ಮೈಸೂರು ಆಂಟಿ, ಮಗನ ಹತ್ಯೆ ಮಾಡಿ ಚಾಟ್ಸ್‌ ಮಾರ್ತಿದ್ದ ಹಂತಕ, 1 ವರ್ಷದ ಕೋಲ್ಡ್‌ ಬ್ಲಡ್‌ ಕೊಲೆ ಬಯಲಿಗೆ!‌

By Suvarna News  |  First Published Mar 24, 2024, 8:54 AM IST

ಒಂದು ವರ್ಷದ ಬಳಿಕ ಪತ್ತೆಯಾಯ್ತು ಕೋಲ್ಡ್‌ ಬ್ಲಡ್‌ ಮರ್ಡರ್‌ ಕೇಸ್. ಆಕೆಯ ಲಗೇಜ್‌ ಬ್ಯಾಗ್‌ನಲ್ಲೆ ಅಮ್ಮ-ಮಗನ ಶವ ಪ್ಯಾಕ್‌ ಮಾಡಿ ಬಾವಿಗೆ ಎಸೆದು ಬಂದಿದ್ದ ಕ್ರೂರಿ. ತಾಯಿಯ ಹತ್ಯೆಗೆ ಮಗ ಸಾಕ್ಷಿಯಾಗ್ತಾನೆ ಅಂತಾ ಆತನನ್ನೂ ಕ್ರೂರವಾಗಿ ಕೊಂದಿದ್ದ ಕಿರಾತಕ ಅರೆಸ್ಟ್ 


ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಮಾ.24): ಒಂದು ವರ್ಷದ ಹಿಂದೆ ವಿಜಯಪುರದಲ್ಲಿ ನಡೆದಿದ್ದ ಕೊಲ್ಡ್‌ ಬ್ಲಡ್ ಮರ್ಡರ್‌ ಕೇಸ್‌ವೊಂದು ಬಯಲಿಗೆ ಬಂದಿದೆ. ಮೈಸೂರು ಮೂಲದ ಬ್ಯೂಟಿ ಲೇಡಿ ಆಂಡ್‌ ಮಗನ ಜೋಡಿ ಕೊಲೆ ಯಾವುದೇ ಕ್ಲೂ ಇಲ್ಲದೆ ಪೊಲೀಸರಿಗೆ ಮಿಸ್ಟೆರಿಯಾಗಿ ಉಳಿದಿತ್ತು. ಬಾವಿಯೊಂದರಲ್ಲಿ ಬಿದ್ದಿದ್ದ ಬ್ಯಾಗ್‌ಗಳಲ್ಲಿ ಅಡಗಿಸಿಟ್ಟಿದ್ದ ಜೋಡಿ ಹೆಣಗಳ ರಹಸ್ಯವನ್ನ ಕೊನೆಗು ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಜೋಡಿ ಕೊಲೆ ಪ್ರಕರಣದ ಹಿಂದಿನ ಕ್ರೈಂ ಕಥೆ ಮಾತ್ರ ಥ್ರಿಲ್ಲರ್‌ ಮೂವಿಯನ್ನು ಮೀರಿಸುವಂತಿದೆ..

Tap to resize

Latest Videos

ವರ್ಷದ ಹಿಂದಿನ ಕೋಲ್ಡ್‌ ಬ್ಲಡ್‌ ಮರ್ಡರ್‌ ಕೇಸ್‌ ಪತ್ತೆ!
ಅದು ಬರೊಬ್ಬರಿ ಒಂದು ವರ್ಷದ ಹಿಂದೆ ನಡೆದಿದ್ದ ಡಬಲ್‌ ಮರ್ಡರ್‌. ಮರ್ಡರ್‌ ಹಿಂದಿನ ರಹಸ್ಯ ಬಯಲಾಗಿದ್ದು ಒಂದು ವರ್ಷದ ಬಳಿಕ. ಹೌದು. ಕಳೆದ ಕಳೆದ 2023 ಮಾರ್ಚ್‌ 19 ರಂದು ತಿಕೋಟ ತಾಲೂಕಿನ ಸಿದ್ದಾಪುರ ಗ್ರಾಮದ ಬಾವಿಯೊಂದರಲ್ಲಿ ಎರಡು ಬ್ಯಾಗ್‌ ಗಳಲ್ಲಿ ಜೋಡಿ ಹೆಣಗಳು ಪತ್ತೆಯಾಗಿದ್ವು. ಕೊಳೆತು ವಿಕಾರಗೊಂಡಿದ್ದ ಹೆಣಗಳ ಗುರುತು ಪತ್ತೆ ಸಿಕ್ಕಿರಲಿಲ್ಲ. ಒಂದು ಹೆಣ್ಣು ಹಾಗೂ ಇನ್ನೊಂದು ಪುರುಷನ ಡೆಡ್‌ ಬಾಡಿ ಅನ್ನೋದು ಮಾತ್ರ ಗೊತ್ತಾಗಿತ್ತು. ಮೇಲ್ನೊಟಕ್ಕೆ ಕೊಲೆ ಎನ್ನಲಾದ ಈ ಪ್ರಕರಣ ಪೊಲೀಸರಿಗೆ ಕಗ್ಗಂಟಾಗಿತ್ತು. ಆದ್ರೆ ಕೊನೆಗೂ ಒಂದು ವರ್ಷದ ಬಳಿಕ ಈ ಕೋಲ್ಡ್‌ ಬ್ಲಡ್‌ ಮರ್ಡರ್‌ ಕೇಸನ್ನ ಗ್ರಾಮೀಣ ಠಾಣೆ ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನ ಬಂಧಿಸಿದ್ದಾರೆ.

