ಎ-ಒನ್ ಅರೋಪಿ ಮೂರು ಬ್ಯಾಂಕ್ ಅಕೌಂಟ್ ಹೊಂದಿದ್ದು, ಕಳೆದ ಒಂದು ವರ್ಷದಲ್ಲಿ ಮೂರು ಬ್ಯಾಂಕ್ ಅಕೌಂಟುಗಳಿಂದ ಐದು ಕೋಟಿ ಟ್ರಾನ್ಸಾಕ್ಷನ್ ನಡೆದಿದೆ.
ಬೆಂಗಳೂರು (ಜೂ. 11): ತ್ರಿಪುರಾ ಗಡಿಯಿಂದ ಅಕ್ರಮವಾಗಿ ನುಸುಳಿ ಭಾರತಕ್ಕೆ ಬಂದಿದ್ದ ಬಾಂಗ್ಲಾ ದರೋಡೆಕೋರರ (Bangladeshi Gang) ಖತರ್ನಾಕ್ ಗ್ಯಾಂಗನ್ನು ಮಾದನಾಯಕನ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಎಟಿಎಂ ಕಳ್ಳತನ ಕೇಸ್ ತನಿಖೆ ವೇಳೆ ಕಳ್ಳತನ, ದರೋಡೆ ಮಾಡಿ ಬಂದ ಹಣವನ್ನು ಏಜೆಂಟ್‌ಗಳ ಮೂಲಕ ಬಾಂಗ್ಲಾದೇಶಕ್ಕೆ ರವಾನೆ ಮಾಡುತ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಆರೋಪಿಗಳ ಬಳಿ ಭಾರತದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಡಿ ಎಲ್, ಆಯೂಷ್ ಕಾರ್ಡ್ ಪತ್ತೆಯಾಗಿದೆ. ಅಲ್ಲದೇ ಅರೋಪಿಗಳು ನಕಲಿ ಆಧಾರ್ ಕಾರ್ಡುಗಳನ್ನು ಸಹ ತಯಾರು ಮಾಡುತ್ತಿದ್ದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಎ-ಒನ್ ಅರೋಪಿ ಮೂರು ಬ್ಯಾಂಕ್ ಅಕೌಂಟ್ ಹೊಂದಿದ್ದು, ಕಳೆದ ಒಂದು ವರ್ಷದಲ್ಲಿ ಮೂರು ಬ್ಯಾಂಕ್ ಅಕೌಂಟುಗಳಿಂದ ಐದು ಕೋಟಿ ಟ್ರಾನ್ಸಾಕ್ಷನ್ ನಡೆದಿದೆ. ಸೈದುಲ್ ಅನಕೂನ್, ಮಹಮದ್ ಅಬ್ದೂಲ್, ಆಯೀಶಾ, ಸೈಯದ್ ಮನ್ಸೂರ್, ಅಮೀನ್ ಸೇಠ್, ಇಸ್ತಾಕ್ ಪಾಷಾ, ಮಹಮದ್ ಇದಾಯತ್, ಸುಹೇಲ್ ಮನ್ಸೂರ್, ಮತ್ತು ಅಬ್ದುಲ್ ಅಲೀಮ್ ಬಂಧಿತ ಅರೋಪಿಗಳು.
ಇದನ್ನೂ ಓದಿ: ನಮ್ಮ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಕೇಸನ್ನು ಭೇದಿಸಿದ ಬೇರೆ ರಾಜ್ಯದ ಪೊಲೀಸ್ರು
ತ್ರಿಪುರಾ ಗಡಿಯಿಂದ ಅಕ್ರಮವಾಗಿ ನುಸುಳಿ ಭಾರತಕ್ಕೆ ಬರುತ್ತಿದ್ದ ಅರೋಪಿಗಳು, ಬಳಿಕ ನಕಲಿ ದಾಖಲೆಗಳನ್ನು (Fake Documents) ಸೃಷ್ಟಿ ಮಾಡುತ್ತಿದ್ದರು. ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಲು ಆರೋಪಿಗಳು ತಮ್ಮದೇ ಜಾಲ ಮಾಡಿಕೊಂಡಿದ್ದರು. ಆರೋಪಿಗಳ ಪೈಕಿ ಅಮೀನ್ ಸೇಠ್ ಅಲಿಯಸ್ ಡಾ ಅಮೀನ್ ನಕಲಿ ದಾಖಲಾತಿ ಸೃಷ್ಟಿ ಮಾಡ್ತಿದ್ದ ಮಾಸ್ಟರ್ ಮೈಂಡ್.
