ಒಂದೇ ತಟ್ಟೇಲಿ ಅನ್ನ ತಿಂದು, ಸ್ಕೆಚ್‌ ಹಾಕಿದ ಸ್ನೇಹಿತರು: ಪಾರ್ಟಿಗೆಂದು ಕರೆದೊಯ್ದು ಕೊಲೆ

By Sathish Kumar KH  |  First Published Mar 6, 2023, 12:51 PM IST

ಹಾಸನ ನಗರದಲ್ಲಿ ರೌಡಿ ಶೀಟರ್‌ ಸ್ನೇಹಿತನನ್ನು ಪಾರ್ಟಿಗೆಂದು ಕರೆದುಕೊಂಡು ಹೋಗಿ ಕೊಲೆ ಮಾಡಿ ಅರಣ್ಯದಲ್ಲಿ ಹೂತು ಹಾಕಿರುವ ಘಟನೆ ಇಂದು ಬೆಳಕಿಗೆ ಬಂದಿದೆ.


ಹಾಸನ (ಮಾ.06): ಡಾ. ಶಿವರಾಜ್‌ ಕುಮಾರ್‌ ಅಭಿನಯದ ಜೋಗಿ ಚಿತ್ರದಲ್ಲಿ ಹೇಳುವಂತೆ ಒಂದೇ ತಟ್ಟೇಲ್‌ ಅನ್ನ ತಿಂದು ಸ್ಕೆಚ್ಚು ಹಾಕ್ತಾರೋ ಎನ್ನುವ ರೀತಿಯಲ್ಲಿ ಹಾಸನ ನಗರದಲ್ಲಿ ರೌಡಿ ಶೀಟರ್‌ ಸ್ನೇಹಿತನನ್ನು ಪಾರ್ಟಿಗೆಂದು ಕರೆದುಕೊಂಡು ಹೋಗಿ ಕೊಲೆ ಮಾಡಿ ಅರಣ್ಯದಲ್ಲಿ ಹೂತು ಹಾಕಿರುವ ಘಟನೆ ಇಂದು ಬೆಳಕಿಗೆ ಬಂದಿದೆ.

ಇನ್ನು ಕೊಲೆಯಾದ ಮೃತ ದುರ್ದೈವಿಯನ್ನು ನಟೋರಿಯಸ್ ರೌಡಿಶೀಟರ್‌ ಪುಲ್ಲಿ@ ಸಂತೋಷ್ (36) ಎಂದು ಗುರುತಿಸಲಾಗಿದೆ. ಈತನ ಸ್ನೇಹಿತರೇ ಪಾರ್ಟಿ ಮಾಡೋಣವೆಂದು ಕರೆದುಕೊಂಡು ಹೋಗಿ ರೌಡಿಸಂನಲ್ಲಿ ತಾವು ಹೆಸರು ಮಾಡಬೇಕು ಎಂಬ ಉದ್ದೇಶದಿಂದ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಈ ಘಟನೆ ಚಿಕ್ಕಮಗಳೂರು ಜಿಲ್ಲೆ, ಕುರುವಂಗಿ ಗ್ರಾಮದ ಅರಣ್ಯದಲ್ಲಿ ನಡೆದಿದೆ. ಅಲ್ಲಿಯೇ ಸ್ನೇಹಿತನ ಮೃತ ದೇಹವನ್ನು ಹೂತು ಹಾಕಿ ವಾಪಾಸ್‌ ಹಾಸನಕ್ಕೆ ಬಂದಿದ್ದರು.

Tap to resize

Latest Videos

ಪ್ರೀತಿಸಿ ಮದುವೆಯಾದರೂ ತಪ್ಪಲಿಲ್ಲ ವರದಕ್ಷಿಣೆ ಕಿರುಕುಳ: ಶಾಲೆ ಕೊಠಡಿಯಲ್ಲಿಯೇ ಶಿಕ್ಷಕಿ ಆತ್ಮಹತ್ಯೆ

