Belagavi: ಮನೆ ಮುಂದಿನ ಹೈಟೆನ್ಷನ್‌ ವೈರ್‌ ತಾಗಿ 13 ವರ್ಷದ ಬಾಲಕಿ ದುರಂತ ಸಾವು!

By Sathish Kumar KH  |  First Published May 23, 2023, 12:48 PM IST

ಮನೆ ಮುಂದಿನ ವಿದ್ಯುತ್‌ ತಂತಿ ತಗುಲಿ (ಹೈಟೆನ್ಷನ್ ವೈಯರ್) 13 ವರ್ಷದ ಬಾಲಕಿ ಸ್ಥಳದಲ್ಲೇ ಕರೆಂಟ್‌ ಶಾಕ್‌ ಕೊಡೆದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.


ಬೆಳಗಾವಿ (ಮೇ 23):  ಮನೆ ಮುಂದಿನ ವಿದ್ಯುತ್‌ ತಂತಿಯನ್ನು ಮುಟ್ಟಿದ (ಹೈಟೆನ್ಷನ್ ವೈಯರ್) 13 ವರ್ಷದ ಬಾಲಕಿ ಸ್ಥಳದಲ್ಲೇ ಕರೆಂಟ್‌ ಶಾಕ್‌ ಕೊಡೆದು ಸಾವನ್ನಪ್ಪಿದ ದುರ್ಘಟನೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. 

ಮಚ್ಛೆ ಗ್ರಾಮದ ಮಧುರಾ ಮೋರೆ (13) ಸ್ಥಳದಲ್ಲೇ ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯ ಒಂದನೇ ಮಹಡಿ ಮೇಲೆ ಆಟ ಆಡುತ್ತ ನಿಂತಾಗ ಮನೆಯ ಮುಂದೆಯೇ ನೇತಾಡುತ್ತಿದ್ದ ಹೈಟೆನ್ಷನ್ ವಿದ್ಯುತ್‌ ತಂತಿ ತಾಗಿದೆ. ಇನ್ನು ವಿದ್ಯುತ್‌ ತಂತಿ ತಾಗಿದ ಕ್ಷಣವೇ ಬಾಲಕಿ ಕರೆಂಟ್‌ ಶಾಕ್‌ ಹೊಡೆದು ಮೈಯೆಲ್ಲಾ ಸುಟ್ಟ ಗಾಯಗಳಂತಾಗಿ ಸಾವನ್ನಪ್ಪಿದ್ದಾಳೆ. ಇನ್ನು ಈ ಘಟನೆ ನಡೆದ ವೇಳೆ ಮನೆಯ ಮುಂದೆ ಯಾರೂ ಇರಲಿಲ್ಲ. ಘಟನೆ ನಡೆದ ನಂತರ ಮಗುವನ್ನು ನೋಡಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ. 

Latest Videos

undefined

Bengaluru: ನಂಗೆ ಎಣ್ಣೆ ಸಾಲುತ್ತಿಲ್ಲವೆಂದು ಸ್ನೇಹಿತನನ್ನೇ ಬರ್ಬರವಾಗಿ ಕೊಲೆ ಮಾಡಿದ ರೌಡಿಶೀಟರ್‌

ವಿದ್ಯುತ್‌ ವೈರ್‌ಗೆ ತಾಗುತ್ತಿದ್ದರೂ ನಿರ್ಲಕ್ಷ್ಯ: ಮನೆಯ ಮುಂದೆ ನೇತಾಡುತ್ತಿದ್ದ ವಿದ್ಯುತ್‌ ವೈರ್‌ ಅನ್ನು ತೆರವುಗೊಳಿಸದೇ ಅಥವಾ ಅದರಿಂದ ವಿದ್ಯುತ್‌ ಶಾಕ್‌ ಹೊಡೆಯದಂತೆ ಪ್ಲಾಸ್ಟಿಕ್‌ ಪೈಪ್‌ ಅಳವಡಿಸದೇ ಮನೆಯ ಮಾಲೀಕರು ನಿರ್ಲಕ್ಷ್ಯ ಮಾಡಿದ್ದರು. ಜೊತೆಗೆ, ಹುಬ್ಬಳ್ಳಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಹೆಸ್ಕಾಂ) ವತಿಯಿಂದ ವಿದ್ಯುತ್‌ ಕಂಬ ಹಾಗೂ ತಂತಿಯ ಬಳಿ ಮನೆಯನ್ನು ನಿರ್ಮಾಣ ಮಾಡದಂತೆ ನೋಟಿಸ್ ನೀಡಿದ್ದರೂ ಅದನ್ನು ನಿರ್ಲಕ್ಷ್ಯ ಮಾಡಿ ತಳಮಹಡಿ ಮನೆಯ ಮೇಲೆ ಮೇಲ್ಮಹಡಿ ಮನೆಯನ್ನು ನಿರ್ಮಾಣ ಮಾಡಲಾಗಿತ್ತು. ಮನೆ ಮಾಲೀಕರ ನಿರ್ಲಕ್ಷ್ಯದಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗುತ್ತಿದೆ.

