Misbehave With Woman: ಪತ್ನಿಗೆ ಕೆಟ್ಟ ಮೆಸೇಜ್‌ ಕಳಿಸಿದ ವ್ಯಕ್ತಿಯ ಅರೆಬೆತ್ತಲೆಗೊಳಿಸಿ ಹಲ್ಲೆ

By Kannadaprabha News  |  First Published Dec 12, 2021, 7:46 AM IST

*   ಯೋಗ ಕೇಂದ್ರದ ಕಾವಲುಗಾರ ಯತೀಶ್‌ ಹಲ್ಲೆಗೊಳಗಾದ ವ್ಯಕ್ತಿ
*   ಕೆಂಪೇಗೌಡ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
*   ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌


ಬೆಂಗಳೂರು(ಡಿ.12):  ತಮ್ಮ ಪತ್ನಿ(Wife) ಜತೆ ಅನುಚಿತವಾಗಿ(Misbehave) ವರ್ತಿಸಿದ ಎಂದು ಆರೋಪಿಸಿ ಯೋಗ ಕೇಂದ್ರವೊಂದರ ಕಾವಲುಗಾರನನ್ನು ಅರೆಬೆತ್ತಲೆಗೊಳಿಸಿ ಹಾಕಿ ಸ್ಟೀಕ್‌ನಿಂದ ಫೈನಾನ್ಸಿಯರ್‌ ಹಾಗೂ ಆತನ ಸಹಚರರು ಹಲ್ಲೆ(Assault) ನಡೆಸಿರುವ ಘಟನೆ ಕೆಂಪೇಗೌಡ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಹಳೇ ಗುಟ್ಟಹಳ್ಳಿ ಯೋಗ ಕೇಂದ್ರದ ಕಾವಲುಗಾರ(Security Guard) ಯತೀಶ್‌ ಹಲ್ಲೆಗೊಳಗಾಗಿದ್ದು, ಈ ಘಟನೆ ಸಂಬಂಧ ಫೈನಾನ್ಸಿಯರ್‌(Financier) ವಾಸು ಹಾಗೂ ಆತನ ಇಬ್ಬರು ಸಹಚರರ ವಿರುದ್ಧ ಕೆಂಪೇಗೌಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಯತೀಶ್‌ ವಿರುದ್ಧ ಕೂಡಾ ವಾಸು ಪತ್ನಿ ದೂರು ಆಧರಿಸಿ ಪ್ರಕರಣ ದಾಖಲಾಗಿದೆ. ತಿಂಗಳ ಹಿಂದೆ ನಡೆದಿದ್ದ ಈ ಘಟನೆಯ ವಿಡಿಯೋ(Video) ಸಾಮಾಜಿಕ ಜಾಲತಾಣಗಳಲ್ಲಿ(Social Media) ಶನಿವಾರ ಬಹಿರಂಗವಾಗಿ ವೈರಲ್‌(Viral Video) ಆಗಿದ್ದು, ವಾಸು ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tap to resize

Latest Videos

Assault on Police: ಅಣ್ತಮ್ಮ ವಿರುದ್ಧ ರೌಡಿಪಟ್ಟಿ: ಸಾಮಾಜಿಕ ಜಾಲತಾಣದಲ್ಲಿ ಟೀಕೆ

ಹಲವು ದಿನಗಳಿಂದ ಹಳೇ ಗುಟ್ಟಹಳ್ಳಿಯ ಯೋಗ ಕೇಂದ್ರದಲ್ಲಿ(Yoga Center) ಯತೀಶ್‌ ಕಾವಲುಗಾರನಾಗಿದ್ದಾನೆ. ಅದೇ ಕೇಂದ್ರದಲ್ಲಿ ವಾಸು ಪತ್ನಿ ಕೂಡಾ ಕಾರ್ಯನಿರ್ವಹಿಸುತ್ತಾರೆ. ಇತ್ತೀಚಿಗೆ ವೈಯಕ್ತಿಕ ವಿಚಾರವಾಗಿ ಇಬ್ಬರ ಮಧ್ಯೆ ಮನಸ್ತಾಪವಾಗಿತ್ತು. ಇದರಿಂದ ಕೋಪಗೊಂಡ ಯತೀಶ್‌, ಆಕೆಯ ಮೊಬೈಲ್‌ಗೆ(Mobile) ರಾತ್ರಿ ಕೆಟ್ಟದಾಗಿ ಮೆಸೇಜ್‌(Message) ಕಳುಹಿಸಿದ್ದ. ಈ ವಿಚಾರ ತಿಳಿದು ಕೆರಳಿದ ವಾಸು, ಮರುದಿನ ತನ್ನ ಚಾಲಕ ಹಾಗೂ ಸಹಾಯಕನ ಜತೆ ಬಂದು ಯತೀಶ್‌ನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು(Police) ಹೇಳಿದ್ದಾರೆ.

