ಖಾಸಗಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಹಶಿಕ್ಷಕಿಯೊಬ್ಬರು ತನ್ನ ಪತಿ ಹಾಗೂ ಅತ್ತೆ, ಮಾವಂದಿರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ಮನನೊಂದು ಶಾಲೆಯ ಕೊಠಡಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಜಯನಗರ (ಮಾ.06): ಖಾಸಗಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಹಶಿಕ್ಷಕಿಯೊಬ್ಬರು ತನ್ನ ಪತಿ ಹಾಗೂ ಅತ್ತೆ, ಮಾವಂದಿರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ಮನನೊಂದು ಶಾಲೆಯ ಕೊಠಡಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ ಖಾಸಗಿ ಶಾಲೆಯಾದ ನ್ಯಾಷನಲ್ ಸ್ಕೂಲ್‌ನಲ್ಲಿ ಈ ದುರ್ಘಟನೆ ನಡೆದಿದೆ. ಬಸ್ಸಮ್ಮ ಅಲಿಯಾಸ್ ರೂಪ (34) ಮೃತ ಶಿಕ್ಷಕಿ ಆಗಿದ್ದಾರೆ. ಮೃತ ಮಹಿಳೆಯ ಗಂಡ ಅರ್ಜುನ್ ಪರಶೆಟ್ಟಿ ಕೂಡ ಖಾಸಗಿ ಶಾಲೆಯ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಆಗಿಂದಾಗ್ಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಆದರೆ, ಈಗಾಗಲೇ ಹಲವು ಬಾರಿ ವರದಕ್ಷಿಣೆ ಹಣವನ್ನು ತಂದುಕೊಟ್ಟಿದ್ದರೂ ಮನೆಯಲ್ಲಿ ಕಿರುಕುಳ ನೀಡುವುದನ್ನು ಬಿಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಶಾಲೆಯ ಕೊಠಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುಖ್ಯ ಶಿಕ್ಷಕನಿಂದ ತೀವ್ರ ಕಿರುಕುಳ: ಸಹ ಶಿಕ್ಷಕಿ ರೈಲು ಗಾಲಿಗೆ ಸಿಲುಕಿ ಆತ್ಮಹತ್ಯೆ
ಒಟ್ಟು 6 ಮಂದಿಯ ವಿರುದ್ಧ ಕಿರುಕುಳ ದೂರು: ಈ ಘಟನೆಯ ಕುರಿತು ಶಿಕ್ಷಕಿಯ ಗಂಡ ಅರ್ಜುನ್, ಅತ್ತೆ ಅಂಬಿಕಾ, ನಾದಿನಿ ಸಂಗೀತ ಸೇರಿದಂತೆ ಒಟ್ಟು 6 ಜನರ ವಿರುದ್ಧ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಆಗಿದೆ. ನ್ಯಾಷನಲ್ ಶಾಲೆ ಶಿಕ್ಷಕ ಅರ್ಜುನ್ ಕುಟುಂಬದ ಒಡೆತನಕ್ಕೆ ಸೇರಿದ ಶಾಲೆ ಆಗಿದೆ. ಇದೇ ಶಾಲೆಯಲ್ಲಿ ಗಂಡ ಹಾಗೂ ಹೆಂಡತಿ ಇಬ್ಬರೂ ಒಟ್ಟಿಗೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ನಿರಂತರ ವರದಕ್ಷಿಣೆ ತಾಳಲಾರದೇ ಸಾವನ್ನಪ್ಪಿದ್ದಾರೆ ಎಂದು ಮೃತ ಶಿಕ್ಷಕಿಯ ತವರು ಮನೆಯರು ಆರೋಪ ಮಾಡಿದ್ದಾರೆ.
