
ಬೆಂಗಳೂರು, (ಜೂನ್.03) : ಬಿಜೆಪಿ ಮುಖಂಡ ಅನಂತರಾಜ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸುಮಾ ಹಾಗೂ ಪ್ರಿಯತಮೆ ರೇಖಾ ನಡುವಿನ ಆರೋಪ-ಪ್ರತ್ಯಾರೋಪಗಳು ಮುಂದುವರೆದಿವೆ.
ನಾನು ನನ್ನ ಗಂಡನನ್ನು ಹೋಮ್ ಅರೆಸ್ಟ್ ಮಾಡಿಲ್ಲ..ಅವರು ಆರೋಪ ಮಾಡುತ್ತಿರುವ ದಿನ ನಾನು ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಳ್ಳುತಿದ್ದೆ..ಇದು ಅವರು ಆರು ವರ್ಷಗಳಿಂದ ಆಕ್ರಮ ಸಂಬಂಧ ಇದ್ದ ಕಾರಣ ನಾನು ಬೈದಿರೋದು ನಿಜ. ಆದ್ರೆ ನಾನು ಗಂಡನನ್ನು ಕೊಲೆ ಮಾಡಿಲ್ಲ.ರೇಖಾನಿಂದ ನನ್ನ ಗಂಡನಿಗೆ ಸಾಕಷ್ಟು ಬೆದರಿಕೆ ಇತ್ತು .ನನ್ನ ಗಂಡನನ್ನು ರೇಖಾದಿಂದ ಬಿಡಿಸಿಕೊಳ್ಳಲು ಈ ರೀತಿ ನಾನು ಮಾಡಿದ್ದು. ರೇಖಾ ನನ್ನ ಗಂಡ ಬಳಿ ತನ್ನ ಮಗಳಿಗೆ ಮೆಡಿಕಲ್ ಓದಲು ನೀವು ದುಡ್ಡು ಕೊಡಬೇಕು.. ದುಡ್ಡು ಕೊಟ್ಟಿಲ್ಲ ಎಂದರೇ ನಿನ್ನ ಜೀವ ಸಹಿತ ಉಳಿಸುವಿದಿಲ್ಲ ಎಂದು ಬ್ಲಾಕ್ ಮೇಲ್ ಮಾಡಿದ್ದಾಳೆ ಎಂದು ಮೃತ ಅನಂತರಾಜ್ ಪತ್ನಿ ಸುಮಾ ಆರೋಪಿಸಿದ್ದಾಳೆ.
ಎರಡು ಬಾರಿ ಅಬಾರ್ಷನ್ ಮಾಡಿಸಿಕೊಂಡಿದ್ದೇನೆ: ಅನಂತರಾಜು ಫ್ರೆಂಡ್ ಆಡಿಯೋ ವೈರಲ್
ಸುಮಾ ಮಾತು ಮುಂದುವರೆಸಿ ಆತ್ಮಹತ್ಯೆ ದಿನ ಒಂದು ಸಮಾರಂಭಕ್ಕೆ ಹೋಗಿ ಬಂದೀವಿ..ಇದಾದ ಬಳಿಕ ಅನಂತರಾಜ್ ಅವರು ಬೇಜಾರ್ ಅಗುತಿದೆ ಲಾಂಗ್ ಡ್ರೈವ್ ಹೋಗೊಣ ಎಂದರು. ಲಾಂಗ್ ಡ್ರೈವ್ ಹೋಗಿ ಬಂದ ನಂತರ ಎದೆ ನೋವು ಎಂದರು. ನಾನು ಅಡುಗೆ ಮಾಡ್ತಿನಿ ಎಂದೆ, ಅವರು ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಇದಾದ ಬಳಿಕ ಅಡುಗೆ ಅಗಿದೆ ಎಂದು ನಾನು ಕರೆಯಲು ಹೋಗಿದ್ದಾಗ ಅವರು ನೇಣು ಹಾಕಿಕೊಂಡಿದ್ದಾರು, ನಾನು ಕಿರಿಚಿಕೊಂಡೆ ಅಕ್ಕಪಕ್ಕದವರು ಬಂದು ಆಸ್ಪತ್ರೆಗೆ ಸೇರಿಸಿದ್ದೆವು ಎಂದು ಹೇಳಿರು.
ನನ್ನ ಗಂಡ ಮತ್ತು ಆಕೆಗೆ ಎರಡುವರೆ ಲಕ್ಷ ಟ್ರಾನ್ಸ್ಆಕ್ಷನ್ ಆಗಿದೆ. ನನಗೆ ಅನಂತರಾಜು ಇಲ್ಲದಿದ್ದರೆ, ನಿನಗೂ ಸಿಗಲು ಬಿಡುವುದಿಲ್ಲ ಅಂದಿದ್ದಳು.ಅವಳಿಂದ ನನಗೆ ಟಾರ್ಚರ್ ಇದೆ ಎಂದು ಅಂತಾ ಹೇಳಿದ್ರು. ಸುಳ್ಳು ಹೇಳಿ ಆಕೆಗೆ ಹೆದರಿಸಿದ್ರೆ ನನ್ನ ಗಂಡನನ್ನ ಉಳಿಸಿಕೊಳ್ಳಲು ಈ ರೀತಿ ಮಾಡಿದ್ದೇನೆ. ಹೊಟ್ಟೆ ಉರಿಗೆ ನನ್ನ ಗಂಡನ ಜತೆ ಜಗಳ ಮಾಡಿದ್ದೇನೆ ವಿನಃ ನಾನು ಅವರಿಗೆ ನೋವು ಮಾಡಿಲ್ಲ. ಆತ್ಮಹತ್ಯೆ ಮಾಡಿಕೊಂಡ ದಿನ ನಾವೀಬ್ಬರು ಒಟ್ಟಿಗೆ ಹೊರಗೆ ಹೋಗಿ ಬಂದಿದ್ದೀವಿ ಎಂದರು.