ತುಮಕೂರು: ಕಾರಿನಲ್ಲಿ 3 ಮೃತದೇಹ ಪತ್ತೆ ಪ್ರಕರಣ, ಚಿನ್ನಕ್ಕಾಗಿ ಆಸೆಪಟ್ಟು ಪ್ರಾಣ ಕಳೆದುಕೊಂಡರು..!

ಬ್ಯೂಟಿ ಆಂಟಿ ಜೊತೆಗಿನ ಲವ್‌ ಡಬಲ್‌ ಮರ್ಡರ್‌ನಲ್ಲಿ ಅಂತ್ಯ
ಅಂದು ವರ್ಷದ ಹಿಂದೆ ಅಪರಿಚಿತ ಹೆಣಗಳಾಗಿ ಸಿಕ್ಕಿದ್ದ ಎರಡು ಡೆಡ್‌ ಬಾಡಿಗಳು ಅಮ್ಮ ಹಾಗೂ ಮಗನದ್ದು ಅನ್ನೋದು ಈಗ ಪತ್ತೆಯಾಗಿದೆ. ಮೈಸೂರು ಮೂಲದ 35 ವರ್ಷದ ಶೃತಿ ಡಿ ಎಸ್ ಹಾಗೂ 13 ವರ್ಷದ ಮಗ ರೋಹನ್‌ ಕೊಲೆಯಾದ ಅಮ್ಮ-ಮಗ. ಮೈಸೂರಿನಲ್ಲಿ ಇದೆ ಶೃತಿ ಡಿ ಎಸ್‌ ವಿಜಯಪುರ ಮೂಲದ ಸಾಗರ್‌ ನಾಯಕ್‌ ಅನ್ನೋ ಯುವಕನನ್ನ ಪ್ರೀತಿ ಮಾಡಿದ್ದಳು. ಬಳಿಕ ಆತನನ್ನ ಹುಡುಕಿಕೊಂಡು ದಿನಾಂಕ 13 ಮಾರ್ಚ್‌ 2023 ರಂದು ವಿಜಯಪುರಕ್ಕೆ ಬಂದಿದ್ದಳು. ಸಾಗರ್‌ ಆಕೆಯನ್ನ ನಗರದ ಸಿಂದಗಿ ರಸ್ತೆಯ ಪೋರ್‌ ವೇ ಲಾಡ್ಜ್‌ ನಲ್ಲಿ ಇರಿಸಿದ್ದ.‌ ಆದ್ರೆ ಲಾಡ್ಜ್‌ ನಲ್ಲಿ ಅದೇನಾಯ್ತೋ ಗೊತ್ತಿಲ್ಲ ಸಾಗರ್‌ ಶೃತಿಯನ್ನ ಕತ್ತು ಹಿಸುಕಿ ಮರ್ಡರ್‌ ಮಾಡಿದ್ದ. ಬಳಿಕ ಈ ಕೊಲೆಗೆ ಇಂದಿಲ್ಲ ನಾಳೆ ಆಕೆಯ ಮಗ ರೋಶನ್‌ ಸಾಕ್ಷಿಯಾಗ್ತಾನೆ ಅಂತಾ ಆತನನ್ನ ಕೊಲೆ ಮಾಡಿದ್ದ.

