ತಾಲೂಕಿನ ಮತ್ತೊಂದು ಅಶ್ಲೀಲ ವಿಡಿಯೋವೊಂದು ಸಾಮಾಜಿಕ ಜಾಲತಾಣ ವ್ಯಾಟ್ಸಪ್ ಗ್ರೂಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಯುವತಿಯೋರ್ವಳು ಬೀಸಿದ ಬಲೆಗೆ ಯುವಕ ಬಿದ್ದು ಮೋಸ ಹೋಗಿದ್ದಾನೆ ಎನ್ನಲಾಗಿದೆ.
ತೀರ್ಥಹಳ್ಳಿ (ಜು.6) : ತಾಲೂಕಿನ ಮತ್ತೊಂದು ಅಶ್ಲೀಲ ವಿಡಿಯೋವೊಂದು ಸಾಮಾಜಿಕ ಜಾಲತಾಣ ವ್ಯಾಟ್ಸಪ್ ಗ್ರೂಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಯುವತಿಯೋರ್ವಳು ಬೀಸಿದ ಬಲೆಗೆ ಯುವಕ ಬಿದ್ದು ಮೋಸ ಹೋಗಿದ್ದಾನೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣ(Social media)ದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿರುವ ಯುವತಿ ಫೇಸ್‌ಬುಕ್(Facebook) ಮೂಲಕ ಸ್ಥಳೀಯ ಯುವಕನ ಮೊಬೈಲ್ ನಂಬರ್ ಸಂಗ್ರಹಿಸಿ, ಯುವಕನನ್ನು ಆಕರ್ಷಿಸುವ ಮೂಲಕ ಆತನ ನಗ್ನಚಿತ್ರ(Nude photo)ವನ್ನು ಚಿತ್ರಿಸಿ, ಮೋಸದ ಬಲೆಗೆ ಬೀಳಿಸಿರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಆರು ತಿಂಗಳ ಹಿಂದೆ ನಡೆದಿರುವ ಈ ಪ್ರಕರಣದಲ್ಲಿರುವ ಯುವಕ ಸ್ಥಳೀಯನಾಗಿದ್ದು, ಪ್ರಸ್ತುತ ವಿದೇಶದಲ್ಲಿ ನೌಕರಿಯಲ್ಲಿ ಇದ್ದಾನೆ ಎನ್ನಲಾಗಿದೆ. ವಿಡಿಯೋದಲ್ಲಿರುವ ಯುವತಿಯು ಯುವಕನನ್ನು ಬೆದರಿಸಿ, ಆತನಿಂದ ಈಗಾಗಲೇ ಸಾಕಷ್ಟುಹಣವನ್ನು ಪೀಕಿದ್ದಾಳೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಶಿವಮೊಗ್ಗ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಇಬ್ಬರು ಪುರಷರು ಸೇರಿ ಮೂವರು ಮಹಿಳೆಯರು ವಶಕ್ಕೆ
ಈಗಾಗಲೇ ತಾಲೂಕಿನಲ್ಲಿ ಇಂಥದೇ ಎರಡು ಪ್ರಕರಣಗಳು ನಡೆದು ಜನರ ನೆಮ್ಮದಿಗೆ ಭಂಗ ಉಂಟಾಗಿದೆ. ಇದೀಗ ಇನ್ನೊಂದು ಪ್ರಕರಣ ಹೊರಬಂದಿರುವುದು ಜನರನ್ನು ಚಿಂತೆಗೀಡುಮಾಡಿದೆ. ಇಂಥ ಮೋಸದ ಜಾಲಗಳಿಗೆ ಸಿಲುಕದಂತೆ ಹದಿಹರೆಯದವರಲ್ಲಿ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯೂ ಎದುರಾಗಿದೆ.
ತೀರ್ಥಹಳ್ಳಿ: ಪ್ರತೀಕ್‌ಗೌಡ ಕೃತ್ಯ ವಿಚಾರದಲ್ಲಿ ಶಾಸಕ ಆರಗ ಜ್ಞಾನೇಂದ್ರ ಕ್ಷಮೆ ಕೋರಲಿ, ಕಿಮ್ಮನೆ ರತ್ನಾಕರ್