ಮಗಳಿಗೆ ಮೆಡಿಕಲ್ ಓದುವಷ್ಟು ಹಣ ನೀಡಬೇಕದು ಡಿಮ್ಯಾಂಡ್ ಮಾಡಿದ್ಳು. ರೇಖಾ ಬ್ಲಾಕ್ ಮೇಲ್ ಶುರುಮಾಡಿದ್ಳು, ನನ್ನ ಬಳಿ ಬರದೆ ಹೋದಲ್ಲಿ ಮಾರ್ಯಾದೆ ಕೊಡುವುದಾಗಿ ಟಾರ್ಚರ್ ನೀಡ್ತಿದ್ದಳು. ರೇಖಾ ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡ್ತಿದ್ದೇನೆ.
ಮಾರ್ಚ್ 24ರ ರಾತ್ರಿ ನನಗೆ ವಿಷಯ ಗೊತ್ತಾಯ್ತು. ಏಪ್ರಿಲ್ 7 ರಂದು ನಾನು ಮನೆಗೆ ವಾಪಾಸ್ ಬಂದೆ. ನನ್ನ ಗಂಡನಿಗೆ ನಾನು ಹೋಂ ಅರೆಸ್ಟ್ ಮಾಡಿಲ್ಲ, ನನ್ ಗಂಡನನ್ನ ಪ್ರೀತಿಸ್ತಿದ್ದೆ. ಎಂಆರ್ ಆರ್ ಗೆ ಹೋದಮೇಲೆ ನನ್ನ ಗಂಡನಿಗೆ ಬ್ಲಾಕ್ ಮೇಲ್ ಮೇಸೆಜ್ ಕಳಿಸಿದ್ಳು. ಓರ್ವ ವಿಐಪಿ ಗೆ ಪೋqO,ವಿಡಿಯೋ ಕಳಿಸುವುದಾಗಿ ಬೆದರಿಕೆ ಹಾಕಿದ್ಳು.ಯಾವ ಹೆಂಡತಿ ಪತಿಯನ್ನ ಕೊಲ್ಲುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕೋರ್ಟ್ ನಿಂದ ತಡೆಯಾಜ್ಞೆ .
ಇನ್ನು ಮೃತ ಬಿಜೆಪಿ ಅನಂತರಾಜ್ ಪರ ವಕೀಲೆ ಹೇಮಲತಾ ಮಾತನಾಡಿ, ರೇಖಾ ಅವರ ಬಳಿ ನಮ್ಮ ಕೆಲವು ಖಾಸಗಿ ಫೋಟೋ ಮತ್ತು ವಿಡಿಯೋ ಇದೆ ಎಂದು ಬ್ಲಾಕ್ ಮೇಲ್ ಮಾಡುತಿದ್ದರಂತೆ .ಹೀಗಾಗಿ ಅನಂತರಾಜ್ ಅವರು ನನ್ನ ಕಛೇರಿಗೆ ಬಂದು ವಿಚಾರ ತಿಳಿಸಿದ್ದರು. ಏಪ್ರಿಲ್ 18 ರಂದು ನಾನು ಇಂಜೆಕ್ಷನ್ ಆರ್ಡರ್ ಪಡೆದು ಕೊಂಡಿದ್ದರು. ವಿಡಿಯೋ ಮತ್ತು ಫೋಟೋಗಳು ಪ್ರಸಾರವಾಗದಂತೆ ಆರ್ಡರ್ ಪಡೆದಿದ್ದವು. ರೇಖಾ ಅವರ ಬಗ್ಗೆ ನನ್ನ ಬಳಿ ಹೇಳಿದ್ದರು. ರೇಖಾ ಅವರು ಫೇಸ್ ಬುಕ್ ನಲ್ಲಿ ಸುಮಾರು ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಈ ರೀತಿ ಮಾಡುತ್ತಿದ್ದರು.ಇದೇ ರೀತಿ ಬ್ಲಾಕ್ ಮೇಲ್ ಮಾಡುತಿದ್ದರು ಎಂದು ಅನಂತರಾಜ್ ಹೇಳಿದ್ದರು.ಕೋರ್ಟ್ ನಿಂದ ಇದರ ಬಗ್ಗೆ ತಡೆಯಾಜ್ಞೆ ಕೂಡ ತಂದಿದ್ದೀವಿ ಎಂದು ವಕೀಲೆ ಹೇಮಲತಾ ತಿಳಿಸಿದ್ರು..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