ಬಾಗಲಕೋಟೆ: ಭೀಕರ ರಸ್ತೆ ಸ್ಥಳದಲ್ಲಿ ನಾಲ್ವರ ದುರ್ಮರಣ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Published : Jun 03, 2022, 05:15 PM IST
ಬಾಗಲಕೋಟೆ: ಭೀಕರ ರಸ್ತೆ ಸ್ಥಳದಲ್ಲಿ ನಾಲ್ವರ ದುರ್ಮರಣ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಸಾರಾಂಶ

* ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಭೀಕರ ಅಪಘಾತ  * ಸ್ಥಳದಲ್ಲಿ ನಾಲ್ವರ ದುರ್ಮರಣ * ಮುಗಿಲು ಮುಟ್ಟಿದ ಸಂಬಂಧಿಗಳ ಆಕ್ರಂದನ

ಬಾಗಲಕೋಟೆ, ಜೂನ್.03): ಅವರೆಲ್ಲಾ ಪಂಚರ್ ಆಗಿ ನಿಂತಿದ್ದ ಲಾರಿಗೆ ಕ್ಯಾಂಟರ್ ಗೂಡ್ಸ್​​ ವಾಹನ ಮೂಲಕ ಟೈಯರ್​ ತಂದು ರೆಡಿ ಮಾಡ್ತಿದ್ದರು, ಅತ್ತ ಧೋ ಅಂತ ಮಳೆ ಸುರಿಯುತ್ತಿತ್ತು, ಇನ್ನೇನು ಐದರಿಂದ ಹತ್ತು ನಿಮಿಷದಲ್ಲಿ ಸ್ಟೆಪನಿ ಹಾಕುವುದು ಮುಗಿದಿದ್ದರೆ ಮುಂದೆ ಹೋಗುತ್ತಿದ್ದರು. ಆದರೆ ಅವರಿಗಾಗಿ ಕಾಯ್ದಿದ್ದ ಜವರಾಯ ಅಪರಿಚಿತ ವಾಹನ ರೂಪದಲ್ಲಿ ಬಂದು ಡಿಕ್ಕಿ ಹೊಡೆದಿದ್ದೇ ತಡ, ಇದ್ದಂತಹ ನಾಲ್ವರೂ ಸಹ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಹೌದು... ಹೆದ್ದಾರಿಯ ಪಕ್ಕದಲ್ಲಿಯೇ ಕ್ಯಾಂಟರ್​ ಗೂಡ್ಸ್​ ವಾಹನದ ಬಳಿ ಲಾರಿಗೆ ಪಂಚರ್​ ಹಾಕಲು ನಿಂತಿದ್ದ ನಾಲ್ವರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟು ಭೀಕರ ಅಪಘಾತವೊಂದು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಂಗಡಿ ಗ್ರಾಮದಲ್ಲಿ ನಡೆದಿದೆ. 

ಘಟನೆಯಲ್ಲಿ ಮೃತಪಟ್ಟವರನ್ನ ಬೀಳಗಿ ಪಟ್ಟಣದ ಮಲ್ಲಪ್ಪ (42)  ಮತ್ತು ನಾಶೀರ್​ (42), ಟಕ್ಕಳಕಿ ಗ್ರಾಮದ ರಜಾಕ್ (54)​ ಮತ್ತು ರಾಮಸ್ವಾಮಿ (36) ಎಂದು ಗುರುತಿಸಲಾಗಿದೆ. ನಿನ್ನೆ(ಗುರುವಾರ) ರಾತ್ರಿ ಅತ್ತ ಧೋ ಅಂತ ಮಳೆ ಸುರಿಯುತ್ತಿತ್ತು, ಇತ್ತ ಈರುಳ್ಳಿಯನ್ನ ಹೊತ್ತೊಯ್ಯಲು ಲಾರಿಯನ್ನ ತೆಗೆದುಕೊಂಡು ಡ್ರೈವರ್ ಹೊರಟಿದ್ದ. ಇಷ್ಟೊತ್ತಿಗಾಗಲೇ ಬಾಡಗಂಡಿ ಗ್ರಾಮದ ಬಳಿ ಬಂದಾಗ ಏಕಾಏಕಿ ಲಾರಿ ಪಂಚರ್ ಆಗಿದೆ. 