ಹೆಸ್ಕಾಂ ನಿಂದ ನೋಟಿಸ್‌ ನೀಡದರೂ ನಿರ್ಲಕ್ಷ್ಯ ಮಾಡಿದ್ದ ಕುಟುಂಬ: ಹೈಟೆನ್ಷನ್ ವೈಯರ್ ಇರುವ ಸ್ಥಳದಲ್ಲಿ ಯಾವುದೇ ವಸತಿ ಕಟ್ಟಡ, ವಾಣಿಜ್ಯ ಕಟ್ಟಡ ಅಥವಾ ಕೈಗಾರಿಕೆಯನ್ನು ನಿರ್ಮಾಣ ಮಾಡಬಾರದು ಎಂಬ ನಿಯಮವಿದೆ. ಈ ಬಗ್ಗೆ ಹೆಸ್ಕಾಂ ವತಿಯಿಂದ ಕೂಡ ಮನೆ ಕಟ್ಟದಂತೆ ನೋಟಿಸ್ ನೀಡಲಾಗಿತ್ತು. ಹೆಸ್ಕಾಂ ‌ನೋಟಿಸ್ ಉಲ್ಲಂಘನೆ ಮಾಡಿದ್ದ ಮೋರೆ ಕುಟುಂಬ ಸದಸ್ಯರು ಮೇಲ್ಮಹಡಿ ಮನೆಯನ್ನು ನಿರ್ಮಿಸಿಕೊಂಡಿದ್ದರು. ಈಗ ಮೊದಲನೆ ಮಹಡಿಯಲ್ಲಿ ಆಟವಾಡುತ್ತಿದ್ದ ಬಾಲಕಿ ಕುಟುಂಬಸ್ಥರ ನಿರ್ಲಕ್ಷ್ಯದಿಂದ ಕರೆಂಟ್‌ ಶಾಕ್‌ ಹೊಡೆದು ದುರಂತ ಅಂತ್ಯ ಕಂಡಿದ್ದಾಳೆ. ಬೆಳಗಾವಿ ಗ್ರಾಮೀಣ ‌ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದೆ. ಇನ್ನು ಬಾಲಕಿ ಮೃತ ದೇವಹನ್ನು ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಾಗಿದೆ. ಕುಟುಂಬ ಸದಸ್ಯರ ಆಕ್ರಂದ ಮುಗಿಲು ಮುಟ್ಟಿತ್ತು.

ಬೈಕ್‌ ನಿಲ್ಲಿಸುವ ವಿಚಾರಕ್ಕೆ ಮಚ್ಚಿನಿಂದ ಹಲ್ಲೆ: 
ವಿಜಯಪುರ : ಬೈಕ್ ನಿಲ್ಲಿಸುವ ವಿಚಾರಕ್ಕೆ ಮಾತಿನ ಚಕಮಕಿ ಮಚ್ಚಿನಿಂದ ಕೊಲೆಗೆ ಯತ್ನಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.  ವಿಜಯಪುರ ನಗರದ ಟಕ್ಕೆಯಲ್ಲಿ ನಡೆದಿರುವ ಘಟನೆ. ಕಿರಣ ಗಜಕೋಶ ಹಲ್ಲೆಗೊಳಗಾದವರು. ಬಸಯ್ಯ ಹಿರೇಮಠ, ಗೌರಮ್ಮ ಹಿರೇಮಠ, ಸಿದ್ದರಾಮಯ್ಯ ಹಿರೇಮಠರಿಂದ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನ. ಕೊಡಲಿ ಮಚ್ಚು ಹಿಡಿದು ಹಲ್ಲೆ. ಇತ್ತ ಮನೆಯಲ್ಲಿದ್ದ ಕೊಡಲಿ ತಂದು ಹಲ್ಲೆ ನಡೆಸಿದ ಗೌರಮ್ಮ. ಹಲ್ಲೆಯ ವಿಡಿಯೋ ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Bengaluru- ಯುವತಿ ಸಾವಿಗೆ ಕಾರಣವಾದ ಕಾರು ಚಾಲಕ ಅರೆಸ್ಟ್‌: ಬಿಬಿಎಂಪಿ ಅಧಿಕಾರಿಗಳ ಅರೆಸ್ಟ್‌ ಯಾವಾಗ?

ರಣಾಂಗಣವಾದ ಮನೆಯಂಗಳ: ಮನೆಯ ಎದುರು ನಿಲ್ಲಿಸಿದ್ದ ಬೈಕ್ ತೆಗೆಯುವಂತೆ ಹೇಳಿದ್ದ ಕಿರಣ ಗಜಕೋಶ. ಅಷ್ಟಕ್ಕೆ ಆಸಾಮಿ ಮನೆಯೊಳಗಿಟ್ಟಿದ್ದ ಮಚ್ಚು ಹಿಡಿದು ಹೊರಗ ಬಂದಿರುವ ಅಸಾಮಿ ಎದುರುಮನೆಯವನಿಗೆ ಏಕಾಏಕಿ ಕುತ್ತಿಗೆ ಬೀಸಿದ್ದಾನೆ. ಎರಡು ಸಲ ಮಚ್ಚು ಬೀಸಿದರೂ ಅದೃಷ್ಟವಶಾತ್ ಮಿಸ್ ಆಗಿದೆ. ಬೀಸಿದ ರೀತಿ ಭಯಂಕರ. ನೋಡನೋಡುತ್ತಿದ್ದಂತೆ ರಣರಂಗವಾದ ಮನೆಯಂಗಳ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು ಬೆಚ್ಚಿಬಿಳಿಸುವಂತಿದೆ. ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

click me!