ಬೆಂಗಳೂರು ಮರ್ಡರ್ : ನನ್ನ ಹೆಂಡ್ತಿ ಸಹವಾಸ ಬಿಟ್ಬಿಡು ಅಂದ್ರೂ ಬಿಡದವನ ಉಸಿರೇ ನಿಲ್ಲಿಸಿದ ಗಂಡ

Published : Nov 15, 2023, 06:24 PM IST
ಬೆಂಗಳೂರು ಮರ್ಡರ್ : ನನ್ನ ಹೆಂಡ್ತಿ ಸಹವಾಸ ಬಿಟ್ಬಿಡು ಅಂದ್ರೂ ಬಿಡದವನ ಉಸಿರೇ ನಿಲ್ಲಿಸಿದ ಗಂಡ

ಸಾರಾಂಶ

ನನ್ನ ಹೆಂಡತಿಯೊಂದಿಗೆ ಅನೈತಿಕವಾಗಿ ಸಂಬಂಧ ಇಟ್ಟುಕೊಂಡಿರುವುದನ್ನು ಬಿಟ್ಟುಬಿಡು ಎಂದು ಬುದ್ಧಿ ಹೇಳಿದರೂ ಕೇಳದ ಯುವಕನ ಉಸಿರು ನಿಲ್ಲಿಸಿದ ಗಂಡ.

ಬೆಂಗಳೂರು (ನ.15): ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡವನನ್ನು ಆಕೆಯ ಗಂಡನೇ ಕರೆದು ಸಹವಾಸ ಬಿಟ್ಟುಬಿಡು ಎಂದು ಹೇಳಿದ್ದಾನೆ. ಆದರೂ, ಆಂಟಿಯೊಂದಿಗೆ ಅನೈತಿಕ ಸಂಬಂಧವನ್ನು ಮುಂದುವರೆಸುತ್ತಿದ್ದ ವ್ಯಕ್ತಿಯನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದು ಬುದ್ಧಿ ಹೇಳಿದ್ದಾನೆ. ಆದರೂ, ತನ್ನದೇ ಸರಿಯೆಂದು ವಾದ ಮಾಡುತ್ತಿದ್ದವನನ್ನು ಸ್ಥಳದಲ್ಲಿಯೇ ಚಾಕು ಇರಿದು ಕೊಲೆ ಮಾಡಿದ ಘಟನೆ ಬೆಂಗಳೂರಿನ ಬಿಎಚ್‌ಎಲ್‌ ಲೇಔಟ್‌ನಲ್ಲಿ ನಡೆದಿದೆ. 

ಬೆಂಗಳೂರಿನಲ್ಲಿ ವ್ಯಕ್ತಿ ಬರ್ಬರ ಕೊಲೆ ಮಾಡಲಾಗಿದೆ. ಕೊಲೆಯಾದ ವ್ಯಕ್ತಿಯನ್ನು ತಬ್ರೇಜ್ (35) ಎಂದು ಗುರುತಿಸಲಾಗಿದೆ. ಬಿಎಚ್‌ಎಲ್‌ ಲೇಔಟ್ ಕೃಷ್ಣಪ್ಪ ಗಾರ್ಡನ್ ನಲ್ಲಿ ಹತ್ಯೆ ಮಾಡಲಾಗಿದೆ. ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತಿಲಕನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೊಲೆಗೆ ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಪ್ರಿಯಕರನನ್ನು ಕೊಲೆ ಮಾಡಲಾಗಿದೆ. ಕೊಲೆಯಾದವನ ಪ್ರಿಯತಮೆ ನೂರಾ ಆಯುಸಾಳ ಗಂಡ ಶಬ್ಬೀರ್ ಕೊಲೆ ಮಾಡಿದ ವ್ಯಕ್ತಿಯಾಗಿದ್ದಾನೆ. 

