ಕಾಲ್ ಮಾಡುವಂತೆ ಮಹಿಳೆಗೆ ಟಾರ್ಚರ್; ಡಿಶ್ ರಿಪೇರಿ ಬಶೀರ್‌ನಿಗೆ ಹಿಗ್ಗಾಮುಗ್ಗ ಥಳಿಸಿದ ಗಂಡ!

By Ravi Janekal  |  First Published Jul 16, 2023, 9:53 AM IST

ಮಹಿಳೆಗೆ ನಂಬರ್ ಕೊಟ್ಟು ಕಾಲ್ ಮಾಡುವಂತೆ ಪೀಡಿಸುತ್ತಿದ್ದ ಕಾಮುಕನಿಗೆ ಅಟ್ಟಾಡಿಸಿ ಹೊಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಟ್ಟಿಮನೆ ಗ್ರಾಮದಲ್ಲಿ ನಡೆದಿದೆ.


ಚಿಕ್ಕಮಗಳೂರು (ಜು.16): ಮಹಿಳೆಗೆ ನಂಬರ್ ಕೊಟ್ಟು ಕಾಲ್ ಮಾಡುವಂತೆ ಪೀಡಿಸುತ್ತಿದ್ದ ಕಾಮುಕನಿಗೆ ಅಟ್ಟಾಡಿಸಿ ಹೊಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಟ್ಟಿಮನೆ ಗ್ರಾಮದಲ್ಲಿ ನಡೆದಿದೆ.

ಬಶೀರ್ ಮಹಿಳೆಗೆ ಕಾಲ್ ಮಾಡುವಂತೆ ಪೀಡಿಸಿ ಧರ್ಮದೇಟು ತಿಂದಿರೋ ವ್ಯಕ್ತಿ. ಜಯನಗರದಲ್ಲಿ ಡಿಶ್ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದ ಬಶೀರ್. ಪರಿಚಯದ ಮಹಿಳೆಯರಿಗೆ ಮಾತನಾಡುವ ನೆಪದಲ್ಲಿ ಮೊಬೈಲ್ ನಂಬರ್ ಕೊಡುತ್ತಿದ್ದ ಬಳಿಕ ಕಾಲ್ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ. ಈ ಹಿಂದೆಯೂ ಇದೇ ಕೆಲಸ ಮಾಡಿ ಏಟು ತಿಂದಿದ್ದ. ಆದರೂ ಮಹಿಳೆಯರಿಗೆ ಟಾರ್ಚರ್ ಕೊಡುವ ಬುದ್ಧಿ ಬಿಟ್ಟಿರಲಿಲ್ಲ. ಕಟ್ಟೆಮನೆ ಗ್ರಾಮದ ರಮೇಶ್ ಎಂಬುವವರ ಪತ್ನಿಗೆ ಮೊಬೈಲ್ ನಂಬರ್ ನೀಡಿದ್ದ ಬಶೀರ್.  ಮೊಬೈಲ್ ನಂಬರ್ ನೀಡಿ ಕಾಲ್ ಮಾಡುವಂತೆ ಪೀಡಿಸುತ್ತಿದ್ದ. ಬಶೀರ್ ಕಾಟಕ್ಕೆ ಬೇಸತ್ತುಹೋಗಿದ್ದ ಮಹಿಳೆ. ಪೀಡಿಸುತ್ತಿರುವ ವಿಚಾರ ಗಂಡನಿಗೆ ಗೊತ್ತಾಗಿದೆ. ಕುಪಿತಗೊಂಡು ಬಶೀರ್‌ನಿಗೆ ನಡುರಸ್ತೆಯಲ್ಲೇ ಅಟ್ಟಾಡಿಸಿ ಹೊಡೆದಿದ್ದಾನೆ. 

Tap to resize

Latest Videos

undefined

ಬಾಸ್‌ನಿಂದ ಕಿರುಕುಳ, ಬ್ರಿಟನ್‌ನ ರಾಯಲ್ ಮೇಲ್‌ನಿಂದ 25 ಕೋಟಿ ರೂ ಪರಿಹಾರ ಪಡೆದ ಭಾರತೀಯ ಉದ್ಯೋಗಿ!

 ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

ಕಿರುಕುಳ: ವೈದ್ಯಾಧಿಕಾರಿ ವಿರುದ್ಧ ದೂರು

ಕೊಪ್ಪಳ:  ತಾಲೂಕಿನ ಹಿರೇಸಿಂದೋಗಿಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಮೇಶ ಮೂಲಿಮನಿ ವಿರುದ್ಧ ಅಮೀನಾಬೇಗಂ ಎನ್ನುವ ನರ್ಸ್‌ ದೂರು ನೀಡಿದ್ದು,ಅಳವಂಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲ ತಿಂಗಳು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಕಿರುಕುಳ ನೀಡಿದ್ದಾರೆ ಮತ್ತು ವೇತನ ಪಾವತಿಗೆ ಅಡ್ಡಿಪಡಿಸಿದ್ದಾರೆ,ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ನರ್ಸ್‌ ಅಮೀನಾಬೇಗಂ ನೀಡಿದ ದೂರಿನ ಆಧಾರದ ಮೇಲೆ ಅಳವಂಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಆರೋಪಿಯ ಕುರಿತು ಮಾಹಿತಿ ಆರೋಗ್ಯ ಇಲಾಖೆಯಿಂದ ಕೇಳಲಾಗಿದೆ. ವರದಿ ಇನ್ನು ಬಂದಿಲ್ಲ ಎಂದು ಎಸ್ಪಿ ಯಶೋಧಾ ಒಂಟಿಗೋಡಿ ತಿಳಿಸಿದ್ದಾರೆ.

ಕಲಬುರಗಿ: ಹೆಣ್ಣು ಮಕ್ಕಳ ಹೆತ್ತಿದಕ್ಕೆ ಮಹಿಳೆಗೆ ಕಿರುಕುಳ

click me!