ಈ ಪ್ರಕರಣದ ಬಗ್ಗೆ ದೂರು-ಪ್ರತಿ ದೂರು ಸಲ್ಲಿಕೆಯಾಗಿದ್ದವು. ಹಲ್ಲೆಗೊಳಗಾಗಿದ್ದ ಯತೀಶ್‌ ದೂರು ಆಧರಿಸಿ ವಾಸು ಮತ್ತು ಆತನ ಸಹಚರರ ಮೇಲೆ ಎಫ್‌ಐಆರ್‌(FIR) ದಾಖಲಿಸಲಾಯಿತು. ಬಳಿಕ ಅವರು ನ್ಯಾಯಾಲಯದಲ್ಲಿ(Court) ನಿರೀಕ್ಷಣಾ ಜಾಮೀನು(Bail) ಪಡೆದಿದ್ದಾರೆ. ಇತ್ತ ವಾಸು ಪತ್ನಿ ದೂರು ಆಧರಿಸಿ ಯತೀಶ್‌ ಮೇಲೆ ಸಹ ಪ್ರಕರಣ ದಾಖಲಿಸಿ ಬಳಿಕ ಆತನಿಗೆ ಠಾಣಾ ಜಾಮೀನು ಮಂಜೂರು ಮಾಡಲಾಯಿತು ಎಂದು ಅಧಿಕಾರಿಗಳು(Officers) ತಿಳಿಸಿದ್ದಾರೆ.

Mangaluru Attack : ಮಂಗಳೂರಲ್ಲಿ ಇಬ್ಬರು ಅನ್ಯಧರ್ಮೀಯ ಯುವಕರಿಗೆ ಥಳಿತ : ಯುವತಿಯರ ಜತೆ ತೆರಳುತ್ತಿದ್ದಾಗ ಹಲ್ಲೆ

ಅಶ್ಲೀಲ ಮೆಸೇಜ್‌ ಕಳಿಸಿದ್ದಕ್ಕೆ ಬಾಲಕನಿಗೆ ತಂಡದಿಂದ ಹಲ್ಲೆ

ಯುವತಿಗೆ(Girl) ಅಶ್ಲೀಲ ಮೇಸೆಜ್‌ ಕಳುಹಿಸಿದ್ದನ್ನು ಪ್ರಶ್ನಿಸಿ ಯುವಕರ ತಂಡವೊಂದು ಬಾಲಕನಿಗೆ ಹಲ್ಲೆ ನಡೆಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಪ್ರಕರಣಕ್ಕೆ(Case) ಸಂಬಂಧಿಸಿದಂತೆ ಹಲ್ಲೆಗೊಳಗಾದ ಬಾಲಕ ವಿಟ್ಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ಮೇ.29 ರಂದು ನಡೆದಿತ್ತು.  

ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಬಂಟ್ವಾಳ(Bantwal) ತಾಲೂಕಿನ ಸಾಲೆತ್ತೂರಿನಲ್ಲಿ ಕಾಡುಮಠ ಶಾಲೆಯ ಮೈದಾನದಲ್ಲಿ ನಡೆದಿರುವ ಈ ಹಲ್ಲೆ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಹಲ್ಲೆಗೊಳಗಾದ ಬಾಲಕ (16) ತಡವಾಗಿ ಬಂದು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಕನ್ಯಾನ ದಿನೇಶ್‌ ಹಾಗೂ ಮೂವರರ ವಿರುದ್ಧ ಜೀವ ಬೆದರಿಕೆ(Life Threatening), ಹಲ್ಲೆ(Assault) ಸಂಬಂಧಿಸಿದಂತೆ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿರುವ ವಿಟ್ಲ ಪೊಲೀಸರು ಆರೋಪಿಗಳ(Accused) ಪತ್ತೆಗಾಗಿ ಬಂಟ್ವಾಳ ಪೊಲೀಸ್‌ ಉಪಾಧೀಕ್ಷಕರ ನೇತೃತ್ವದ ತಂಡವನ್ನು ರಚಿಸಿದ್ದಾರೆ.

ದಿನೇಶ್‌ ಎಂಬಾತ ಬಾಲಕನಿಗೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ, ಬಾಲಕನ ಮನೆಮಂದಿಗೆ ಅವಾಚ್ಯವಾಗಿ ನಿಂದಿಸಿರುವುದು ವಿಡಿಯೋದಲ್ಲಿ(Video) ಸ್ಪಷ್ಟವಾಗಿದ್ದು, ಆರೋಪಿ ದಿನೇಶ್‌ನ ಬೆಂಬಲಿಗನೇ ಈ ವಿಡಿಯೋವನ್ನು ಮಾಡಿದ್ದಾನೆ ಎನ್ನಲಾಗಿದೆ.
 

click me!