
ಹುಣಸೂರು (ನ.21): ಮದುವೆಗೆ ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ತಾಯಿ ಮಗಳ ಜೊತೆ ಅಸಭ್ಯವಾಗಿ ವರ್ತಿಸಿ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಹುಣಸೂರು ತಾಲೂಕಿನ ಗಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೇವರಾಜ್ ಹಲ್ಲೆ ನಡೆಸಿರುವ ಆರೋಪಿ. ಹಲ್ಲೆಯಿಂದ ಯುವತಿ ಸಂಗೀತಾ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಗಂಗೇನಹಳ್ಳಿಯ ಸೀನಾ, ಶಂಕರ, ಮಂಚಮ್ಮ, ಬೋರಮ್ಮ ಹಾಗೂ ದೇವರಾಜ್ ಎಂಬುವರ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.
ಕಾರು ಅಪಘಾತ: ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರಗೆ ಗಾಯ
ಏನಿದು ಘಟನೆ?
ಮದುವೆಗಾಗಿ ಸೀನಾ ಎಂಬುವವರು ರಾಧ ಬಳಿ 50 ಸಾವಿರ ಸಾಲ ಕೇಳಿದ್ದರು. ಮದುವೆ ಕಾರ್ಯಕ್ಕೆ ಇಲ್ಲ ಅನ್ನಲಾಗಲ್ಲ ಹೀಗಾಗಿ 50 ಸಾವಿರ ಸಾಲ ಕೊಟ್ಟಿದ್ದ ರಾಧ. ಮದುವೆ ಮುಗಿದ ಒಂದು ತಿಂಗಳಲ್ಲಿ ಸಾಲ ಹಿಂದಿರುಗಿಸುವುದಾಗಿ ಹೇಳಿದ್ದ ಸೀನಾ. ಆದರೆ ಮದುವೆ ಮುಗಿದು ತಿಂಗಳು ಕಳೆದರೂ ಹಣ ವಾಪಸ್ ಕೊಡದೆ ಮರೆತಂತೆ ಓಡಾಡುತ್ತಿದ್ದರು. ಸಾಲ ವಾಪಸ್ ಕೊಡುವ ಬಗ್ಗೆ ಮಾತೇ ಆಡಿರಲಿಲ್ಲ. ಹೀಗಾಗಿ ಸಾಲ ಹಿಂದಿರುಗಿಸುವಂತೆ ಕೇಳಿದ್ದ ರಾಧ. ಆದರೂ ದಿನ ಕಳೆದರೂ ವಾಪಸ್ ಕೊಡದ್ದಕ್ಕೆ ಆಗಾಗ ಸಾಲ ಕೊಟ್ಟ ರಾಧ ಮನೆಗೆ ಬಂದು ಹಣ ಹಿಂದಿರುಗಿಸುವಂತೆ ಕೇಳುತ್ತಿದ್ದರು.
ಸತ್ತೇ ಹೋಗಿದ್ದಾನೆಂದು ಬಿಂಬಿಸಿ 2 ವರ್ಷದಿಂದ ತಲೆಮರೆಸಿಕೊಂಡು ತಿರುಗುತ್ತಿದ್ದ ರೌಡಿ ಅರೆಸ್ಟ್
ನಿನ್ನೆ ಸಹ ಮನೆ ಹತ್ತಿರ ಬಂದು ಹಣ ಕೇಳಿದಾಗ ಐವರು ಆರೋಪಿಗಳು ರಾಧ ಎಂಬಾಕೆ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಸಾಲ ವಾಪಸ್ ಕೇಳಿದ್ದಕ್ಕೆ ರಾಧಳನ್ನು ಎಳೆದಾಡಿರುವ ಐವರು ಆರೋಪಿಗಳು. ಈ ವೇಳೆ ರಕ್ಷಣೆಗೆ ಬಂದ ಮಗಳು ಸಂಗೀತಾ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಸಂಗೀತಾಳನ್ನು ಹುಣಸೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ಒಳ್ಳೆಯವರಿಗೆ ಇದು ಕಾಲ ಅಲ್ಲ. ಕಷ್ಟದಲ್ಲಿದ್ದಾರೆಂದು ಸಾಲ ನೀಡಿದ್ದ ತಪ್ಪಿಗೆ ಹಲ್ಲೆಗೊಳಗಾಗಿರುವುದು ದುರಂತವೇ ಸರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