ದೇವಸ್ಥಾನ ಆಸ್ತಿ ವಿವಾದ: ಜೆಡಿಎಸ್ ಮುಖಂಡನಿಂದ ಇಬ್ಬರ ಬರ್ಬರ ಕೊಲೆ

By Govindaraj SFirst Published Sep 22, 2022, 11:28 PM IST
Highlights

ಮಧುಗಿರಿ ತಾಲ್ಲೂಕು ಮಿಡಿಗೇಶಿ ಗ್ರಾಮದಲ್ಲಿ ದೇವಸ್ಥಾನದ ಆಸ್ತಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರ ಬರ್ಬರ ಹತ್ಯೆಯಾಗಿದೆ. ಅಲ್ಲದೆ ಘಟನೆಯಲ್ಲಿ ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. 

ತುಮಕೂರು (ಸೆ.22): ಮಧುಗಿರಿ ತಾಲ್ಲೂಕು ಮಿಡಿಗೇಶಿ ಗ್ರಾಮದಲ್ಲಿ ದೇವಸ್ಥಾನದ ಆಸ್ತಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರ ಬರ್ಬರ ಹತ್ಯೆಯಾಗಿದೆ. ಅಲ್ಲದೆ ಘಟನೆಯಲ್ಲಿ ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಿಡಿಗೇಶಿ ಗ್ರಾಮದಲ್ಲಿ ಗಣಪತಿ ದೇವಸ್ಥಾನ ಜಾಗ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು ಮಿಡಿಗೇಶಿ ಗ್ರಾಮದ ಜೆಡಿಎಸ್ ಮುಖಂಡ ಶ್ರೀಧರ್ ಗುಪ್ತ ಎಂಬಾತ ದೇವಸ್ಥಾನದ ಜಾಗ ಕಬಳಿಸಲು ಯತ್ನಿಸಿದ್ದ ಎನ್ನಲಾಗಿದೆ. ಈ ಜಾಗ ಉಳಿಸಿಕೊಳ್ಳಲು ಗ್ರಾಮಸ್ಥರು ಕೋರ್ಟ್ ಮೆಟ್ಟಿಲೇರಿದ್ದ ಪರಿಣಾಮ ನ್ಯಾಯಾಲಯದಲ್ಲಿ ತೀರ್ಪು ಗ್ರಾಮಸ್ಥರ ಪರವಾಗಿದ್ದ ಬಂದಿದೆ. ರಾಮಾಂಜನಯ್ಯ ಹಾಗೂ ಶಿಲ್ಪಾ, ದೇವಸ್ಥಾನದ ಜಾಗ ಉಳಿಸಿಕೊಳ್ಳಲು ಹೋರಾಟ ನಡೆಸಿದರು. 

ಇದೇ ವಿಚಾರಕ್ಕೆ ರಾಮಾಂಜನಯ್ಯ ಹಾಗೂ ಶಿಲ್ಪಾ ಸೇರಿ ಇತರರ ವಿರುದ್ಧ ದ್ವೇಷಕಾರಿದ್ದ ಶ್ರೀಧರ್ ಗುಪ್ತ, ರಸ್ತೆಯಲ್ಲಿ ಮಾತನಾಡುತ್ತಿದ್ದಾಗ ಏಕಾಏಕಿ ನುಗ್ಗಿ ಶ್ರೀಧರ್ ಗುಪ್ತ ಹಾಗೂ ಸಹಚರರಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ರಾಮಾಂಜನಯ್ಯ (48), ಶಿಲ್ಪಾ (38), ಕೊಲೆಯಾದ ಮೃತ ದುರ್ದೈವಿಗಳಾಗಿದ್ದಾರೆ. ಮಲ್ಲಿಕಾರ್ಜುನಯ್ಯ (42) ಗಂಭೀರ ಗಾಯಗೊಂಡ ಕಾರಣ ಮಧುಗಿರಿ ಸರ್ಕಾರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಮಾಂಜಿನಪ್ಪನವರ ಕುಟುಂಬಸ್ಥರಿಂದ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಸಿಪಿಐ ಎಂ.ಎಸ್ ಸರ್ದಾರ್, ಪಿಎಸೈ ತಾರಾಸಿಂಗ್ ಭೇಟಿ ನೀಡಿದ್ದು, ಮೃತ ದೇಹಗಳನ್ನು ಮಧುಗಿರಿ ಶವಾಗಾರದಲ್ಲಿ ಇರಿಸಲಾಗಿದೆ. ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gadag: ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದೊಯ್ದು ಪೊಲೀಸರಿಂದ ಅಮಾಯಕ ಯುವಕರ ಮೇಲೆ ಹಲ್ಲೆ!