ಪರೀಕ್ಷಾ ಅಭ್ಯರ್ಥಿಗಳಿಗೆ ಹಿಜಾಬ್‌ ಧರಿಸಲು ಅವಕಾಶವಿದೆ, ಆದ್ರೆ ಕಣ್ಣು ಬಾಯಿ ಮುಚ್ಚುವಂತಿಲ್ಲ: ಕೆಇಎ ಆದೇಶ

ಕೊಲೆ ಆರೋಪಿ ಶಬ್ಬೀರ್‌ನ ಪತ್ನಿ ನೂರ್ ಆಯುಸಾ ಜೊತೆ ಕೊಲೆಯಾದ ತಬ್ರೇಜ್‌ ಅನೈತಿಕ ಸಂಬಂಧ ಹೊಂದಿದ್ದನು. ಇಂದು ಅನೈತಿಕ ಸಂಬಂಧ ತಬ್ರೇಜ್ ಹಾಗೂ ಶಬ್ಬೀರ್ ಜೊತೆ ಗಲಾಟೆಯಾಗಿದೆ. ಈ ವೇಳೆ ಚಾಕುವಿನಿಂದ ತಬ್ರೇಜ್‌ಗೆ ಇರಿದು ಕೊಲೆ ಮಾಡಲಾಗಿದೆ. ತಿಲಕ ನಗರದ 37 ನೇ ಕ್ರಾಸ್ ನ ಕೃಷ್ಣ ಬೇಕರಿ ಬಳಿ ಕೊಲೆ ಮಾಡಲಾಗಿದೆ. ಮೃತ ಶಬ್ಬೀರ್ ಕೆಂಗೇರಿ ಉಲ್ಲಾಳ ಉಪನಗರ ನಿವಾಸಿಯಾಗಿದ್ದು, ಫರ್ನೀಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಇನ್ನು ಬೈಕ್‌ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಶಬ್ಬೀರ್‌ ಕಷ್ಟಪಟ್ಟು ದುಡಿದರೆ ಆತನ ಹೆಂಡತಿ ಮತ್ತೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು.

ಪೊಲೀಸರ ಮುಂದೆ ಹೇಳಿಕೆ ಕೊಟ್ಟ ನಟ ದರ್ಶನ್: ಮಹಿಳೆಗೆ ನಾಯಿ ಕಚ್ಚಿದಾಗ ಸಿಸಿಟಿವಿ ವರ್ಕ್‌ ಆಗ್ತಿರಲಿಲ್ಲ

ಇನ್ನು ಆರೋಪಿ ಶಬ್ಬೀರ್ ಕೂಡ ಕೊಲೆಯಾದ ತಬ್ರೇಜ್‌ನನ್ನು ಕರೆಸಿ ಅನೈತಿಕ ಸಂಬಂಧ ಬಿಟ್ಟುಬಿಡುವಂತೆ ವಾರ್ನಿಂಗ್‌ ಮಾಡಿದ್ದನು.  ಜೊತೆಗೆ, ಪತ್ನಿ ನೂರ್‌ ಆಯುಷಾ ಹಾಗೂ ತಬ್ರೇಜ್‌ನ ಪೋಷಕರನ್ನು ಕರೆಸಿ ಹಲವಾರು ಬಾರಿ ಪಂಚಾಯಿತಿ ಮಾಡಲಾಗಿತ್ತು. ಆಗ ಎರಡೂ ಕುಟುಂಬ ಸದಸ್ಯರು ಅನೈತಿಕ ಸಂಬಂಧ ಬಿಡುವಂತೆ ಇಬ್ಬರಿಗೂ ಬುದ್ಧಿ ಹೇಳಿ ರಾಜಿ ಪಂಚಾಯಿತಿ ಮಾಡಿದ್ದರು. ಇದಾದ ನಂತರೂ, ತಮ್ಮ ಆಟವನ್ನು ನಿಲ್ಲಿಸದವರಿಗೆ ಸ್ವತಃ ಶಬ್ಬೀರ್‌ ಎಚ್ಚರಿಕೆ ನೀಡಿದ್ದನು. ಆದರೆ, ಇದಕ್ಕೂ ಬಗ್ಗದ ಹಿನ್ನೆಲೆಯಲ್ಲಿ ಇಂದು ಪುನಃ ತಬ್ರೇಜ್‌ನನ್ನು ಮತ್ತೆ ಸಂಧಾನಕ್ಕೆಂದು ಕರೆಯಲಾಗಿತ್ತು. ಈ ವೇಳೆ ಕೊಲೆ ಮಾಡುವುದಕ್ಕೆ ಪೂರ್ಣ ಸಿದ್ಧತೆ ಮಾಡಿಕೊಂಡಿದ್ದ ಶಬ್ಬೀರ್ ಮತ್ತು ಗ್ಯಾಂಗ್‌ನಿಂದ ಚಾಕು ಚುಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