Big Breaking: ಉತ್ತರಪ್ರದೇಶ ಪ್ರವಾಸಕ್ಕೆ ತೆರಳಿದ್ದ ಬೀದರ್‌ನ 7 ಮಂದಿ ದುರ್ಮರಣ

ಇದ್ರಿಂದ ಮುಂದೆ ಹೋಗಲಾಗದೆ ಚಾಲಕ ನಾಶೀರ್​ ಎಂಬಾತ ಗೂಡ್ಸ್​ ಮಾಲೀಕನಾದ ಮಲ್ಲಪ್ಪನಿಗೆ ಫೋನ್ ಮಾಡಿದ್ದಾನೆ. ಈ ವೇಳೆ ಮಲ್ಲಪ್ಪನ ಜೊತೆಗೆ ರಾಮಸ್ವಾಮಿ ಮತ್ತು ರಜಾಕ್​ ಸೇರಿ ಕ್ಯಾಂಟರ್ ಗೂಡ್ಸ್​ ವಾಹನದ ಮೂಲಕ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಎಲ್ಲರೂ ಸೇರಿ ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಪಂಚರ್​ ತಿದ್ದಿ ಸ್ಟೇಪನಿ ಹಾಕೋ ಕೆಲ್ಸದಲ್ಲಿ ಬ್ಯೂಸಿಯಾಗಿದ್ದಾರೆ. ಹೀಗಿರುವಾಗ ಹೆದ್ದಾರಿಯಲ್ಲಿ ಬಂದ ಅಪರಿಚಿತ ವಾಹನವೊಂದು ಏಕಾಏಕಿ ಬಂದು ಇವರಿಗೆ ಡಿಕ್ಕಿ ಹೊಡೆದಿದೆ.ಆದ್ರೆ ನೋಡುನೋಡುತ್ತಿದ್ದಂತೆ ನಾಲ್ವರು ಸಹ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

10 ನಿಮಿಷ ಅಂತರದಲ್ಲಿ ಬಂದ ಸಾವಿನ ಸುದ್ದಿ
ಬಾಡಗಂಡಿಯ ಗ್ರಾಮದ ಬಳಿ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದರು. ಅವರ ಪೈಕಿ ಮಲ್ಲಪ್ಪನ ತಾಯಿ ಮತ್ತು ಪತ್ನಿ ತಮ್ಮ ಮಕ್ಕಳ ಜೊತೆ ಗೋಳಿಡುತ್ತಿದ್ದ ದೃಶ್ಯ ಎಂತವರ ಮನಸ್ಸನ್ನು ಕಲಕುವಂತಾಗಿತ್ತು. ಅಕ್ಕಪಕ್ಕದಲ್ಲಿ ತನ್ನೆರಡು ಮಕ್ಕಳನ್ನು ಕಟ್ಟಿಕೊಂಡು ಕಣ್ಣೀರಿಡುತ್ತಿದ್ದ ಮಲ್ಲಪ್ಪನ ಪತ್ನಿ ಒಂದೆಡೆಯಾದರೆ ಎಲ್ಲರ ಮಧ್ಯೆ ಮಗನಿಗಾಗಿ ಗೋಳಿಡುತ್ತಿದ್ದ ತಾಯಿ ಒಂದೆಡೆ ಇದ್ದರು. ಅತ್ತ ಮಲ್ಲಪ್ಪನ ಪತ್ನಿ ಮಧು ಹೇಳುವಂತೆ, ರಾತ್ರಿ ಮಳೆ ಬರುತ್ತಿತ್ತು, ಬನ್ನಿ ಬೇಗ ಅಂತ ಫೋನ್ ಮಾಡಿದರೆ ಲಾರಿ ಪಂಚರ್ ಆಗಿದೆ, ಇನ್ನೇನು ಮುಗಿಯುತ್ತೆ ಬರ್ತಿನಿ ಎಂದಿದ್ದ ಗಂಡ ಮಲ್ಲಪ್ಪ. 