ತಿಂಗಳ ಹಿಂದೆಯೇ ನಾಪತ್ತೆ ಪ್ರಕರಣ ದಾಖಲು: ಇನ್ನು ಫೆ.9 ರಂದು ಕಾಣಿಯಾಗಿದ್ದ ಪುಲ್ಲಿ ಅಲಿಯಾಸ್‌ ಸಂತೋಷ್‌ ಕಾಣೆಯಾಗಿದ್ದನು. ಈ ಘಟನೆ ಕುರಿತಂತೆ ಹಾಸನದ ಬಡಾವಣೆ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆಯನ್ನು ಕೈಗೆತ್ತಿಕೊಂಡ ಪೊಲೀಸರು ಆತನ ಫೋನ್‌ ಕರೆಗಳ ಮಾಹಿತಿ ಹಾಗೂ ನಗರದಲ್ಲಿರುವ ವಿವಿಧ ಸಿಸಿಟಿವಿ ಫೂಟೇಜ್‌ಗಳನ್ನು ಆಧರಿಸಿ ಕೊನೆಯ ಬಾರಿಗೆ ಯಾರೊಂದಿಗೆ ಹೋಗಿದ್ದಾನೆ ಎಂದು ಪತ್ತೆ ಮಾಡಿದ್ದಾರೆ. ಆಗ ಸಂತೋಷ್‌ನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾವೇ ಕೊಲೆ ಮಾಡಿ ಅರಣ್ಯದಲ್ಲಿ ಹೂತು ಹಾಕಿರುವುದಾಗಿ ಒಪ್ಪಿಕೊಂಡಿದ್ದಾರೆ.

ಅರಣ್ಯದಲ್ಲಿಯೇ ಮೃತದೇಹ ಅಂತ್ಯಕ್ರಿಯೆ: ಕೊಲೆಯಾದ ಪುಲ್ಲಿ ಸ್ನೇಹಿತರಾದ ಪ್ರೀತಮ್ ಮತ್ತು ಕೀರ್ತಿ ಬಂಧಿತ ಆರೋಪಿಗಳು ಆಗಿದ್ದಾರೆ. ಇನ್ನು ಮೃತ ರೌಡಿಶೀಟರ್‌ ಸಂತೋಷ್ 307 ಹಾಗೂ 302 ಪ್ರಕರಣಗಳಲ್ಲಿ ಆರೋಪಿಯಾಗಿದ್ದನು. ಇನ್ನು ರೌಡಿಶೀಟರ್‌ ಪುಲ್ಲಿ ಕೊಲೆ ಪ್ರಕರಣದಲ್ಲಿ ಇಬ್ಬರು ಕೊಲೆ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಅರಣ್ಯದಲ್ಲಿ ಹೂತು ಹಾಕಿದ್ದ ಶವವನ್ನು ಹೊರಕ್ಕೆ ತೆಗೆದ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿ ಚಿಕ್ಕಮಗಳೂರು ಅರಣ್ಯದಲ್ಲೇ ರೌಡಿಶೀಟರ್‌ ಅವರ ಕೆಲವು ಕುಟುಂಬ ಸದಸ್ಯರ ನೇತೃತ್ವದಲ್ಲಿ ಪೊಲೀಸರೇ ಅಂತ್ಯಸಂಸ್ಕಾರ ನಡೆಸಿದ್ದಾರೆ.

ಕೇರಳದ ನರ್ಸಿಂಗ್ ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಸ್ನೇಹಿತರಿಂದಲೇ ಅತ್ಯಾಚಾರ

ರೌಡಿಗಳ ಗುಂಪಿನಲ್ಲಿ ವೈಮನಸ್ಸು:  ಇನ್ನು ಕೊಲೆಯಾದ ರೌಡಿಶೀಟರ್‌ ಪುಲ್ಲಿ ಹಾಗೂ ಆತನ ಸ್ನೇಹಿತರು ಕೂಡ ರೌಡಿಶೀಟರ್‌ಗಳು ಆಗಿದ್ದರು. ಆದರೆ, ಅವರ ರೌಡಿ ಗುಂಪಿನಲ್ಲಿಯೇ ವೈಮನಸ್ಸು ಉಂಟಾಗಿದೆ. ಹೀಗಾಗಿ, ಸ್ನೇಹಿತ ಪುಲ್ಲಿ ಅಲಿಯಾಸ್‌ ಸಂತೋಷ್‌ನನ್ನು ಕೊಲೆ ಮಾಡುವುದಕ್ಕೆ ಸ್ಕೆಚ್‌ ಹಾಕಿದ್ದಾರೆ. ಅದರಂತೆ, ಆತನನ್ನು ಪಾರ್ಟಿ ಮಾಡುವುದಕ್ಕೆಂದು ನೆರೆಯ ಜಿಲ್ಲೆ ಚಿಕ್ಕಗಳೂರು ಕಾಡಿನೊಳಗೆ ಕರೆದೊಯ್ದಿದ್ದಾರೆ. ಅಲ್ಲಿ ಹೋಗಿ ಇಬ್ಬರು ಸ್ನೇಹಿತರು ಸೇರಿಕೊಂಡು ಪಾರ್ಟಿಯನ್ನು ಮಾಡಿದ್ದಾರೆ. ನಂತರ, ಮೊದಲೇ ವೈಮನಸ್ಸಿನಿಂದ ಕುದಿಯುತ್ತಿದ್ದ ಸ್ನೇಹಿತರು ಪುಲ್ಲಿಯನ್ನು ಹರಿತವಾದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ. 

click me!