* ಮಗನ ಶಾಲಾ ವಾಟ್ಸಪ್ ಗ್ರೂಪ್ ನಲ್ಲಿ ಅಶ್ಲೀಲ ಚಿತ್ರ ಹರಿಬಿಟ್ಟ ತಂದೆ
* ಸ್ನೇಹಿತ ಕಳಿಸಿದ್ದನ್ನು ಆಕಸ್ಮಿಕವಾಗಿ ಕಳಿಸಿದೆ
* ಉಳಿದ ಮಕ್ಕಳ ಪೋಷಕರಿಗೆ ತಿವ್ರ ಮುಜುಗರ
ಚೆನ್ನೈ(ಸೆ. 21) ತಮಿಳುನಾಡಿನ ಆವಡಿ ಉಪನಗರದ 39 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಇದೊಂದು ವಿಚಿತ್ರ ಪ್ರಕರಣ ತನ್ನ 11 ವರ್ಷದ ಮಗನ ಶಾಲಾ ವಾಟ್ಸಾಪ್ ಗ್ರೂಪ್ ನಲ್ಲಿ ಅಶ್ಲೀಲ ಕಂಟೆಂಟ್ ಒಂದನ್ನು ಶೇರ್ ಮಾಡಿದ್ದ.
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಬಿ ಮುನುಸಾಮಿ ಎಂಬುವರನ್ನು ಬಂಧಿಸಲಾಗಿದೆ. ಅವರ ಮಗ ಖಾಸಗಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿ. ಆನ್‌ಲೈನ್ ಶಿಕ್ಷಣಕ್ಕಾಗಿ ಮಗುವಿನ ಶಾಲೆಯು ವಾಟ್ಸಾಪ್‌ನಲ್ಲಿ ಒಂದು ಗುಂಪನ್ನು ರಚಿಸಿತ್ತು. ವಾಟ್ಸಾಪ್ ಗುಂಪಿನಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಸದಸ್ಯರಾಗಿದ್ದರು.
ಪೋರ್ನ್ ಸೈಟ್ ಗೆ ಸಹಪಾಠಿ ನಂಬ್ ಅಪ್ ಲೋಡ್ ಮಾಡಿದ
ಶನಿವಾರ ಸಂಜೆ, ಮುನುಸಾಮಿ ಅವರು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಲೈಂಗಿಕ ಚಿತ್ರಗಳು ಮತ್ತು ವಿಡಿಯೋ ತುಣುಕುಗಳನ್ನು ಪೋಸ್ಟ್ ಮಾಡಿದ್ದಾರೆ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ನಂತರ ಅವರು ಈ ವಿಷಯದಲ್ಲಿ ಶಾಲಾ ಆಡಳಿತಕ್ಕೆ ತಿಳಸಿದ್ದಾರೆ. ಶಾಲಾ ಮಂಡಳಿ ದೂರು ನೀಡಿದ ಕಾರಣ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಸ್ನೇಹಿತರೊಬ್ಬರು ಕಳುಹಿಸಿದ ಕಂಟೆಂಟ್ ನನ್ನು ನಾನು ಮದ್ಯದ ನಶೆಯಲ್ಲಿದ್ದಾಗ ಸೆಂಡ್ ಮಾಡಿದ್ದೇನೆ ಎಂದು ಮುನಿಸಾಮಿ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸಿದ್ದ ಆರೋಪದ ಮೇಲೆ ಕೆಲ ದಿನಗಳ ಹಿಂದೆ ಶಿಕ್ಷಕನೊಬ್ಬನ ಬಂಧನವಾಗಿತ್ತು.