ವಿದ್ಯಾರ್ಥಿನಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ: ವಾಟ್ಸಾಪ್‌ ಮೂಲಕ ಅಶ್ಲೀಲ ಮೆಸೇಜ್‌ ಕಳಿಸಿದ ಕಾಮುಕ

By Girish Goudar  |  First Published Aug 18, 2022, 12:37 PM IST

ರಾತ್ರಿ ವೇಳೆ ವಿದ್ಯಾರ್ಥಿನಿಗೆ ಅಶ್ಲೀವಾಗಿ ಮೆಸೇಜ್ ಕಳುಹಿಸಿದ ಕಾಮುಕ ರಾಮಕೃಷ್ಣ


ರಾಮನಗರ(ಆ.18):  ಅಸಿಸ್ಟೆಂಟ್ ಪ್ರೊಫೆಸರ್‌ವೊಬ್ಬ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ರಾಮನಗರದಲ್ಲಿ ನಡೆದಿದೆ. ರಾಮನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಮಕೃಷ್ಣ ಹೆಚ್.ಆರ್. ಎಂಬಾತನೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದವನಾಗಿದ್ದಾನೆ. 

ರಾಮನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಲ್ಲಿ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರಾಮಕೃಷ್ಣ ಹೆಚ್.ಆರ್. ವಿದ್ಯಾರ್ಥಿನಿಗೆ ವಾಟ್ಸಪ್ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸುವ ಮೂಲಕ ಟಾರ್ಚರ್ ನೀಡಿದ್ದಾರೆ. 

Tap to resize

Latest Videos

ಗದಗ: ಕುಡಿದು ಕಿರಿಕ್ ಮಾಡ್ತಿದ್ದ ತಂದೆಯನ್ನೇ ಬರ್ಬರವಾಗಿ ಕೊಂದ ಮಗ

ಒಂದು ತಿಂಗಳ ಹಿಂದಷ್ಟೇ ಕಾಲೇಜಿಗೆ ವಿದ್ಯಾರ್ಥಿನಿ ಸೇರಿದ್ದಳು. ಕಾಮುಕ ರಾಮಕೃಷ್ಣ ರಾತ್ರಿ ವೇಳೆ ವಿದ್ಯಾರ್ಥಿನಿಗೆ ಅಶ್ಲೀವಾಗಿ ಮೆಸೇಜ್ ಕಳುಹಿಸಿದ್ದಾನೆ. ಈ ಸಂಬಂಧ ಕಾಲೇಜು ಆಡಳಿತ ಮಂಡಳಿಗೆ ವಿದ್ಯಾರ್ಥಿನಿಯ ಪೋಷಕರು ದೂರು ನೀಡಿದ್ದಾರೆ. 

ಏತನ್ಮಧ್ಯೆ ಕಾಲೇಜಿಗೆ ವಿದ್ಯಾರ್ಥಿ ಪೋಷಕರು ಆಗಮಿಸುತ್ತಿದ್ದಂತೆ ಪ್ರಾಧ್ಯಾಪಕ ರಾಮಕೃಷ್ಣ ಎಸ್ಕೇಪ್ ಆಗಿದ್ದಾನೆ. ಇದೇ ರೀತಿ ಕಳೆದ ವರ್ಷ ಕೂಡ ರಾಮಕೃಷ್ಣ ಮತ್ತೊಬ್ಬ ವಿದ್ಯಾರ್ಥಿನಿಗೆ ಟಾರ್ಚರ್ ಕೊಟ್ಟಿದ್ದ ಅಂತ ತಿಳಿದು ಬಂದಿದೆ. 
ಪ್ರಾಧ್ಯಾಪಕ ಟಾರ್ಚರ್‌ನಿಂದ ಬೇಸತ್ತ ವಿದ್ಯಾರ್ಥಿನಿ ಟಿಸಿ ಪಡೆದು ಬೇರೆ ಕಾಲೇಜಿಗೆ ಸೇರಿಕೊಂಡಿದ್ದಾಳೆ. ಈ ಸಂಬಂಧ ವಿದ್ಯಾರ್ಥಿನಿ ರಾಮನಗರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾಳೆ. 
 

click me!