
ಬೆಂಗಳೂರು (ನ.21): ಸತ್ತು ಹೋಗಿದ್ದಾನೆಂದು ಬಿಂಬಿಸಿಕೊಂಡು ಕೊಲೆ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡು ತಿರುಗುತ್ತಿದ್ದ ಆರೋಪಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವೈಟ್ ಫೀಲ್ಡ್ ಪೊಲೀಸ್ ಠಾಣೆ ರೌಡಿ ಶೀಟರ್ ಆಗಿರುವ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಬಂಧಿತ ಆರೋಪಿ. ಕಾಡುಬಿಸನಹಳ್ಳಿ ಸೋಮನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಲ್ಲಿಕಾರ್ಜುನ.ಬಳಿಕ ರಾಜಾನುಕುಂಟೆಯಲ್ಲಿ ಒಂದು ಕೊಲೆ ಕೇಸ್ ನಲ್ಲಿ ಅರೋಪಿಯಾಗಿದ್ದ. ಪೊಲೀಸರಿಗೆ ಸಿಗದೆ ಎರಡು ವರ್ಷಗಳಿಂದ ತಲೆತಪ್ಪಿಸಿಕೊಂಡು ತಿರುಗಾಡುತ್ತಿದ್ದ ಖತರ್ನಾಕ ಆಸಾಮಿ. ಪೊಲೀಸರು ಮನೆಯವರನ್ನು ವಿಚಾರಿಸಿದಾಗ ಮಗ ಸತ್ತು ಹೋಗಿದ್ದಾನೆ ಎಂದು ನಂಬಿಸಿದ್ದ ಕುಟುಂಬದವರು. ಆದರೆ ಸಿಸಿಬಿಗೆ ಅವನು ಸತ್ತಿರುವ ವಿಚಾರದ ಬಗ್ಗೆ ಡೌಟು ಬಂದಿತ್ತು. ಹೀಗಾಗಿ ಈ ಪ್ರಕರಣದಲ್ಲಿ ಸತ್ತಿದ್ದಾನೆಂದು ಹೇಳಲಾದ ಆರೋಪಿ ಮಲ್ಲಿಕಾರ್ಜುನ ಪತ್ತೆಗೆ ವಿಚಾರಣೆಗೆ ಮುಂದಾಗಿತ್ತು.
ಕಾರು ಅಪಘಾತ: ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರಗೆ ಗಾಯ
ಗೆಳೆಯರು, ಕುಟುಂಬಸ್ಥರು ಯಾರನ್ನೇ ಕೇಳಿದರೂ ಸತ್ತಿದ್ದಾನೆಂದು ಮಾಹಿತಿ ನೀಡುತ್ತಿದ್ದರು. ಸಿಸಿಬಿ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಆರೋಪಿ ಮಲ್ಲಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕತೊಡಗಿತು. ಕೊನೆಗೆ ಆರೋಪಿ ಮಲ್ಲಿ ಸತ್ತಿಲ್ಲ. ಅರೆಸ್ಟ್‌ನಿಂದ ಬಚಾವ್ ಆಗಲು ಸತ್ತಿದ್ದಾನೆ ಬಿಂಬಿಸಿ ತಲೆಮರೆಸಿಕೊಂಡು ಊರೂರು ಓಡಾಡುತ್ತಿರುವ ಬಗ್ಗೆ ಸಿಸಿಬಿ ಮಾಹಿತಿ ಕಲೆಹಾಕಿ ಕೊನೆಗೂ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪ್ರಧಾನಿ ಮೋದಿ ರ‍್ಯಾಲಿ ಡ್ಯೂಟಿಗೆ ತೆರಳುತ್ತಿದ್ದ ಪೊಲೀಸ್ ವಾಹನ ಅಪಘಾತ, 6 ಅಧಿಕಾರಿಗಳು ಸಾವು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