ಆದರೆ ಮರುಕ್ಷಣವೇ 10 ನಿಮಿಷದ ಅಂತರದಲ್ಲಿ ಬಂದ ಫೋನಿನಲ್ಲಿ ಆಘಾತವೇ ಬಂದಿತ್ತು. ಗಂಡ ಸತ್ತ ಸುದ್ದಿಯನ್ನ ಕೇಳಿದ ಪತ್ನಿ ಮಧು ದಿಗ್ಬ್ರಾಂತಳಾದಳು.  ಇನ್ನು ಮೃತಪಟ್ಟಿದ್ದ ನಾಲ್ಕೂ ಜನ ಕುಟುಂಬಸ್ಥರ ಗೋಳು ತಮ್ಮ ಮನೆಯ ಮನುಷ್ಯನನ್ನ ಕಳೆದುಕೊಂಡಿದ್ದಕ್ಕೆ ಹೇಳತೀರದಾಗಿತ್ತು. ತಮ್ಮವರಿಗಾಗಿ ಗೋಗರೆದು ಕಣ್ಣೀರಿಡುತ್ತಿದ್ದರು. 

ಇನ್ನು ರಾತ್ರಿ ಹೊತ್ತು ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸುತ್ತಲೇ ಇತ್ತ ಮೃತಪಟ್ಟವರ 4 ಮೃತದೇಹಗಳನ್ನ ಸಮೀಪದ ಬೀಳಗಿಯ ಆಸ್ಪತ್ರೆಗೆ ತರಲಾಗಿತ್ತು. ಈ ಸಂದರ್ಭದಲ್ಲಿ ಮೃತರ ಸಂಭಂದಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.  ಈ ಮಧ್ಯೆ ಸ್ಥಳಕ್ಕೆ ಬೀಳಗಿ ಪೋಲಿಸರು ಭೇಟಿ ನೀಡಿದ್ದರು, ಅಲ್ಲದೆ ಸ್ಥಳದಲ್ಲೇ ಡಿಕ್ಕಿ ಹೊಡೆದ ವಾಹನದ ಬಗ್ಗೆ ಮಾಹಿತಿ ಪಡೆಯಲು ಮುಂದಾದ್ರು ಸಹ ಪ್ರಯೋಜನವಾಗಿಲ್ಲ,. 

ಹೀಗಾಗಿ ಅಪರಿಚಿತ ವಾಹನ ಹುಡುಕುವ ನಿಟ್ಟಿನಲ್ಲಿ ತನಿಖೆಯನ್ನ ಮುಂದುವರೆಸಿದ್ದಾರೆ. ಪ್ರತಿಯೊಬ್ಬರು ತಮ್ಮವರಿಗಾಗಿ ಗೋಗರೆಯುತ್ತಿದ್ದ ದೃಶ್ಯ ಕಂಬಿನಿ ಮಿಡಿಯುವಂತಿತ್ತು. ಇನ್ನು ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಆಗಮಿಸಿ ಕುಟುಂಬಗಳಿಗೆ ಸಾಂತ್ವನ ಹೇಳಿದ್ರು. ಅಲ್ಲದೆ ಪೋಲಿಸರಿಂದ ಮಾಹಿತಿ ಪಡೆದು ಮುಂದಿನ ಕ್ರಮಕ್ಕೆ ಮುಂದಾದ್ರು. ಇನ್ನು ಬೀಳಗಿ ಮತಕ್ಷೇತ್ರದ ಶಾಸಕ, ಸಚಿವ ಮುರುಗೇಶ ನಿರಾಣಿ ಈ ಬಗ್ಗೆ ಪ್ರತಿಕ್ರಿಯಿಸಿ, ಕುಟುಂಬಗಳಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಸಾಂತ್ವನ ಹೇಳಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!