ಒಳ ಉಡುಪಿನಲ್ಲಿ ಚಿನ್ನ ಕಳ್ಳಸಾಗಣೆ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ 1.26 ಕೋಟಿ ಮೌಲ್ಯದ ಚಿನ್ನ ವಶ

By Govindaraj S  |  First Published Nov 18, 2023, 7:43 AM IST

ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದಲ್ಲಿ ಕಳೆದೆರಡು ದಿನಗಳಿಂದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ₹1.26 ಕೋಟಿ ಮೌಲ್ಯದ ಎರಡು ಕೆ.ಜಿ ಚಿನ್ನವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶ ಪಡೆಸಿಕೊಂಡಿದ್ದಾರೆ. 


ಬೆಂಗಳೂರು (ನ.18): ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದಲ್ಲಿ ಕಳೆದೆರಡು ದಿನಗಳಿಂದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ₹1.26 ಕೋಟಿ ಮೌಲ್ಯದ ಎರಡು ಕೆ.ಜಿ ಚಿನ್ನವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶ ಪಡೆಸಿಕೊಂಡಿದ್ದಾರೆ. ಗುರುವಾರ ತಡರಾತ್ರಿ ಬ್ಯಾಂಕಾಕ್‌ನಿಂದ ಬಂದ ಮೂವರು ಪ್ರಯಾಣಿಕರು ಹಾಗೂ ಕೊಲಂಬೋದಿಂದ ಬಂದ ಇಬ್ಬರು ಮಹಿಳಾ ಪ್ರಯಾಣಿಕರನ್ನು ತಪಾಸಣೆ ನಡೆಸಿದ ವೇಳೆ ಚಿನ್ನದ ಸರವನ್ನು ಅಂಗಿಯ ಕಲರ್‌ನಲ್ಲಿ ಹಾಗೂ ಒಳಉಡುಪಿನಲ್ಲಿ ಬಚ್ಚಿಟ್ಟಿಕೊಂಡು ಕಳ್ಳ ಸಾಗಣೆ ಚಿನ್ನ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. 

ಇವರಿಂದ ಒಟ್ಟು 966 ಗ್ರಾಂ ಚಿನ್ನದ ಸರ ಜಪ್ತಿ ಮಾಡಲಾಗಿದ್ದು, ಇದರ ಮೌಲ್ಯ ₹58,39,806 ಎಂದು ಅಂದಾಜಿಸಲಾಗಿದೆ. ಮಸ್ಕಟ್‌ನಿಂದ ಶುಕ್ರವಾರ ಆಗಮಿಸಿದ ವ್ಯಕ್ತಿಯೊಬ್ಬ ಸೋಂಟದ ಬೆಲ್ಟ್‌ನಲ್ಲಿ 1.113 ಗ್ರಾಂ ತೂಕದ ಚಿನ್ನದ ಬಿಸ್ಕೆಟ್‌ ಅನ್ನು ಕಳ್ಳ ಸಾಗಣೆ ಮಾಡುತ್ತಿದ್ದ ವೇಳೆ ಕಸ್ಟಮ್ಸ್‌ ಅಧಿಕಾರಿಗಳಿಗೆ ಸಿಕ್ಕಿಬಿದಿದ್ದು, ಇದರ ಮೌಲ್ಯ ₹ 68,18,812 ಎಂದು ಅಂದಾಜಿಸಲಾಗಿದೆ. ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Tap to resize

Latest Videos

ಬಿಜೆಪಿಯಲ್ಲಿ ಮತ್ತೆ ಅತೃಪ್ತಿ ಸ್ಫೋಟ: ಸಭೆಗೆ ಯತ್ನಾಳ್-ಜಾರಕಿಹೊಳಿ ಬಹಿಷ್ಕಾರ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ವಶ: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಅ.31ರಿಂದ ನ.5 ರ ನಡುವೆ ಮೂವರು ಪ್ರಯಾಣಿಕರಿಂದ ಒಟ್ಟು 42,90,060 ಲಕ್ಷ ರು. ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ. ಅ.31ರಿಂದ ನ.2ರ ನಡುವೆ ದುಬೈನಿಂದ ಮಂಗಳೂರಿಗೆ ಏರ್‌ ಇಂಡಿಯಾದ ವಿಮಾನದ ಮೂಲಕ ಬಂದಿಳಿದ ಇಬ್ಬರಿಂದ ಒಟ್ಟು 17,49,660 ರು. ಮೌಲ್ಯದ 228 ಗ್ರಾಂ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

ಚಿನ್ನವನ್ನು ಪೇಸ್ಟ್‌ ರೂಪದ ಚಿನ್ನ ಹಾಗೂ ಚಿನ್ನದ ಸರವನ್ನು ಒಳ ಉಡುಪು, ಸಾಕ್ಸ್‌ ಗಳಲ್ಲಿ ಬಚ್ಚಿಟ್ಟು ಸಾಗಿಸಲಾಗುತ್ತಿತ್ತು. ಇನ್ನೊಂದು ಪ್ರಕರಣದಲ್ಲಿ ನ.5ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಕೇರಳ ಮೂಲದ ಪ್ರಯಾಣಿಕ ಚಾಕಲೇಟ್‌ ರೂಪದಲ್ಲಿ ಚಿನ್ನದ ಪೌಡರ್‌ ಮಾಡಿಕೊಂಡು ಬಂದು ಸಿಕ್ಕಿಬಿದ್ದಿದ್ದಾನೆ. ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕನ ಟ್ರಾಲಿ ಬ್ಯಾಗನ್ನು ಕಸ್ಟಮ್ಸ್‌ ಅಧಿಕಾರಿಗಳು ಸ್ಕ್ಯಾನ್‌ ಮಾಡಿ ಸಂಶಯ ಬಂದಿದ್ದರಿಂದ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಟಿಫ್ನಿ ಎಕ್ಲೇರ್ಸ್‌ ಹೆಸರಿನ ಚಾಕಲೇಟ್‌ ಪ್ಯಾಕೆಟ್‌ ಕಂಡುಬಂದಿದೆ. 

ಬಳ್ಳಾರಿ ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನ ವಿರುದ್ಧ ಲವ್, ಸೆಕ್ಸ್‌, ಧೋಖಾ ಆರೋಪ

ಚಾಕಲೇಟ್‌ ತೆರೆದು ನೋಡಿದಾಗ ಹಳದಿ ಬಣ್ಣದ ಪೌಡರ್‌ ಕಂಡು ಬಂದಿತ್ತು. 24 ಕ್ಯಾರೆಟ್‌ ಶುದ್ಧ ಚಿನ್ನವನ್ನು ಪೌಡರ್‌ ರೂಪಕ್ಕಿಳಿಸಿ ಬೇರೊಂದು ಹುಡಿಯ ಜೊತೆಗೆ ಮಿಕ್ಸ್‌ ಮಾಡಿ, ಬೆಳ್ಳಿಯ ಕಲರಿನ ಪ್ಲಾಸ್ಟಿಕ್‌ ಪೇಪರಿನಲ್ಲಿ ಕಟ್ಟಿಡಲಾಗಿತ್ತು. ಈ ರೀತಿಯ ಏಳು ಚಾಕಲೇಟ್‌ ಪತ್ತೆಯಾಗಿದ್ದು 420 ಗ್ರಾಮ್‌ ಚಿನ್ನ ಇರುವುದನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಇದರ ಮಾರುಕಟ್ಟೆಮೌಲ್ಯ 25,49,400 ರು. ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

click me!