ಕೊನೆಗೂ ರಾಜ್ ಕುಂದ್ರಾಗೆ ಜಾಮೀನು.. ಯಾವ ಪಾಯಿಂಟ್ ನೆರವಿಗೆ ಬಂತು?

By Suvarna News  |  First Published Sep 20, 2021, 10:59 PM IST

* ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣ
* ಉದ್ಯಮಿ ರಾಜ್ ಕುಂದ್ರಾಗೆ ಕೊನೆಗೂ ಜಾಮೀನು
*. 50 ಸಾವಿರ ರೂಪಾಯಿಗಳ ಶ್ಯೂರಿಟಿ
* ಬಲಿಪಶು ಮಾಡಲಾಗಿದೆ ಎಂದ ಕುಂದ್ರಾ


ಮುಂಬೈ(ಸೆ. 20) ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ  ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾಗೆ ಕೊನೆಗೂ ಜಾಮೀನು ಸಿಕ್ಕಿದೆ.  ಕುಂದ್ರಾ ಮತ್ತು ಅವರ  ಸಹಾಯಕರಾಗಿದ್ದ ರಯಾನ್ ಥೋರ್ಪೆ ಗೆ ಜಾಮೀನು ಸಿಕ್ಕಿದೆ.

ಕುಂದ್ರಾ ಅಶ್ಲೀಲ ಚಿತ್ರಗಳ ನಿರ್ಮಾಣದಲ್ಲಿ ಭಾಗಿಯಾಗಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಈ ಪ್ರಕರಣದಲ್ಲಿ ಕುಂದ್ರಾ ರನ್ನು ಬಲಿಪಶು ಮಾಡಲಾಗಿದೆ ಎಂದು  ವಕೀಲರು ವಾದ ಮುಂದಿಟ್ಟಿದ್ದರು. ಜುಲೈ 19 ರಂದು ಕುಂದ್ರಾ ಬಂಧನವಾಗಿತ್ತು. 

Tap to resize

Latest Videos

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹಾಗೂ ರಯಾನ್ ಥಾರ್ಪ್‌ಗೆ ಮುಂಬೈ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 50 ಸಾವಿರ ರೂಪಾಯಿಗಳ ಶ್ಯೂರಿಟಿ ಮೇರೆಗೆ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ.

ಪತಿ ಕುಂದ್ರಾ ವಿರುದ್ಧ ಪತ್ನಿ ಶಿಲ್ಪಾಳೆ ಸಾಕ್ಷಿ!

ಅಶ್ಲೀಲ ಚಿತ್ರಗಳ ನಿರ್ಮಾಣ ದಂಧೆ ಪ್ರಕರಣದಲ್ಲಿ ತಮ್ಮನ್ನು ‘ಬಲಿಪಶು’ ಮಾಡಲಾಗುತ್ತಿದೆ. ಅಶ್ಲೀಲ ಚಿತ್ರಗಳ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಯಾವುದೇ ಸಾಕ್ಷ್ಯ ಸಪ್ಲಿಮೆಂಟರಿ ಚಾರ್ಜ್‌ಶೀಟ್‌ನಲ್ಲಿಲ್ಲ ಎಂದು ಜಾಮೀನಿಗೆ ಮನವಿ ಮಾಡಿ ಸೆಪ್ಟೆಂಬರ್ 18 ರಂದು ನ್ಯಾಯಾಲಯಕ್ಕೆ ರಾಜ್ ಕುಂದ್ರಾ ಅರ್ಜಿ ಸಲ್ಲಿಸಿದ್ದರು. ಪರಿಣಾಮ ಇವತ್ತು ರಾಜ್ ಕುಂದ್ರಾಗೆ ಜಾಮೀನು ಸಿಕ್ಕಿದೆ.

ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು 1,400 ಪುಟಗಳ  ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.  ಈ ಮೂಲಕ ಸದ್ಯದ ಮಟ್ಟಿಗೆ ಕುಂದ್ರಾ ಜೈಲು ವಾಸ ಮುಕ್ತಾಯವಾಗಿದೆ.

ಕುಂದ್ರಾ ವಿರುದ್ಧ ಸಾಕಷ್ಟು ದಾಖಲೆ ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದರು. ಪತ್ನಿ ಶಿಲ್ಪಾ ಶೆಟ್ಟಿ ವೂಷ್ಣೋದೇವಿಗೆ ತೆರಳಿ ಸಂಕಷ್ಟದಿಂದ ಪಾರು ಮಾಡುವಂತೆ ದೇವರಲ್ಲಿ ಮೊರೆ ಇಟ್ಟಿದ್ದರು .

ರಾಜ್ ಕುಂದ್ರಾ ಅವರ ಈ-ಮೇಲ್‌ಗಳು, ರಾಜ್ ಕುಂದ್ರಾ ಮತ್ತು ಇತರೆ ಆರೋಪಿಗಳ ನಡುವಿನ ವಾಟ್ಸ್‌ಆಪ್ ಚಾಟ್‌ಗಳು, 24 ಹಾರ್ಡ್‌ ಡಿಸ್ಕ್ ವಿವರಗಳು, ರಾಜ್ ಕುಂದ್ರಾ ಅವರ ಹಣಕಾಸಿನ ವಿವರಗಳನ್ನು ಪೊಲೀಸರು ಸಲ್ಲಿಕೆ ಮಾಡಿದ್ದರು. 

 

click me!