಶುಲ್ಕವನ್ನು ಆನ್‌ಲೈನ್‌ ಗೇಮ್‌ನಲ್ಲಿ ಕಳೆದುಕೊಂಡು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈಗ್ರೌಂಡ್ಸ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಪಾವನಾ (19) ಆತ್ಮಹತ್ಯೆಗೆ ಶರಣದ ವಿದ್ಯಾರ್ಥಿನಿ. ಭಾನುವಾರ ರಾತ್ರಿ ಸುಮಾರು 11 ಗಂಟೆಗೆ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಾವನಾ, ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮೂರು ದಿನಗಳಿಂದ ಕಾಲೇಜಿಗೆ ರಜೆಯಿದ್ದ ಹಿನ್ನೆಲೆಯಲ್ಲಿ ಸಹಪಾಠಿಗಳು ಊರುಗಳಿಗೆ ತೆರಳಿದ್ದರು. ಹೀಗಾಗಿ ಭಾನುವಾರ ಹಾಸ್ಟೆಲ್‌ ಕೊಠಡಿಯಲ್ಲಿ ಪಾವನಾ ಒಬ್ಬಳೇ ಇದ್ದಳು. ರಾತ್ರಿ ಸುಮಾರು 11 ಗಂಟೆಗೆ ಪಾವನಾ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

16ರ ಬಾಲಕಿ ಮೇಲೆ ವರ್ಚ್ಯುವಲ್‌ ಗ್ಯಾಂಗ್‌ರೇಪ್‌: ಇದೇನಿದು ವಿಚಿತ್ರ ಪ್ರಕರಣ

ಕುರ್ಚಿ ಬಿದ್ದ ಶಬ್ಧ:

ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಕುರ್ಚಿ ನೆಲಕ್ಕೆ ಬಿದ್ದು ಶಬ್ಧವಾದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಕೊಠಡಿಗಳ ವಿದ್ಯಾರ್ಥಿನಿಯರು ಓಡಿ ಬಂದು ನೋಡಿದ್ದಾರೆ. ಈ ವೇಳೆ ಪಾವನಾ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ನೇಣಿನ ಕುಣಿಕೆಯಿಂದ ಇಳಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಪೊಲೀಸರು ಮೃತಳ ಪೋಷಕರಿಗೆ ವಿಷಯ ತಿಳಿಸಿದ್ದು, ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಿ ಪಾವನಾ ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೌಟುಂಬಿಕ ಕಲಹಕ್ಕೆ ಬೇಸತ್ತು ಪತ್ನಿಯನ್ನ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ!

ಡೆತ್‌ ನೋಟ್‌ ಪತ್ತೆ

ಘಟನಾ ಸ್ಥಳದಲ್ಲಿ ಪರಿಶೀಲನೆ ಮಾಡಿದಾಗ ಮರಣಪತ್ರ ಪತ್ತೆಯಾಗಿದೆ. ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ ನಷ್ಟಕ್ಕೆ ಒಳಗಾಗಿರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪಾವನಾ ಮರಣಪತ್ರದಲ್ಲಿ ಉಲ್ಲೇಖಿಸಿದ್ದಾಳೆ. ಆದರೆ, ಪೊಲೀಸರ ತನಿಖೆ ವೇಳೆ ಆಕೆ ಆನ್‌ಲೈನ್‌ ಗೇಮ್‌ ಆಡಿ ಹಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಆನ್‌ಲೈನ್‌ ಗೇಮಲ್ಲಿ ₹15 ಸಾವಿರ ನಷ್ಟ

ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಪಾವನಾ ಆನ್‌ಲೈನ್‌ ಗೇಮಿಂಗ್‌ ಚಟಕ್ಕೆ ಬಿದ್ದಿದ್ದಳು. ಕಾಲೇಜು ಶುಲ್ಕ ಪಾವತಿಸಲು ಪೋಷಕರು ನೀಡಿದ್ದ ₹15 ಸಾವಿರ ಹಣದಿಂದ ಆನ್‌ಲೈನ್‌ ಗೇಮ್‌ ಆಡಿ ಸೋತಿದ್ದಳು. ಪೋಷಕರು ಶುಲ್ಕದ ಬಗ್ಗೆ ಕೇಳಿದರೆ ಏನು ಹೇಳಬೇಕು ಎಂದು ತೋಚದೆ ತೊಳಲಾಟಕ್ಕೆ ಸಿಲುಕಿದ್ದಳು. ಈ ನಡುವೆ ಸ್ನೇಹಿತರಿಂದ ₹10 ಸಾವಿರ ಸಾಲ ಪಡೆದಿದ್ದಳು. ಆದರೆ, ಉಳಿದ ₹5 ಸಾವಿರ ಹೊಂದಿಸಲಾಗದೆ ಚಿಂತಿಗೀಡಾಗಿದ್ದಳು. ಹಣ ಹೊಂದಿಸಲು ಬೇರೆ ದಾರಿ ಕಾಣದೆ ಕೊನೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

click me!