ಆರೋಪಿಗಳು ದಾಖಲಾತಿ ಸೃಷ್ಟಿ ಮಾಡಲು ಬಿಬಿಎಂಪಿ (BBMP) ವೈದ್ಯಾಧಿಕಾರಿಯ ಸೀಲ್ ಮಾಡಿಸಿದ್ದು, ನಕಲಿ ಸೀಲು ಬಳಿಸಿ ಆಧಾರ್ ಕಾರ್ಡ್ ಗೆಜೆಟೆಡ್ ಅಧಿಕಾರಿ ಎಂದು ಸಹಿ ಹಾಕುತಿದ್ದರು. ಬೌರಿಂಗ್, ವಾಣಿವಿಲಾಸ ಆಸ್ಪತ್ರೆ ಹಾಗೂ ಬಿಬಿಎಂಪಿ ಆರೋಗ್ಯ ಕೇಂದ್ರದ ಸೀಲ್‌ಗಳನ್ನು ಮಾಡಿಕೊಂಡಿದ್ದರು.
ಆರೋಪಿಗಳಿಂದ ಬಳಿ 26 ನಕಲಿ ಆಧಾರ್ ಲೆಟರ್ ಹೆಡ್, ಐದು ಸೀಲು, 31 ಅಧಾರ್ ಕಾರ್ಡ್, 13 ಪಾನ್ ಕಾರ್ಡ್, 28 ವೋಟರ್ ಐಡಿ, ಹದಿನಾರು ಮೊಬೈಲ್, ನಾಲ್ಕು ಈ ಶ್ರಮ್ ಕಾರ್ಡ್, ಐದು ಡಿ ಎಲ್, ಮೂರು ಆಯುಷ್ಮಾನ್ ಕಾರ್ಡ್, ಮೆಡಿಕಲ್ ಆಗಿರುವ 92 ನಕಲಿ ಸರ್ಟಿಫಿಕೇಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಅಂತ್ಯಕ್ರಿಯೆ ವೇಳೆ ಸಹಾಯ ಮಾಡಿದವರ ಮೇಲೆಯೇ ಕೊಲೆ ಕೇಸ್ ದಾಖಲು..!
ಮೂರು ಬ್ಯಾಂಕ್ ಅಕೌಂಟ್ ಪತ್ತೆ: ಎ1 ಆರೋಪಿ ಸೈದೂಲ್ ಅಕುನ್ ಹೆಸರಲ್ಲಿ ಮೂರು ಬ್ಯಾಂಕ್ ಅಕೌಂಟ್ (Bank Account) ಪತ್ತೆಯಾಗಿದ್ದು ಈ ಅಕೌಂಟ್ ಬಳಸಿ ಒಂದು ವರ್ಷದ ಅವಧಿಯಲ್ಲಿ ನಾಲ್ಕು ಕೋಟಿ ಹಣ ವರ್ಗಾವಣೆ ಆಗಿರೊದು ಬೆಳಕಿಗೆ ಬಂದಿದೆ. ಆರೋಪಿಗಳ ಭಾರತೀಯ ರೂಪಾಯಿಯನ್ನು ವಿವಿಧ ರೀತಿಯಲ್ಲಿ ಹಣ ಮಾಡಿ ಅದನ್ನು ಚೆನ್ನೈ, ಕೊಲ್ಕತ್ತಾ, ಪಂಜಾಬ್ ಹಾಗೂ ದೇಶದ ವಿವಿಧ ಬ್ಯಾಂಕುಗಳ ಮೂಲಕ ಬಾಂಗ್ಲಾದೇಶಕ್ಕೆ ಕಳುಹಿಸುತ್ತಿದ್ದರು.
ಇದುವರೆಗೆ ಹಣ ವರ್ಗಾವಣೆ ಮಾಡಲಾಗಿದ್ದ ಒಟ್ಟು ಹದಿಮೂರು ಬ್ಯಾಂಕ್ ಖಾತೆಗಳು ಪತ್ತೆಯಾಗಿವೆ. ಪತ್ತೆಯಾದ ಹದಿಮೂರು ಬ್ಯಾಂಕ್ ಖಾತೆಗಳನ್ನು ಪೊಲೀಸರು ಫ್ರೀಝ ಮಾಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಆಧಾರ್‌ಗೆ ಪತ್ರ: ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸೆಂಟ್ರಲ್ ಐಜಿಪಿ ಚಂದ್ರಶೇಖರ್ " ನಕಲಿ ಆಧಾರ್ ಸೃಷ್ಠಿ ಹಿನ್ನಲೆ, ಆಧಾರ್ ಸಂಸ್ಥೆಗೆ ಪತ್ರ ಬರೆಯಲಾಗುವುದು. ಆಧಾರ ಮಾಡಲು ನಕಲಿ ಸೀಲು , ಸಹಿ ,ಬಿಬಿಎಂಪಿ ಲೇಟರ್ ಹೆಡ್ ಬಳಕೆಯಾಗಿದೆ. ನಕಲಿ ದಾಖಲೆ ನೀಡಿ ಆಧಾರ್ ಮಾಡಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಆಧಾರ್ ಮಾಡುವ ಮುನ್ನ ದಾಖಲೆ ಪರಿಶೀಲಿಸುವಂತೆ ಮನವಿ ಮಾಡಲಾಗುವುದು" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪೊಲೀಸರ ಸೋಗಿನಲ್ಲಿ ವೃದ್ಧನಿಂದ ಚಿನ್ನ ಕದ್ದ ಕಳ್ಳರು