
ಫಿರೋಜಾಬಾದ್ (ಸೆ. 21) ಶ್ರೀನಗರ ಬೇಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇನಾ ಅಧಿಕಾರಿಯೊಬ್ಬರನ್ನು ಉತ್ತರ ಪ್ರದೇಶದ ಕಾನ್ಪುರದ ಮಹಿಳೆ ಹನಿ ಟ್ಯ್ರಾಪ್ ಬಲೆಗೆ ಬೀಳಿಸಿದ್ದಾಳೆ.
ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದವರನ್ನು ಮಹಿಳೆ ಬಲೆಗೆ ಕೆಡವಿದ್ದಾಳೆ. ಎರಡು ವರ್ಷದ ಹಿಂದೆ ಅಧಿಕಾರಿಯನ್ನು ಓರಿಸ್ಸಾಕ್ಕೆ ಪೋಸ್ಟಿಂಗ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾ ಇಸ್ಟಾಗ್ರ್ಯಾಮ್ ಮೂಲಕ ಅಧಿಕಾರಿಗೆ ಮಹಿಳೆ ಪರಿಚಯವಾಗಿದೆ. ಇಬ್ಬರು ಸ್ನೇಹಿತರಾಗಿದ್ದಾರೆ.
ಉದ್ಯಮಿಗೆ ಪೋರ್ನ್ ತೋರಿಸಿ ಕೋಟಿ ಕೋಟಿ ಗುಳುಂ..ಸುಂದರಿಯ ಕರಾಳ ಮುಖ
ಇದಾದ ಮೇಲೆ ಪರಿಚಯ ಸಂಬಂಧಕ್ಕೆ ತಿರುಗಿದ್ದು ಇಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಇದನ್ನು ವಿಡಿಯೋ ಸಹ ಮಾಡಿಕೊಂಡಿದ್ದಾರೆ. ಆದರೆ ನಂತರ ಮಹಿಳೆ ತನ್ನ ವರಸೆ ಬದಲಾಯಿಸಿದ್ದು ಇದೇ ವಿಡಿಯೋ ಮತ್ತು ಪೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾಳೆ..
ಅಧಿಕಾರಿಗೆ ಗೊತ್ತಾಗದಂತೆ ಆತನ ಸಹಿ ಸಹ ಪಡೆದುಕೊಂಡ ಮಹಿಳೆ ಮದುವೆಯಾಗಿದೆ ಎಂದು ನಂಬಿಸುವಂತಹ ದಾಖಲೆ ಸೃಷ್ಟಿ ಮಾಡಿಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಅಧಿಕಾರಿಯ ಬಳಿ 10 ಲಕ್ಷ ರೂ. ಗೆ ಪಡೆದಿಕೊಂಡಿದ್ದಾಳೆ. ಅಷ್ಟು ಸಾಲದು ಎಂದು ಈಗ ಅಧಿಕಾರಿ ಬಳಿ ನಿನ್ನ ಆಸ್ತಿಯನ್ನು ಬರೆದುಕೊಡು ಎಂದು ಬೆನ್ನು ಹತ್ತಿದ್ದಾಳೆ.
ಸೇನಾ ಅಧಿಕರಾರಿಯ ಕುಟುಂಬಕ್ಕೆ ಈ ಮಾಹಿತಿ ಗೊತ್ತಾಗಿತ್ತು ಅಧಿಕಾರಿಯ ಸಹೋದರ ಸಂಬಂಧಿ ಒಬ್ಬರು ದೂರು ನೀಡಿದ್ದಾರೆ. ಪೊಲೀಸರು ಮಹಿಳೆ ಪತ್ತೆಗೆ ಬಲೆ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