ಶೃತಿ ಲಗೇಜ್ ಬ್ಯಾಗ್‌ ನಲ್ಲಿ ಶವಗಳನ್ನ ಸಾಗಿಸಿದ್ದ ಸಾಗರ್!
ಇನ್ನೂ ತಾಯಿ ಮಗನನ್ನ ಕೊಂದ ಕ್ರೂರಿ ಸಾಗರ್‌ ತನ್ನ ಗೆಳೆಯ ಲಕ್ಷ್ಮೀಕಾಂತ ಕುಂಬಾರ್‌ ಸಹಾಯದೊಂದಿಗೆ ಶೃತಿಯ ಬಟ್ಟೆ ತಂದಿದ್ದ ಲಗೇಜ್‌ ಬ್ಯಾಗ್‌ ಗಳನ್ನೆ ಖಾಲಿ ಮಾಡಿ ಎರಡು ಹೆಣಗಳನ್ನ ತುಂಬಿದ್ದ. ಬಳಿಕ ಸ್ಕಾರ್ಪಿಯೋ ವಾಹನ ತಂದು ರಾತ್ರೋ ರಾತ್ರಿ ಎರಡು ಹೆಣಗಳನ್ನ ಬ್ಯಾಗ್‌ ಸಮೇತ ಎಳೆದೋಯ್ದು‌ ಮಹಾರಾಷ್ಟ್ರ ಗಡಿಯಲ್ಲಿರೋ ಸಿದ್ದಾಪುರ ಗ್ರಾಮದ ಹೊರವಲಯಕ್ಕೆ ತಂದಿದ್ರು. ಆಗ ಆಕೆಯ ಇನ್ನೊಂದು ಬ್ಯಾಗ್‌ ನಲ್ಲಿದ್ದ ಬಟ್ಟೆಗಳನ್ನ ಅಲ್ಲಿದ್ದ ಕೆನಾಲ್‌ ಒಂದಕ್ಕೆ ಹಾಕಿದ್ದರು. ಖಾಲಿಯಾದ ಅದೆ ಬಾಗ್‌ ನಲ್ಲಿ ರೋಹನ್‌ ಹೆಣವನ್ನ ಹಾಕಿ ಎರಡು ಬ್ಯಾಗ್‌ ಗಳನ್ನ ಊರ ಹೊರಗಿನ ಬಾವಿಗೆ ಹಾಕಿದ್ದರು. ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದರು.

ಪರೀಕ್ಷೆ ಬರೆಯಲು ತಂಗಿಗೆ ಚೀಟಿ ತಂದ ಅಣ್ಣ, ಬಿಡದ್ದಕ್ಕೆ ಪೊಲೀಸ್‌ ವಿರುದ್ಧ ಹಿಗ್ಗಾಮುಗ್ಗಾ ಥಳಿತ!

ವಾರದ ಬಳಿಕ ತೇಲಿ ಬಂದಿದ್ದ ಹೆಣವಿದ್ದ ಲಗೇಜ್‌ ಗಳು
ವಾರದ ಬಳಿಕ ಬಾವಿಯಲ್ಲಿ ಮುಳುಗಿದ್ದ ಹೆಣವಿದ್ದ ಬ್ಯಾಗ್‌ ಗಳೆರಡು ಮೇಲೆದ್ದು ಬಂದಿದ್ದವು. ಆಗ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಕೊಳೆತ ಹೆಣಗಳ ಪೋಟೊಗಳನ್ನ ಪಡೆದು ರಾಜ್ಯದ ಎಲ್ಲ ಠಾಣೆಗಳು ರವಾನಿಸಿದ್ದರು. ಎಲ್ಲಿಂದಲು ಉತ್ತರ ಬರದೆ ಇದ್ದಾಗ ಉತ್ತರ ಭಾರತದಿಂದ ಯಾರೋ ಕೊಲೆ ಮಾಡಿ ಇಲ್ಲಿ ತಂದು ಬಿಸಾಕಿರಬೇಕು ಎಂದು ಪೊಲೀಸರು ಸುಮ್ಮನಾಗಿದ್ರು. ಆದ್ರೆ ವರ್ಷದ ಬಳಿಕ ಜೋಡಿ ಕೊಲೆ ಪ್ರಕರಣಕ್ಕೆ ಮರುಜೀವ ಬಂದಿತ್ತು.

