ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾರೆನ್ನಲಾದ ನಟ ದರ್ಶನ್ ಭಾವಚಿತ್ರಕ್ಕೆ ಚಿತ್ರದುರ್ಗದಲ್ಲಿ ಪ್ರತಿಭಟನಾಕಾರರು ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ (ಜೂ.12): ನಟ ದರ್ಶನ್ ಹಾಗೂ ಅವರ ಸಹಚರರಿಂದ ರಾಜ್ಯದಲ್ಲಿ ತೀವ್ರ ಹಿಂಸಾತ್ಮಕವಾಗಿ ಕೊಲೆಯಾದ ರೇಣುಕಾಸ್ವಾಮಿ ಹತ್ಯೆಯನ್ನು ಖಂಡಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸಾರ್ವಜನಿಕರು ದರ್ಶನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಡಿfನಾಪ್ ಮಾಡಿ ಬೆಂಗಳೂರಿಗೆ ಕರೆದೊಯ್ದು ಕೊಲೆ ಮಾಡಿ ಬೀದಿ ಹೆಣವಾಗಿ ಬೀಸಾಡಿದ ನಟ ದರ್ಶನ್ ಹಾಗೂ ಅವರ ಸಹಚರರ ವಿರುದ್ಧ ಚಿತ್ರದುರ್ಗದ ಜನತೆ ಹಾಗೂ ವಿವಿಧ ಸಮುದಾಯ, ಸಂಘಟನೆಗಳಿಂದ ಬುಧವಾರ ಪ್ರತಿಭಟನೆ ಮಾಡಲಾಗುತ್ತಿದೆ. ಈ ವೇಳೆ ರೇಣುಕಾಸ್ವಾಮಿ ಹತ್ಯೆ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರರು ನಟ ದರ್ಶನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
ನಂಗೆ ಹುಟ್ಟೋ ಮಗು ಅಪ್ಪ ಎಲ್ಲಿ ಅಂದ್ರೆ ಏನು ಹೇಳೋದು? ಹತ್ಯೆಯಾದ ರೇಣುಕಾಸ್ವಾಮಿ ಹೆಂಡ್ತಿ ಕಣ್ಣೀರು
ಪ್ರತಿಭಟನೆಯಲ್ಲಿ ವೀರಶೈವ ಸಮಾಜ, ಜಂಗಮ ಸಮಾಜ, ವಿವಿಧ ಸಂಘಟನೆಗಳು ಸೇರಿ ನಡೆಸುತ್ತಿದ್ದಾರೆ. ಇನ್ನು ವೀರಶೈವ ಸಮುದಾಯದ ನೂರಾರು ಜನರಿಂದ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದ್ದು, ಕೆಲವರು ದರ್ಶನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದರೆ, ಮತ್ತೆ ಕೆಲವರು ಬಳಿಕ ದರ್ಶನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ, ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್ ನವೀನ್, ಮಾಜಿ ಶಾಸಕರಾದ ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್ ಭಾಗಿಯಾಗಿದ್ದಾರೆ.
'ನನ್ನ ಮಗನ್ನ ಸಾಯಿಸಿದಂತೆ ನಟ ದರ್ಶನನ್ನೂ ಸಾಯಿಸಿ ಬಿಡಿ' ಮೃತ ರೇಣುಕಾಸ್ವಾಮಿ ತಾಯಿ ಆಕ್ರೋಶ!
ದರ್ಶನ್ ನೇರವಾಗಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ, ಶಿಕ್ಷೆ ಆಗಲೇಬೇಕು: ಚಿತ್ರದುರ್ಗದಲ್ಲಿ ಮಾಜಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ಮಾತನಾಡಿ, ದರ್ಶನ್ ಅನೇಕ ಚಿತ್ರ ಮಾಡಿ ಸಮಾಜ ತಿದ್ದುವ ಕೆಲಸ ಮಾಡಿದ್ದರು. ಆದರೆ, ನಿಜ ಜೀವನದಲ್ಲಿ ಒಬ್ಬ ಭಿನ್ನವಾದ ವ್ಯಕ್ತಿಯಾಗಿದ್ದಾರೆ. ತಂದೆ- ತಾಯಿ ಗಳ ನೋವು ಎಂಥವರಿಗೂ ಕಣ್ಣೀರು ತರಿಸಿದೆ. ಒಂದು ವರ್ಷದ ಕೆಳಗೆ ಮದುವೆ ಆಗಿ, ಪತ್ನಿ ಗರ್ಭಿಣಿ ಇದ್ದಾರೆ. ರಾಜ್ಯ ಸರ್ಕಾರ ನಾಲ್ಕೈದು ಕೇಸ್ ನಲ್ಲಿ ಸರಿಯಾದ ಕ್ರಮ ಜರುಗಿಸಿಲ್ಲ. ನಟ ದರ್ಶನ್ ಕಳೆದ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಗೃಹ ಸಚಿವರು ಕೂಡಾ ತನಿಖೆ ಮಾಡಿ ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ. ಕಾನೂನಿನ ಕಠಿಣ ಶಿಕ್ಷೆ ದರ್ಶನ್ ಗೆ ನೀಡಬೇಕು. ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದಾನೆ. ಹಿರಿಯರಿಗೆ ಮಗನ ವಿಚಾರ ತರ್ಬೋದಿತ್ತು. ಕಾನೂನಿನಲ್ಲೂ ಕೂಡಾ ಕಂಪ್ಲೀಟ್ ಕೊಡಲು ಅವಕಾಶ ಇತ್ತು.ಕೊಲೆ ಮಾಡುವ ಕೆಲಸ ಮಾಡಿದ್ದು ನಿಜಕ್ಕೂ ಸರಿಯಲ್ಲ. ನೇರವಾಗಿ ಈ ತಂಡ ಬಾಗಿಯಾಗಿದೆ. ಇಡೀ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.