
ವಿಜಯಪುರ (ಮೇ.23) : ಬೈಕ್ ನಿಲ್ಲಿಸುವ ವಿಚಾರಕ್ಕೆ ಮಾತಿನ ಚಕಮಕಿ ಮಚ್ಚಿನಿಂದ ಕೊಲೆಗೆ ಯತ್ನಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ನಗರದ ಟಕ್ಕೆಯಲ್ಲಿ ನಡೆದಿರುವ ಘಟನೆ. ಕಿರಣ ಗಜಕೋಶ(Kiran gajakosh) ಹಲ್ಲೆಗೊಳಗಾದವರು. ಬಸಯ್ಯ ಹಿರೇಮಠ, ಗೌರಮ್ಮ ಹಿರೇಮಠ, ಸಿದ್ದರಾಮಯ್ಯ ಹಿರೇಮಠರಿಂದ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನ. ಕೊಡಲಿ ಮಚ್ಚು ಹಿಡಿದು ಹಲ್ಲೆ. ಇತ್ತ ಮನೆಯಲ್ಲಿದ್ದ ಕೊಡಲಿ ತಂದು ಹಲ್ಲೆ ನಡೆಸಿದ ಗೌರಮ್ಮ. ಹಲ್ಲೆಯ ವಿಡಿಯೋ ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪ್ರೀತಿಸಿದ ಹುಡುಗನ ಬದಲು ಬೇರೊಬ್ಬನ ಜತೆ ನಿಶ್ಚಿತಾರ್ಥ: ಭಾವಿ ಪತಿಯ ಕತ್ತಿಗೆ ಚೂರಿ ಹಾಕಿದ ಕ್ರಿಮಿನಲ್ ಗರ್ಲ್!
ಏನಾಯ್ತು: ಮನೆಯ ಎದುರು ನಿಲ್ಲಿಸಿದ್ದ ಬೈಕ್ ತೆಗೆಯುವಂತೆ ಹೇಳಿದ್ದ ಕಿರಣ ಗಜಕೋಶ. ಅಷ್ಟಕ್ಕೆ ಆಸಾಮಿ ಮನೆಯೊಳಗಿಟ್ಟಿದ್ದ ಮಚ್ಚು ಹಿಡಿದು ಹೊರಗ ಬಂದಿರುವ ಅಸಾಮಿ ಎದುರುಮನೆಯವನಿಗೆ ಏಕಾಏಕಿ ಕುತ್ತಿಗೆ ಬೀಸಿದ್ದಾನೆ. ಎರಡು ಸಲ ಮಚ್ಚು ಬೀಸಿದರೂ ಅದೃಷ್ಟವಶಾತ್ ಮಿಸ್ ಆಗಿದೆ. ಬೀಸಿದ ರೀತಿ ಭಯಂಕರ. ನೋಡನೋಡುತ್ತಿದ್ದಂತೆ ರಣರಂಗವಾದ ಮನೆಯಂಗಳ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು ಬೆಚ್ಚಿಬಿಳಿಸುವಂತಿದೆ.
ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ
ತುಮಕೂರು: ಮಚ್ಚಿನಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ತುಮಕೂರು ಹೊರವಲಯದ ಯಲ್ಲಾಪುರದಲ್ಲಿ ನಡೆದಿದೆ.
ಬಳ್ಳಾರಿ: ಪತ್ನಿಯನ್ನು ಕೊಲ್ಲಲು ಮಚ್ಚು ತಂದ ಪಾನಮತ್ತ ಪತಿರಾಯ!
ಚಿಕ್ಕಮಗಳೂರು ಮೂಲದ ಜಾಕೀರ್ ಇಸ್ಮಾಯಿಲ… (36) ಕೊಲೆಯಾದ ವ್ಯಕ್ತಿ. ತುಮಕೂರು ಹೊರಹೊಲಯದಲ್ಲಿರುವ ಯಲ್ಲಾಪುರದ ಅಂಗಡಿಯಲ್ಲಿ ಘಟನೆ ಸಂಭವಿಸಿದ್ದು, ಇಬ್ಬರು ಮಕ್ಕಳೊಂದಿಗೆ ಯಲ್ಲಾಪುರದ ಗಣೇಶ ದೇವಸ್ಥಾನದ ಬಳಿ ವಾಸವಿದ್ದ ಜಾಕೀರ್ ನೂತನ ಟೈಲ್ಸ್‌ನ ಅಂಗಡಿಯನ್ನು 2 ತಿಂಗಳ ಹಿಂದೆ ಯಲ್ಲಾಪುರದಲ್ಲಿ ತೆರೆದಿದ್ದರು. ಅಂಗಡಿಯಲ್ಲಿ ಕಾರ್ಯನಿರ್ವಹಿಸುವ ವೇಳೆ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರಬಹುದು ಎನ್ನಲಾಗಿದೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು ಜಾಕೀರ್ ಸಹಾಯಕ ಖಾದರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