ಮೈಸೂರಿನಲ್ಲಿ ದಾಖಲಾಯ್ತು ಮಿಸ್ಸಿಂಗ್‌ ಕೇಸ್
ಇನ್ನು ಒಂದು ವರ್ಷದ ಬಳಿಕ ಕಳೆದ ಫೆಬ್ರವರಿಯಲ್ಲಿ ಮೈಸೂರು ನಗರದಲ್ಲಿ ಮಿಸ್ಸಿಂಗ್‌ ಕೇಸ್‌ ದಾಖಲಾಗಿತ್ತು. 35 ವರ್ಷದ ಶೃತಿ ಹಾಗೂ ಆಕೆಯ 13 ವರ್ಷದ ಮಗ ಒಂದು ವರ್ಷದಿಂದ ಕಾಣೆಯಾಗಿದ್ದಾರೆ ಅಂತಾ ಸಂಬಂಧಿಕರು ಮೈಸೂರಿನಲ್ಲಿ ಮಿಸ್ಸಿಂಗ್‌ ಕೇಸ್‌ ದಾಖಲಿಸಿದ್ದರು. ಇದನ್ನ ಪರಿಶೀಲಿಸಿದ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಮೈಸೂರು ಪೊಲೀಸರು ನೀಡಿರುವ ಮಾಹಿತಿ ಹಾಗೂ ಇಲ್ಲಿ ಸಿಕ್ಕ ಡೆಡ್‌ ಬಾಡಿಗಳ ಬಗೆಗಿದ್ದ ಅಲ್ಪ ಮಾಹಿತಿ ಟ್ಯಾಲಿ ಆಗೋದನ್ನ ಗಮನಿಸಿದ್ದಾರೆ. ಬಳಿಕ ತನಿಖೆಗೆ ಇಳಿದಾಗ ಇದೊಂದು ಡಬಲ್‌ ಮರ್ಡರ್‌ ಪ್ರಕರಣ ಅನ್ನೋದು ಬಯಲಿಗೆ ಬಂದಿತ್ತು.

ಆರೋಪಿ ಸಾಗರ್‌ ಸಿಕ್ಕಿಬಿದ್ದದ್ದು ಹೇಗೆ?
ಇನ್ನೂ ಶವಗಳು ಯಾರದ್ದು ಅನ್ನೋ ವಿಚಾರ ಬಯಲಾದಾಗ ಪ್ರಕರಣದ ಹಿಂದೆ ಒಬ್ಬ ಪ್ರಿಯಕರನ ಕೈವಾಡ ಇರೋದು ಪತ್ತೆಯಾಗಿದೆ. ಹಿಂದೆ ಮೈಸೂರಿನಲ್ಲಿ ವಾಸವಿದ್ದ ವಿಜಯಪುರ ನಗರದ ಸಾಯಿ ಪಾರ್ಕ್‌ ನಿವಾಸಿ ಸಾಗರ್‌ ನಾಯಕ್‌ ಇದೆ ಶೃತಿಯನ್ನ ಫೇಸ್ಬುಕ್‌ ಮೂಲಕ ಪರಿಚಯ ಮಾಡಿಕೊಂಡಿದ್ದ. ಬಳಿಕ ಆಕೆಯ ಜೊತೆಗೆ ದೈಹಿಕ ಸಂಬಂಧವನ್ನು ಬೆಳೆಸಿದ್ದ. ಆತನೇ ಈಗ ಈ ಜೋಡಿ ಕೊಲೆ ಹಿಂದಿನ ಕಿಂಗ್‌ ಪಿನ್‌ ಅನ್ನೋದು ಗೊತ್ತಾಗಿದೆ. ಸಾಗರ್‌ ನನ್ನ ಬಂಧಿಸಿ ವಿಚಾರಿಸಿದಾಗ ಇಡೀ ಕೋಲ್ಡ್‌ ಬ್ಲಡ್‌ ಮರ್ಡರ್‌ ಪ್ರಕರಣ ಬಯಲಿಗೆ ಬಂದಿದೆ.

ಮಾಡದ ತಪ್ಪಿಗೆ ಬಲಿಯಾದ 13 ವರ್ಷದ ಬಾಲಕ
ಇಬ್ಬರ ನಡುವಿನ ಗಲಾಟೆ ಏನೋ ಗೊತ್ತಿಲ್ಲ. ಆದ್ರೆ ಕೇವಲ ಶೃತಿ ಹತ್ಯೆಯ ಕೇಸ್‌ ಗೆ ಆಕೆ ಮಗ ಇಂದಿಲ್ಲ ನಾಳೆ ಸಾಕ್ಷಿಯಾದಾನು ಅಂತ ಸಾಗರ್‌ ಕೊಂದು ಹಾಕಿರೋದು ಆತನ ಕ್ರೂರತೆಗೆ ಸಾಕ್ಷಿಯಾಗಿದೆ. ತಾಯಿಯ ಶವದ ಮುಂದೆಯೇ ಆಕೆಯ ಮಗನನ್ನ ಹತ್ಯೆ ಮಾಡಿದ ಪಾಪಿ ಸಾಗರ್‌ ಇಬ್ಬರ ಹೆಣಗಳನ್ನು ಯಾವುದೇ ಹೆದರಿಕೆ ಇಲ್ಲದಂತೆ ಡಿಸ್ಪೋಜ್‌ ಮಾಡಿದ್ದ. ಕೊನೆಗು ವರ್ಷದ ಬಳಿಕ ಸಿಕ್ಕಿಬಿದ್ದಿದ್ದಾನೆ.

click me!