Gadag: ಎಣ್ಣೆ ಕಿಕ್‌ನಲ್ಲಿದ್ದ ಮೂವರಿಂದ ಪೊಲೀಸ್ ಪೇದೆ ಮೇಲೆ ಹಲ್ಲೆ: ಇಬ್ಬರು ಲಾಕ್, ಒಬ್ಬ ನಾಪತ್ತೆ!

By Govindaraj SFirst Published Jun 3, 2022, 8:15 PM IST
Highlights

ರಸ್ತೆ ನಿಯಮ ಪಾಲಿಸುವಂತೆ ಬುದ್ಧಿ ಹೇಳಿದ್ದಕ್ಕೆ ಬೆಟಗೇರಿ ಪೊಲೀಸ್ ಠಾಣೆಯ ಕಾನ್ಸ್‌ಸ್ಟೇಬಲ್ ಅಶೋಕ್ ಅನ್ನೋರಿಗೆ ದುಷ್ಕರ್ಮಿಗಳು ಗುರುವಾರ ರಾತ್ರಿ ಹಲ್ಲೆ ಮಾಡಿದ್ದು ತಡವಾಗಿ ಬೆಳಕಿಗೆ ಬಂದಿದೆ. 

ವರದಿ: ಗಿರೀಶ್ ಕಮ್ಮಾರ , ಏಷ್ಯಾನೆಟ್ ಸುವರ್ಣನ್ಯೂಸ್, ಗದಗ

ಗದಗ (ಜೂ.03): ರಸ್ತೆ ನಿಯಮ ಪಾಲಿಸುವಂತೆ ಬುದ್ಧಿ ಹೇಳಿದ್ದಕ್ಕೆ ಬೆಟಗೇರಿ ಪೊಲೀಸ್ ಠಾಣೆಯ ಕಾನ್ಸ್‌ಸ್ಟೇಬಲ್ ಅಶೋಕ್ ಅನ್ನೋರಿಗೆ ದುಷ್ಕರ್ಮಿಗಳು ಗುರುವಾರ ರಾತ್ರಿ ಹಲ್ಲೆ ಮಾಡಿದ್ದು ತಡವಾಗಿ ಬೆಳಕಿಗೆ ಬಂದಿದೆ.  ಬೆಟಗೇರಿ ಪೊಲೀಸ್ ಠಾಣೆಯ ಕಾನ್ಸ್‌ಸ್ಟೇಬಲ್ ಅಶೋಕ್ ದಾನಿಯವರ ಮೇಲೆರಗಿದ್ದವರ ಪೈಕಿ ಮಾರುತಿ ಮುತಗಾರ (65), ಪ್ರಭಾಕರ್ ಶೇಷಪ್ಪನವರ (24) ಅನ್ನೋರನ್ನ ಸದ್ಯ ಲಾಕ್ ಮಾಡಲಾಗಿದೆ. ಜೂನ್ 2ನೇ ತಾರೀಕು ಕೆಲಸ ಮುಗಿಸಿಕೊಂಡು ಅಶೋಕ್ ಬೆಟಗೇರಿ ಸಿಎಸ್ ಐ ಹಾಸ್ಪಿಟಲ್ ಬಳಿ ಬೈಕ್ ಮೇಲೆ ಬರ್ತಿದ್ರು. ಆಗ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡ್ತಿದ್ದ ಎರಡು ಬೈಕ್‌ಗಳನ್ನ ಅಶೋಕ್ ಗಮನಿಸ್ತಾರೆ. 

Latest Videos

ಫ್ಯಾಷನ್ ಪ್ರೋ ಹಾಗೂ ಬುಲೆಟ್‌ನಲ್ಲಿದ್ದವರು ರ್ಯಾಶ್ ಡ್ರೈವ್ ಮಾಡ್ರಿದ್ರು. ಕೆಲ ದೂರ ಸಾಗಿ ಬೈಕ್ ಮೇಲೆ ಮಾತ್ನಾಡ್ತಾನೇ ಮೂವರು ಹೋರಟಿದ್ರು. ಬುಲೆಟ್ ಮೇಲೆ ಕಿಶೋರ್, ಪ್ರಭಾಕರ್ ರೈಡ್ ಮಾಡ್ತಿದ್ರೆ, ಫ್ಯಾಷನ್ ಪ್ರೋ ಮೇಲೆ ಮಾರುತಿ ಹೊರಟಿದ್ರು. ಕಿರಿದಾದ ರಸ್ತೆ ಇದ್ದಿದ್ರಿಂದ ಹಿಂಬದಿ ಬರುತ್ತಿದ್ದ ವಾಹನ ಸವಾರರಿಗೆ ಮುಂದೆ ಹೋಗೋದಕ್ಕೆ ಸಾಧ್ಯ ಆಗ್ತಿರಲಿಲ್ಲ. ಅದೇ ವೇಳೆ ಹಿಂಬದಿಯಿಂದ ಪೊಲೀಸ್ ಪೇದೆ ಅಶೋಕ್ ಹಾರ್ನ್ ಮಾಡಿದ್ರು. ಕೇಳಿಯೂ ಕೇಳದ ರೀತಿಯಲ್ಲಿ ಕಿಶೋರ್ ಕದಂ (24), ಪ್ರಭಾಕರ್ ಶೇಷಪ್ಪನವರ್, ಮಾರುತಿ ಮುತಗಾರ ಹೊರಟಿದ್ರು. ಹಾರ್ನ್ ಮಾಡಿದ್ರೂ ಕ್ಯಾರೇ ಎನ್ನದ ಸ್ಥಿತಿಯಲ್ಲಿದ್ದ ಬೈಕ್ ಸವಾರರಿಗೆ ಚೂರು ಏರು ಧ್ವನಿಯಲ್ಲಿ ರಸ್ತೆ ಮೇಲೆ ಹೀಗ್ ಓಡಾಡಿದ್ರೆ ಹಿಂದನವರು ಏನ್ ಮಾಡ್ಬೇಕು. 

