ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಾಬಸ್‌ಪೇಟೆ (ಮಾ.6) : ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಮನಗರ(Ramanagara) ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಕುರುಬರಹಳ್ಳಿ(Kurubarahalli) ಮಹೇಶ್(29) ಮೃತ ದುರ್ದೈವಿ. ಪಟ್ಟಣದ ಸಪ್ತಗಿರಿ ಬಾರ್ ಅಂಡ್ ರೆಸ್ಟೋರೆಂಟ್(Bar and Restaurant)ನಲ್ಲಿ ಘಟನೆ ನಡೆದಿದ್ದು, ಮೃತ ಮಹೇಶ್ ಕಳೆದ ಏಳೆಂಟು ವರ್ಷಗಳಿಂದ ಸಪ್ತಗಿರಿ ಬಾರ್‌ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದು ಒಂದು ವರ್ಷದಿಂದ ಕೆಲಸ ಬಿಟ್ಟಿದ್ದ. 15 ದಿನಗಳಿಂದ ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದ ಎನ್ನಲಾಗಿದೆ. ಭಾನುವಾರ ಎಂದಿನಂತೆ ಕೆಲಸಕ್ಕೆ ಬಂದಿದ್ದು ಸುಮಾರು 10 ಗಂಟೆಯಲ್ಲಿ ಕೊಠಡಿಯೊಳಗೆ ಹೋಗಿದ್ದು ಮಧ್ಯಾಹ್ನ 1.30 ಗಂಟೆಯಾದರೂ ಬಾರದ ಕಾರಣ ಅನುಮಾನಗೊಂಡು ಬಾಗಿಲು ಬಡಿದರೂ, ಕರೆ ಮಾಡಿದರೂ ಸ್ವೀಕರಿಸಿಲ್ಲ. ಕಿಟಕಿಯಿಂದ ನೋಡಿದಾಗ ಪ್ಯಾನಿಗೆ ಕೇಬಲ್ ವೈರಿನಿಂದ ನೇಣು ಬಿಗಿ
ಒಂದೇ ತಟ್ಟೇಲಿ ಅನ್ನ ತಿಂದು, ಸ್ಕೆಚ್ ಹಾಕಿದ ಸ್ನೇಹಿತರು: ಪಾರ್ಟಿಗೆಂದು ಕರೆದೊಯ್ದು ಕೊಲೆ
ಬದುಕಿದ್ದಾಗಲೇ ಮರಣ ಪತ್ರ ನೀಡಿರುವ ಭೂಪರು!
ಹಾರೋಹಳ್ಳಿ: ಹಾರೋಹಳ್ಳಿಯಲ್ಲಿ ಮಹಿಳೆಯೊಬ್ಬರು ಬದುಕಿದ್ದಾಗಲೇ ಆಕೆಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರವನ್ನು ವಿತರಿಸಲಾಗಿದ್ದು ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಹಾರೋಹಳ್ಳಿ ಅಡೆ ಬೀದಿ ನಿವಾಸಿ ಎಚ್.ಆರ್.ರುದ್ರಮ್ಮ 2023ರ ಫೆ.18ರಂದು ಬೆಂಗಳೂರಿನ ವೈದೇಹಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. ಅಂತಿಮ ವಿಧಿ ವಿಧಾನದ ನಂತರ ಅವರ ಕುಟುಂಬಸ್ಥರು ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಹೆಸರಿನಲ್ಲಿ 2022ರ ಜೂನ್ 30ರಂದು ಮರಣ ಪ್ರಮಾಣ ಪತ್ರ ವಿತರಣೆ ಯಾಗಿರುವುದು ಈ ವೇಳೆ ಕಂಡು ಬಂದಿದೆ. ಹಾರೋಹಳ್ಳಿಯ ವೃತ್ತ ಗ್ರಾಮ ಲೆಕ್ಕಾಧಿಕಾರಿ ಹೆಸರಿನಲ್ಲಿ ಈ ಪ್ರಮಾಣ ಪತ್ರವನ್ನು ನೀಡಲಾಗಿದ್ದು ಈ ವಿವರ ಕೇಳಿ ಕುಟುಂಬಸ್ಥರು ದಂಗು ಬಡಿದು ಹೋಗಿದ್ದಾರೆ.
ಬೆಂಗಳೂರು: ತಿರುಪತಿ ದರ್ಶನ ಮಾಡಿ ಮರಳಿ ಬರುವಾಗ ಮರಕ್ಕೆ ಡಿಕ್ಕಿ: ಇಬ್ಬರು ಸಾವು
ಗಾಳಿ ರಭಸಕ್ಕೆ ಉರುಳಿ ಬಿದ್ದ ತೆಂಗಿನಮರ, ವಿದ್ಯುತ್ ಕಂಬ
ದೊಡ್ಡಬಳ್ಳಾಪುರ: ಗಾಳಿ ರಭಸಕ್ಕೆ ಹಳೆಯ ತೆಂಗಿನ ಮರ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದ ಕಾರಣ ಮೂರು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದೊಡ್ಡಬಳ್ಳಾಪುರ ನಗರದ ಕಚೇರಿ ಪಾಳ್ಯದಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ಗಾಳಿಯ ರಭಸಕ್ಕೆ ಮನೆಯ ಮುಂಭಾಗದಲ್ಲಿದ್ದ ತೆಂಗಿನ ಮರ ಬುಡ ಸಮೇತ ಮುರಿದು ವಿದ್ಯುತ್ ಲೈನ್ ಮೇಲೆ ಬಿದ್ದಿದೆ. ತೆಂಗಿನ ಮರದ ಭಾರಕ್ಕೆ ಮೂರು ವಿದ್ಯುತ್ ಕಂಬಗಳು ಮುರಿದು ರಸ್ತೆಗೆ ಬಿದ್ದಿದೆ. ಘಟನೆ ನಡೆದ ತಕ್ಷಣ ಬೆಸ್ಕಾಂಗೆ ಸುದ್ದಿ ಮುಟ್ಟಿಸಿದ್ದರಿಂದ ವಿದ್ಯುತ್ ಸರಬರಾಜು ನಿಲ್ಲಿಸಲಾಗಿತ್ತು. ರಸ್ತೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಘಟನೆ ಸಂಭವಿಸಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.