
ಮೂಲ್ಕಿ(ಜೂ.11): ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪಾನ್ ಅಂಗಡಿ ನಡೆಸುತ್ತಿದ್ದ ಮೂಲ್ಕಿಯ ಸಮೀಪದ ಅಂಗರಗುಡ್ಡೆ ಯುವಕ ಆದರ್ಶ ದಾಸ್ ಎಂಬವರು ನಾಸಿಕ್‌ನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ನಾಲ್ಕು ತಿಂಗಳ ಹಿಂದೆ ಮೃತಪಟ್ಟಿದ್ದರು.
ಆ ಸಂದರ್ಭ ಅಂಗರಗುಡ್ಡೆಯಲ್ಲಿರುವ ಮೃತನ ಮನೆಯವರ ತೀವ್ರ ಅಸಹಾಯಕತೆಯನ್ನು ಮನಗಂಡು ಅತಿಕಾರಿಬೆಟ್ಟು ಗ್ರಾಪಂ ಮಾಜಿ ಸದಸ್ಯ ಜೀವನ್ ಶೆಟ್ಟಿ ಅವರು, ನಾಸಿಕ್‌ನ ಪಾನ್ ಅಂಗಡಿ ಮಾಲೀಕ ಅನಿಲ್ ಪೂಜಾರಿ, ಶಿಮಂತೂರು ನಿವಾಸಿ ಪ್ರತೀಕ್ ಶೆಟ್ಟಿ ಮತ್ತಿತರರು ಸೇರಿ ಆಂಬುಲೆನ್ಸ್ ಮೂಲಕ ನಾಸಿಕ್‌ನಿಂದ ಮೃತದೇಹವನ್ನು ಹುಟ್ಟೂರಾದ ಅಂಗರಗುಡ್ಡೆಗೆ ತರಿಸಿ ಅಂತ್ಯಕ್ರಿಯೆ ಕಾರ್ಯಗಳಿಗೆ ಸಹಕರಿಸಿದ್ದರು.
ಎಲೆಕ್ಷನ್‌ನಲ್ಲಿ ಸೋತ ಸಹೋದರ- ತಾಯಿ: ಗೆದ್ದವನ ಕೊಲೆಗೆ ಸುಪಾರಿ ಕೊಟ್ಟ ಪೊಲೀಸಪ್ಪ..!
ಇದೀಗ ನೆರವಾದ ಈ ಮೂವರ ಮೇಲೆ ಮೃತ ಆದರ್ಶ ದಾಸ್ ಮನೆಯವರು ನಾಸಿಕ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಇದರಿಂದಾಗಿ ಸಹಾಯ ಮಾಡಿದವರು ಸಂಪೂರ್ಣ ಕುಗ್ಗಿ ಹೋಗಿದ್ದು, ಅಂಗರಗುಡ್ಡೆಯಿಂದ ಸಾವಿರಾರು ಮೈಲಿಗಳ ದೂರವಿರುವ ಮಹಾರಾಷ್ಟ್ರದ ನಾಸಿಕ್ ಪೊಲೀಸ್ ಠಾಣೆಗೆ ಅಲೆದಾಡುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