ಆಸ್ತಿ ವಿಚಾರಕ್ಕೆ ಬಾಲ್ಯ ಸ್ನೇಹಿತನ ಚಿಕ್ಕಪ್ಪನ ಹತ್ಯೆ ಮಾಡಿದ ಗೆಳೆಯ: ಆಸ್ತಿ ವಿಚಾರವಾಗಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ತನ್ನ ಬಾಲ್ಯ ಸ್ನೇಹಿತನ ಚಿಕ್ಕಪ್ಪನ ತಲೆಗೆ ಸಿಮೆಂಟ್‌ ಇಟ್ಟಿಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಕೆ.ಪಿ.ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಗಡಿ ರಸ್ತೆಯ ಯಲ್ಲಮ್ಮ ದೇವಸ್ಥಾನ ರಸ್ತೆ ನಿವಾಸಿ ಬಾಲಕೃಷ್ಣ (39) ಕೊಲೆಯಾದವರು. ಈ ಸಂಬಂಧ ನವೀನ್‌ ರಾವ್‌(25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ರಸ್ತೆಯ ನಿವಾಸಿ ಗೋವಿಂದಸ್ವಾಮಿಗೆ ಮೂರು ಹೆಣ್ಣು, ಮೂರು ಗಂಡು ಸೇರಿದಂತೆ ಆರು ಮಕ್ಕಳಿದ್ದಾರೆ. ಈ ಪೈಕಿ ಹೆಣ್ಣು ಮಕ್ಕಳಿಗೆ ವಿವಾಹವಾಗಿದೆ. ಆಸ್ತಿಯನ್ನು ಮೂರು ಭಾಗ ಮಾಡಿ ಹಂಚಲಾಗಿದೆ. ಮೂರು ಗಂಡು ಮಕ್ಕಳ ಪೈಕಿ ಹಿರಿಯ ಮಗ ವೆಂಕಟೇಶ್‌ ಮೃತಪಟ್ಟಿದ್ದಾರೆ. ಇವರಿಗೆ ಪತ್ನಿ ಭಾರತಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ವೆಂಕಟೇಶ್‌ ಪಾಲಿನ ಆಸ್ತಿಯನ್ನು ಕೊಲೆಯಾದ ಬಾಲಕೃಷ್ಣ ಅನುಭವಿಸುತ್ತಿದ್ದ ಎನ್ನಲಾಗಿದೆ. ವೆಂಕಟೇಶ್‌ ಪುತ್ರ ನವೀನನ ಬಾಲ್ಯ ಸ್ನೇಹಿತನಾದ ಆರೋಪಿ ನವೀನ್‌ ರಾವ್‌, ಆಸ್ತಿಯನ್ನು ವೆಂಕಟೇಶ್‌ ಅವರ ಮಕ್ಕಳಿಗೆ ನೀಡುವಂತೆ ಬಾಲಕೃಷ್ಣಗೆ ಹೇಳಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಮನಸ್ತಾಪ ಉಂಟಾಗಿತ್ತು.

ಸೋಮವಾರ ಮುಂಜಾನೆ 2ರ ಸುಮಾರಿಗೆ ಬಾಲಕೃಷ್ಣ ಹಾಗೂ ನವೀನ್‌ ರಾವ್‌ ಎದುರಾಗಿದ್ದು, ಆಸ್ತಿ ವಿಚಾರವಾಗಿ ಜಗಳ ಆರಂಭವಾಗಿದೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ, ಆರೋಪಿ ನವೀನ್‌ ರಾವ್‌ ಸಿಮೆಂಟ್‌ ಇಟ್ಟಿಗೆಯಿಂದ ಬಾಲಕೃಷ್ಣ ಅವರ ತಲೆಗೆ ಹಲವು ಬಾರಿ ಬಲವಾಗಿ ಹೊಡೆದಿದ್ದಾನೆ. ಗಲಾಟೆ ಶಬ್ದ ಕೇಳಿ ನೆರಹೊರೆಯವರು ಹೊರಬಂದು ನವೀನ್‌ ರಾವ್‌ನನ್ನು ಹಿಡಿದುಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಲಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Chikkaballapur: ಕಳ್ಳನ ಜತೆ ಬಂದ ಪೊಲೀಸರ ಕೂಡಿ ಹಾಕಿದ ಚಿನ್ನದಂಗಡಿ ಮಾಲೀಕರು!

ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕೃಷ್ಣನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ, ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಿಸದೆ ಸೋಮವಾರ ಮುಂಜಾನೆ 5ರ ಸುಮಾರಿಗೆ ಆತ ಮೃತಪಟ್ಟಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಮೃತನ ಸಹೋದರ ವಿನೋದ್‌ ಕುಮಾರ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಕೆ.ಪಿ.ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!