ಕೆಲಸದ ನೆಪವೊಡ್ಡು ಬಂದು ಆತ್ಮಹತ್ಯೆ: ಭಾನುವಾರ ಶಾಲೆ ರಜಾ ದಿನವಾದರೂ ತನಗೆ ಕೆಲಸವಿದೆ ಎಂದು ಶಾಲೆಗೆ ತೆರಳಿದ್ದಾರೆ. ಆದರೆ, ತನಗೆ ಪರೀಕ್ಷೆಯ ಕುರಿತು ಕೆಲಸವಿದೆ ಎಂದು ಹೇಳಿಕೊಂಡು ಶಾಲೆಗೆ ಆಗಮಿಸಿದ್ದಾರೆ. ಈ ವೇಳೆ ಶಾಲೆಯ ಕೊಠಡಿಯಲ್ಲಿಯೇ ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾರೆ. ಕಳೆದ 10 ವರ್ಷಗಳ ಹಿಂದೆ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದು, ತಮ್ಮದೇ ಸ್ವಂತ ಖಾಸಗಿ ಶಾಲೆಯನ್ನು ಆರಂಭಿಸಿ ಕೆಲಸ ಮಾಡುತ್ತಿದ್ದರು. ಆದರೆ, ಮನೆಯಲ್ಲಿನ ವರದಕ್ಷಿಣೆ ಕಿರುಕುಳ ಇಡೀ ಕುಟುಂಬದ ನೆಮ್ಮದಿಯನ್ನೇ ಹಾಳು ಮಾಡಿದೆ. ಈ ಘಟನೆ ಕುರಿತಂತೆ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಮುಖ್ಯ ಶಿಕ್ಷಕನ ಕಿರುಕುಳಕ್ಕೆ ಬೇಸತ್ತು ಸಹ ಶಿಕ್ಷಕಿ ಆತ್ಮಹತ್ಯೆ: ಬೆಳಗಾವಿಯ ನಗರದ ಖಾಸಗಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕಿ ಸೇರಿಕೊಂಡು ಕಿರುಕುಳ ಕೊಡುತ್ತಿದ್ದಾರೆ ಎಂದು ಬೇಸತ್ತು ಅದೇ ಶಾಲೆಯ ಸಹ ಶಿಕ್ಷಕಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ರಾಯಬಾಗ ರೈಲು ನಿಲ್ದಾಣದ ಸಮೀತ ಈ ದುರ್ಘಟನೆ ಸಂಭವಿಸಿದೆ. ಅನ್ನಪೂರ್ಣ ರಾಜು ಬಸಾಪೂರೆ (55) ಎಂಬ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಇವರು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ನಿವಾಸಿ ಆಗಿದ್ದು, ಖಾಸಗಿ ಅನುದಾನಿತ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಈ ಖಾಸಗಿ ಶಿಕ್ಷಣ ಸಂಸ್ಥೆಯ ಹೆಡ್ ಮಾಸ್ಟರ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಈ ಬಗ್ಗೆ ಡೆತ್‌ನೋಟ್ ಬರೆದಿಟ್ಟು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಮುಖ್ಯಶಿಕ್ಷಕಿ ಹಾಗೂ ಸಹ ಶಿಕ್ಷಕಿಯ ಹೆಸರನ್ನೂ ಬರೆದಿಟ್ಟಿದ್ದಾರೆ.
BIG3: ಬಾಕಿ ವೇತನ & ಪಿಂಚಣಿ ಹಣಕ್ಕಾಗಿ ನಿವೃತ್ತ ಶಿಕ್ಷಕಿಯ ಅಲೆದಾಟ: ವಯೋವೃದ್ಧೆ ಕಷ್ಟಕ್ಕೆ ಕೊನೆ ಯಾವಾಗ?
ಡೆತ್ ನೋಟ್‌ನಲ್ಲಿ ಏನಿದೆ?: ಮೃತ ಶಿಕ್ಷಕಿ ಬರೆದ ಡೆತ್ ನೋಟ್ ನಲ್ಲಿ "ನನ್ನ ಸಾವಿಗೆ ಹೆಡ್ ಮಾಸ್ಟರ್ ಜಮಾದರ್ ಸರ್, ಉಮಾ ಟೀಚರ್, ಮಯೂರಿ ಕುಡುಚಿ" ಕಾರಣರು ಎಂದು ಬರೆದಿಟ್ಟಿದ್ದಾರೆ. ಇವರೇ ತನ್ನ ಸಾವಿಗೆ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಘಟನೆ ರಾಯಭಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.