ರಾಜಕೀಯ ವಿದ್ಯಮಾನಗಳ ಬಗ್ಗೆ ಟ್ವೀಟ್, KSRDPRU Guest Faculty ಅಮಾನತಿಗೆ ಆಗ್ರಹ

ಸೈಡಿಗೆ ಹೋಗ್ರಿ ಅಂತಾ ಪೇದೆ ಅಶೋಕ್ ಗದರಿದ್ರು. ಕುಡಿದ ಮತ್ತಿನಲ್ಲಿದ್ದ ಮೂವರು ಇಷ್ಟಕ್ಕೆ ಕೆರಳಿದ್ರು. ಬೆಟಗೇರಿಯ ಕೆನರಾ ಬ್ಯಾಂಕ್ ಎದ್ರು ಪೇದೆ ಅಶೋಕ್ ಅವರನ್ನ ಮಾರುತಿ ಎಂಬಾತ ಅಡ್ಡಗಟ್ಟಿದ್ದ. ಕಿಶೋರ್ ಹಿಂದಿನಿಂದ ಪೊಲೀಸ್ ಪೇದೆ ಅಶೋಕ್ ಮೇಲೆ ಹಲ್ಲೆ ಮಾಡಿದ್ನಂತೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾತ್ರವಲ್ಲದೇ ಸುಮಾರು 15 ನಿಮಿಷಗಳ ಕಾಲ ಪೇದೆ ಅಶೋಕ್ ಅವರಿಗೆ ಅಡ್ಡಗಟ್ಟಿ ನಿಲ್ಲಿಸಿದ್ರು. ಗಸ್ತು ವಾಹನ ಅದೇ ಮಾರ್ಗವಾಗಿ ಹೊರಡ್ತಿದ್ದಾಗ ಘಟನೆ ಪೊಲೀಸ ಗಮನಕ್ಕೆ ಬಂದಿದೆ. ಪೊಲೀಸರ ಮೇಲೆ ಪುಂಡಾಟಿಕೆ ಮೆರೆದ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ. ಪೊಲೀಸರು ಬರ್ತಿದ್ದಂತೆ ಪೊಲೀಸರ ವಿರುದ್ಧ ಪೌರುಷ ತೋರಿದ ಕಿಶೋರ್ ನಾಪತ್ತೆಯಾಗಿದ್ದಾನೆ.

MLC Election: ಶಿಕ್ಷಕರಿಂದ ನಯಾಪೈಸೆ ಪಡೆಯದೇ ಸೇವೆ ಸಲ್ಲಿಸಿದ್ದೇನೆ: ಹೊರಟ್ಟಿ

ಕಿಶೋರ್ ಪತ್ತೆಗೆ ಸದ್ಯ ಪೊಲೀಸರು ಬಲೆ ಬೀಸಿದ್ದಾರೆ. ಸ್ವಿಚ್ ಆಫ್ ಮಾಡಿಕೊಂಡಿರೋ ಕಿಶೋರ್ ಊರು ಬಿಟ್ಟಿರುವ ಶಂಕೆ ಇದೆ. ಉಳಿದ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ. ಪೊಲೀಸರು ಅಂದ್ರೆ ನಮ್ಮ ರಕ್ಷಕರು ಅನ್ನೋ ಮನೋಭಾವನೆ ಜನರಲ್ಲಿದೆ. ಹೀಗಿರುವಾಗ ಪೊಲೀಸರಿಗೆ ರಕ್ಷಣೆ ಇಲ್ಲವಾದಲ್ಲಿ ಹೇಗೆ ಅನ್ನೋ ಪ್ರಶ್ನೆಯೂ ಜನ‌ಸಾಮಾನ್ಯರಲ್ಲಿ ಮೂಡುವಂತೆ ಮಾಡಿದೆ. ನಾಪತ್ತೆಯಾಗಿರೋ ಕಿಶೋರ್ ನನ್ನ ಕೂಡ್ಲೆ ಪತ್ತೆ ಹಚ್ಚಬೇಕು. ಅಲ್ಲದೇ ಕಠಿಣ ಶಿಕ್ಷೆ ನೀಡಬೇಕು ಅನ್ನೋದು ಸಾರ್ವಜನಿಕರ ಆಗ್ರಹವೂ ಆಗಿದೆ.‌

click me!