ಸಮೀಪದ ಸಂಪಗಾಂವ ಗ್ರಾಮದ ಹಳೇ ತಿಗಡಿ ರಸ್ತೆಯ ಹತ್ತಿರ ಯಾರೋ ಅಪರಿಚಿತರು ಚಕ್ಕಡಿಯ ಸಮೇತ ಎರಡು ಕಟಗಿಯ ದ್ಯಾಮವ್ವನ ಮೂರ್ತಿಗಳನ್ನು ಇಟ್ಟುಹೋಗಿರುವುದು ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೈಲಹೊಂಗಲ (ಜೂ.16): ಸಮೀಪದ ಸಂಪಗಾಂವ ಗ್ರಾಮದ ಹಳೇ ತಿಗಡಿ ರಸ್ತೆಯ ಹತ್ತಿರ ಯಾರೋ ಅಪರಿಚಿತರು ಚಕ್ಕಡಿಯ ಸಮೇತ ಎರಡು ಕಟಗಿಯ ದ್ಯಾಮವ್ವನ ಮೂರ್ತಿಗಳನ್ನು ಇಟ್ಟುಹೋಗಿರುವುದು ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೆಳಗ್ಗೆ ಗ್ರಾಮದ ಹತ್ತಿರ ಈ ರೀತಿ ಚಕ್ಕಡಿಯಲ್ಲಿ ದೇವತೆಗಳನ್ನು ಇಟ್ಟುಹೋಗಿರುವದರಿಂದ ಗ್ರಾಮಸ್ಥರು ಗುಂಪು-ಗುಂಪಾಗಿ ಹೋಗಿ ಚಕ್ಕಡಿಯಲ್ಲಿರುವ ಮೂರ್ತಿಗಳನ್ನು ಕಂಡು ಏಕೆ ಬಿಟ್ಟು ಹೋಗಿದ್ದಾರೆ ಎಂದು ಸಂಕೆ ವ್ಯಕ್ತಪಡಿಸುತ್ತಿದ್ದಾರೆ.
undefined
ಜಾರಕಿಹೊಳಿ ಕುಟುಂಬದಿಂದ ಲಕ್ಷ್ಮಣ್ ಸವದಿ ಟಾರ್ಗೆಟ್? ಅಥಣಿಯಲ್ಲಿ ಸವದಿ ವಿರುದ್ಧ ಮತ್ತೆ ಗುಡುಗಿದ ರಮೇಶ್ ಜಾರಕಿಹೊಳಿ!
ಈ ದೇವತೆ ಮೂರ್ತಿಗಳನ್ನು ಪೂಜೆ ಮಾಡಿ ಒಂದು ಊರಿನಿಂದ ಇನ್ನೊಂದು ಊರಿನ ಹದ್ದಿಗೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಮೂರ್ತಿಗಳನ್ನು ಏನೂ ಮಾಡಬೇಕೆಂಬುದು ತೋಚದಂತಾಗಿದೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.